ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಬಂಟ್ವಾಳ ಕೃಷಿಕ, ವಿಶೇಷತೆ ಏನು?, ಇಲ್ಲಿದೆ ವಿವರ

ಬಂಟ್ವಾಳ ತಾಲೂಕಿನ ಕೋಮಲೆ ಗಣಪತಿ ಭಟ್ ಎನ್ನುವವರು ಮಲ್ಟಿ ಟ್ರೀ ಬೈಕ್‌ ಆವಿಷ್ಕರಿಸಿದ್ದಾರೆ. ಹಾಗಾದರೆ ಈ ಯಂತ್ರದ ವಿಶೇಷತೆ ಏನೆಂದು ಇಲ್ಲಿ ತಿಳಿಯಿರಿ.

ಮಂಗಳೂರಿ, ಫೆಬ್ರವರಿ, 27: ನಗರಗಳಲ್ಲಿ ಆಳಾಗಿರುವ ಬದಲು ಊರಿಗೆ ಹೋಗಿ ಕೃಷಿ ಮಾಡಿ ದೊರೆಯಾಗಿ ಬದುಕುತ್ತೇನೆ ಅನ್ನುವುದು ತುಂಬಾ ಜನರ ಅಭಿಪ್ರಾಯವಾಗಿರುತ್ತದೆ. ಆದರೆ ಕೆಲವರು ಕೃಷಿ ಮಾಡಲು ಕೂಲಿಯಾಳುಗಳ ಸಮಸ್ಯಯಿಂದ ಮತ್ತೆ ನಗರದ ಕಡೆ ಮುಖ ಮಾಡುತ್ತಾರೆ. ಈ ಸಮಸ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಮಾನ್ಯ ಕೃಷಿಕ ಬಗೆಹರಿಸಿದ್ದು, ಇದೀಗ ಈ ಕೃಷಿಕ ತಯಾರಿಸಿದ ಮರವೇರುವ ಯಂತ್ರಕ್ಕೆ ಎಲ್ಲೆಡೆ ಬೇಡಿಕೆ ಬಂದಿದೆ.

ಯಂತ್ರದ ಮೇಲೆಯೇ ಕೂತು ಮರವೇರುತ್ತಿರುವ ಈ ಕೃಷಿಕನನ್ನು ಒಮ್ಮೆ ನೋಡಿದರೆ ನೀವು ಆಶ್ಚರ್ಯಗೊಳ್ಳುವುದಲ್ಲಿ ಯಾವುದೇ ಅನುಮಾನವಿಲ್ಲ. ಈ ಯಂತ್ರವನ್ನು ಆವಿಷ್ಕರಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಮಲೆ ಗಣಪತಿ ಭಟ್ ಎನ್ನುವವರಾಗಿದ್ದಾರೆ. ಇವರು ತಯಾರಿಸಿದ ಈ ಯಂತ್ರಕ್ಕೆ ಇದೀಗ ದಕ್ಷಿಣ ಭಾರತದಾದ್ಯಂತ ಬೇಡಿಕೆ ಹೆಚ್ಚಾಗಿದೆ.

Bantwal Farmer invented multi tree bike

ಮರವೇರುವ ಯಂತ್ರಕ್ಕೆ ಭಾರಿ ಬೇಡಿಕೆ

ಗಣಪತಿ ಭಟ್‌ ಮೊದಲು ಅಡಿಕೆ ಮರವನ್ನು ಏರುವ ಯಂತ್ರವನ್ನು ಆವಿಷ್ಕರಿಸಿದ್ದು, ಈಗ ಎಲ್ಲಾ ಮರವೇರುವ ವಿನೂತನ ಯಂತ್ರ ಅವಿಷ್ಕಾರ ಮಾಡಿದ್ದಾರೆ. ಈ ಯಂತ್ರದ ಮೂಲಕ ಯಾವುದೇ ಅಡೆತಡೆಯಿಲ್ಲದೇ ಮರದ ತುದಿಯನ್ನು ತಲುಪಬಹುದಾಗಿದೆ. ಈ ಯಂತ್ರ ಸುರಕ್ಷತೆಯಲ್ಲಿ ಅತ್ಯುತ್ತಮವಾಗಿದೆ. ತೆಂಗು, ಅಡಿಕೆ, ಸಿಲ್ವರ್ ಮರ, ಮಾವಿನ ಮರ, ಹಲಸಿನ ಮರ ಸೇರಿದಂತೆ ಎಲ್ಲಾ ಮರಗಳನ್ನು ಈ ಟ್ರೀ ಬೈಕ್ ಬಳಸಿ ಏರಬಹುದಾಗಿದೆ.

ಮಲ್ಟಿ ಟ್ರೀ ಬೈಕ್‌ನ ತೂಕದ ವಿವರ

ಮರದಲ್ಲೇ ಯಂತ್ರ ಸುತ್ತಲೂ ತಿರುಗಲಿದೆ. ಈ ಯಂತ್ರಕ್ಕೆ ಒಂದು ಲೀಟರ್ ಪೆಟ್ರೋಲ್‌ ಹಾಕಿದರೆ 80 ಮರಗಳನ್ನು ಏರಬಹುದಾಗಿದೆ. 45 ಕೆಜಿ ಭಾರವಿರುವ ಟ್ರೀ ಬೈಕ್ ಅನ್ನು ಟ್ರಾಲಿ ಮೂಲಕ ಆರಾಮಾಗಿ ಕೊಂಡುಹೋಗಬಹುದಾಗಿದೆ. ತೆಂಗಿನ ಮರದಲ್ಲಿ ಈ ಯಂತ್ರದ ಮೇಲೆ ನಿಂತು ಕಾಯಿಗಳನ್ನು ಕೀಳಬಹುದಾಗಿದೆ. ಸುರಕ್ಷತಾ ಗುಣಮಟ್ಟವನ್ನು ಹೊಂದಿರುವ ಈ ಯಂತ್ರದ ಪರೀಕ್ಷಾ ಪ್ರಯತ್ನವನ್ನು ಸ್ವತಃ ಮರದ ಮೇಲೆ ‌ನಿಂತು ಗಣಪತಿ ಭಟ್ ಅವರೇ ಮಾಡಿ ತೋರಿಸಿದ್ದಾರೆ.

ಮಲ್ಟಿ ಟ್ರೀ ಬೈಕ್‌ನ ದರದ ವಿವರ

ಈ ಟ್ರೀ ಬೈಕ್‌ಗೆ ಈಗ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬಂದಿದೆ. ಇದನ್ನು ಬಳಸಿ 5 -15 ಇಂಚು ದಪ್ಪವಿರುವ ಮರವನ್ನು ಏರಬಹುದಾಗಿದ್ದು, ಸದ್ಯ ಈ ಯಂತ್ರಕ್ಕೆ ಕರ್ನಾಟಕ ಮಾರುಕಟ್ಟೆಯಲ್ಲಿ 1,55,000 ರೂಪಾಯಿ ದರವಿದೆ.

Bantwal Farmer invented multi tree bike

ಕರ್ನಾಟಕ ಸರ್ಕಾರ ಈ ಯಂತ್ರ ಖರೀದಿಸುವ ರೈತರಿಗೆ 43 ಸಾವಿರ ರೂಪಾಯಿ ಸಬ್ಸಿಡಿಯನ್ನು ನೀಡಲಿದೆ. ಹೀಗಾಗಿ‌ ಈ ಯಂತ್ರ 1,12,000 ರೂಪಾಯಿ ಕೊಟ್ಟರೆ ಕೃಷಿಕರ ಕೈ ಸೇರಲಿದೆ. ಈ ಯಂತ್ರ ಬಳಸುವುದರಿಂದ ಕೆಲಸವೂ ಬೇಗ ಮುಗಿಯುತ್ತದೆ ಎಂದು ಮಾರ್ಕೆಟಿಂಗ್ ಮಾಡುತ್ತಿರುವ ಇಂಜಿನಿಯರ್ ಶರ್ವಿನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕೂಲಿಕಾರರ ಸಮಸ್ಯೆ ಎಂದು ಕೃಷಿಯಿಂದ ಹಿಂಜರಿಯುವ ಯುವ ಕೃಷಿಕರಿಗೆ ಈ ಟ್ರೀ ಬೈಕ್ ನೆರವಾಗಲಿದೆ. ಒಬ್ಬ ಸಹಾಯಕನೊಂದಿಗೆ ಇಡೀ ತೋಟದ ಕೆಲಸವನ್ನು ಮಾಲೀಕನೇ ಮಾಡಬಹುದು ಅನ್ನುವುದು ಟ್ರೀ ಬೈಕ್ ಬಳಕೆದಾರರ ಅಭಿಪ್ರಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+