ಭಾರತದ ಬಾಸ್ಮತಿ, ಬಾಸ್ಮತಿಯೇತರ ಅಕ್ಕಿ ರಫ್ತಿನಲ್ಲಿ ಶೇ.7.37 ಏರಿಕೆ

ಬೆಂಗಳೂರು, ಡಿಸೆಂಬರ್ 29: ಭಾರತದಲ್ಲಿ ರಫ್ತು ಮೇಲಿನ ಹಲವು ನಿರ್ಬಂಧಗಳ ಹೊರತಾಗಿಯೂ ಈ ವರ್ಷ ಬಾಸ್ಮತಿ ಹಾಗೂ ಬಾಸ್ಮತಿ ಅಲ್ಲ ಅಕ್ಕಿ ರಫ್ತು ಪ್ರಮಾಣ ಏರಿಕೆ ಕಂಡಿದೆ.

ಲಭ್ಯ ಉದ್ಯಮದ ಅಂಕಿ ಅಂಶಗಳ ಪ್ರಕಾರ, ಸಾಗಣೆಯ ಮೇಲಿನ ನಿರ್ಬಂಧಗಳ ಹೊರತಾಗಿಯೂ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತವು ಬಾಸ್ಮತಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ರಫ್ತು ಶೇ.7.37 ರಷ್ಟು ಹೆಚ್ಚಾಗಿರುವುದು ತಿಳಿದು ಬಂದಿದೆ. 126.97 ಲಕ್ಷ ಟನ್‌ಗಳಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ರಫ್ತು 118.25 ಲಕ್ಷ ಟನ್‌ಗಳಷ್ಟಿತ್ತು.

ಕೆಲವು ಬಗೆಯ ಅಕ್ಕಿಯ ರಫ್ತಿನ ಮೇಲೆ ನಿರ್ಬಂಧಗಳ ಹೊರತಾಗಿಯೂ, ಒಟ್ಟಾರೆ ರಫ್ತು ಪ್ರಮಾಣ ಹೆಚ್ಚಾಗಿದೆ. ಈವರೆಗಿನ ರಫ್ತುಗಳ ಪೈಕಿ ಏರಿಕೆ ಕಂಡ ಬಾಸ್ಮತಿ ಅಕ್ಕಿ 2022-23ರ ಆರ್ಥಿಕ ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 24.97 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕೇವಲ 21.59 ಲಕ್ಷ ಟನ್‌ಗಳಷ್ಟು ರಫ್ತು ಮಾಡಲಾಗಿತ್ತು. ಎಂದು ಅಖಿಲ ಭಾರತ ರಫ್ತುದಾರರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಸೇಥಿಯಾ ಪಿಟಿಐಗೆ ತಿಳಿಸಿದ್ದಾರೆ.

Basmati and other rice export 7.37% increase current Economic year by India

ಬಾಸ್ಮತಿ ಅಲ್ಲದ ಅಕ್ಕಿ 102 ಲಕ್ಷ ಟನ್‌ಗೆ ಏರಿಕೆ

ಹೋಲಿಸಬಹುದಾದ ಅವಧಿಯಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತು 96.66 ಲಕ್ಷ ಟನ್‌ಗಳಿಂದ 102 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಬಾಸ್ಮತಿ ಅಕ್ಕಿಯನ್ನು ಮುಖ್ಯವಾಗಿ ಅಮೆರಿಕ (ಯುಎಸ್), ಯೂರೋಪ್ ಮತ್ತು ಸೌದಿ ಅರೇಬಿಯಾದ ಸಾಂಪ್ರದಾಯಿಕ ಮಾರುಕಟ್ಟೆಗಳಿಗೆ ರವಾನಿಸಲಾಗಿದೆ. ಆದರೆ ಬಾಸ್ಮತಿ ಅಲ್ಲದ ಅಕ್ಕಿಯನ್ನು ಹೆಚ್ಚಾಗಿ ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲಾಗಿದೆ ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲಿ, ಸರ್ಕಾರವು ಒಡೆದ ಅಕ್ಕಿಯನ್ನು ರಫ್ತು ಮಾಡುವುದನ್ನು ನಿಷೇಧಿಸಿತ್ತು ಮತ್ತು ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆ ಏರಿಕೆಯನ್ನು ತಡೆಯಲು ಬಾಸ್ಮತಿ ಅಲ್ಲದ ಅಕ್ಕಿಯ ಮೇಲೆ 20 ಪ್ರತಿಶತ ಕಸ್ಟಮ್ಸ್ ಸುಂಕವನ್ನು ಸಹ ವಿಧಿಸಿತ್ತು. ಕಸ್ಟಮ್ಸ್ ಸುಂಕ ವಿಧಿಸಿರುವುದರಿಂದ ಬಾಸ್ಮತಿ ಅಲ್ಲದ ಅಕ್ಕಿ ರಫ್ತಿನ ಮೇಲೆ ಪರಿಣಾಮ ಬೀರಿಲ್ಲ ಎಂದು ಸೇಥಿಯಾ ಹೇಳಿದ್ದಾರೆ. ಉತ್ಪಾದನೆಯಲ್ಲಿನ ಕುಸಿತದ ಕಾರಣದಿಂದ ಭುಗಿಲೆದ್ದ ಬೆಲೆಗಳನ್ನು ಪರಿಶೀಲಿಸಲು ಸರ್ಕಾರವು ಅಕ್ಕಿ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿತು.

Basmati and other rice export 7.37% increase current Economic year by India

ಕೇಂದ್ರ ಕೃಷಿ ಸಚಿವಾಲಯದ ಅಂದಾಜು ಮಾಹಿತಿಯ ಪ್ರಕಾರ, ಅಕ್ಕಿ ಉತ್ಪಾದನೆಯು ಹಿಂದಿನ ಖಾರಿಫ್ ಋತುವಿನಲ್ಲಿ 111.76 ಮಿಲಿಯನ್ ಟನ್‌ಗಳಿಂದ 2022-23 ಬೆಳೆ ವರ್ಷದ (ಜುಲೈ-ಜೂನ್) ಖಾರಿಫ್ ಋತುವಿನಲ್ಲಿ 104.99 ಮಿಲಿಯನ್ ಟನ್‌ಗಳಿಗೆ ಕುಸಿಯುತ್ತದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+