ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಹಾಪ್‌ಕಾಮ್ಸ್ ಮಾವು ಮೇಳಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ಮೇ 15 : ವಿವಿಧ ಬಗೆಯ ಮಾವಿನ ಹಣ್ಣುಗಳ ರುಚಿ ನೋಡಲು ಹಾಪ್‌ಕಾಮ್ಸ್‌ಗೆ ಭೇಟಿ ನೀಡಬಹುದಾಗಿದೆ. ಬೆಂಗಳೂರಿನಲ್ಲಿ ಮಾವು ಮತ್ತು ಹಲಸಿನ ಮೇಳಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಗ್ರಾಹಕರನ್ನು ಸೆಳೆಯಲು ಬೆಳಗ್ಗೆ 6.30ಕ್ಕೆ ಹಾಪ್‌ಕಾಮ್ಸ್‌ಅನ್ನು ತೆರೆಯಲಾಗುತ್ತಿದೆ.

ಹಾಪ್‌ಕಾಮ್ಸ್ ವಾರ್ಷಿಕವಾಗಿ ಆಯೋಜಿಸುವ ಮಾವು ಮತ್ತು ಹಲಸಿನ ಮೇಳಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಬೆಂಗಳೂರಿನ 250ಕ್ಕೂ ಹೆಚ್ಚು ಹಾಪ್‌ಕಾಮ್ಸ್‌ಗಳಲ್ಲಿ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣುಗಳು ಶೇ 10ರ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

Hopcoms

ರೈತರಿಂದ ನೇರವಾಗಿ ಖರೀದಿ ಮಾಡಿದ ಮಾವಿನ ಹಣ್ಣುಗಳು ಮೇಳದಲ್ಲಿ ಲಭ್ಯವಿದ್ದು, ಇವು ಕಾರ್ಬೈಡ್ ಮುಕ್ತವಾಗಿವೆ. ಗ್ರಾಹಕರು ಮೇಳಕ್ಕೆ ಭೇಟಿ ಕೊಟ್ಟು ಆರೋಗ್ಯಯುಕ್ತವಾದ ರಸಭರಿತ ಮಾವಿನ ಹಣ್ಣುಗಳನ್ನು ಖರೀದಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಬೆಳಗ್ಗೆ 6 ಗಂಟೆಗೆ ಹಾಪ್ ಕಾಮ್ಸ್ ಓಪನ್]

15 ಬಗೆಯ ಹಣ್ಣುಗಳು : ಮಾವು ಮೇಳಕ್ಕೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಂದ ಮಾವಿನ ಹಣ್ಣು ಬಂದಿದೆ. ಈ ಬಾರಿ ರಾಮನಗರದಿಂದ ಹೆಚ್ಚು ಹಣ್ಣುಗಳು ಬಂದಿವೆ. ಕೋಲಾರದಲ್ಲಿ ಫಸಲು ಕಡಿಮೆ ಇದೆ, ಹಣ್ಣುಗಳು ವಿಳಂಬವಾಗಿ ಮಾರುಕಟ್ಟೆಗೆ ಬರಲಿವೆ. ಬಾದಾಮಿ, ರಸಪುರಿ, ತೋತಪುರಿ ಸೇರಿದಂತೆ 15ಕ್ಕೂ ಹೆಚ್ಚಿನ ತಳಿಗಳು ಹಣ್ಣುಗಳು ಮೇಳದಲ್ಲಿ ಲಭ್ಯವಿವೆ. [ಹಾಪ್ ಕಾಮ್ಸ್ ವ್ಯಾಪಾರ ಕುಂಠಿತಕ್ಕೆ ಕಾರಣವೇನು?]

ದರಗಳು : ಮಾವು ಮೇಳದಲ್ಲಿ ಗ್ರಾಹಕರಿಗೆ ಶೇ 10ರ ರಿಯಾಯಿತಿಯಲ್ಲಿ ಹಣ್ಣುಗಳು ಮಾರಾಟಕ್ಕೆ ಲಭ್ಯವಿದೆ. ಬಾದಾಮಿಗೆ 93 ರೂ., ರಸಪುರಿಗೆ 63, ಮಲ್ಲಿಕಾ 81, ಮಲಗೋವಾ 83 ರೂ. ದರವಿದೆ. ಗ್ರಾಹಕರ ಅನುಕೂಲಕ್ಕಾಗಿ ಬೆಳಗ್ಗೆ 6 ಗಂಟೆಗೆ ಹಾಪ್‌ಕಾಮ್ಸ್‌ಗಳನ್ನು ತೆರೆಯಲಾಗುತ್ತದೆ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

English summary
Bengaluru : Hopcoms mango mela begins on Friday, May 15, 2015. As many as 15 varieties of mangoes are available at 250 retail outlets of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X