2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ

ಧಾರವಾಡ, ಜೂನ್ 20; ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೆರವು ಪಡೆದು ಬಾಳೆ ಬೇಸಾಯ ಮಾಡಿದ ರೈತರೊಬ್ಬರು ಸುಮಾರು 40 ಟನ್ ಇಳುವರಿ ಪಡೆದು, 3 ಲಕ್ಷ ರೂ. ಗಳಿಗೂ ಅಧಿಕ ಆದಾಯವನ್ನು ಗಳಿಸಿದ್ದಾರೆ.

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತ ತಿಪ್ಪಣ್ಣ ಕಲ್ಲಪ್ಪ ತಿರ್ಲಾಪುರ ಎರಡು ಎಕರೆ ಭೂಮಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೆರವು ಪಡೆದು ಸುಮಾರು 40 ಟನ್ ಇಳುವರಿ ಪಡೆದಿದ್ದಾರೆ.

ತಮ್ಮ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿಪಡಿಸಲು ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ನೆರವು ಪಡೆದಿದ್ದಾರೆ.

Banana Cultivation Dharwad Farmer Get Profit

ಕೂಲಿ ವೆಚ್ಚವಾಗಿ 78 ಸಾವಿರ ರೂ. ಹಾಗೂ ಸಾಮಗ್ರಿ ವೆಚ್ಚವಾಗಿ 27 ಸಾವಿರ ರೂ.ಗಳ ಅನುದಾನದ ನೆರವು ಪಡೆದರು. 283 ಮಾನವ ದಿನಗಳನ್ನು ಸೃಜಿಸಿದರು. ಪ್ರಸಕ್ತ ಬಾಳೆಯು ಸುಮಾರು 40 ಟನ್ ಫಸಲು ನೀಡಿದೆ.

"ಬಾಳೆ ಮಾರಾಟದಿಂದ ಸುಮಾರು 3 ಲಕ್ಷದ 20 ಸಾವಿರ ರೂ. ಆದಾಯ ಗಳಿಸಿದ್ದಾರೆ" ಎಂದು ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ ಮಾಹಿತಿ ನೀಡಿದ್ದಾರೆ.

ಕೊರೊನಾ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ. ಬಹು ವಾರ್ಷಿಕ ಹಣ್ಣು, ಹೂವಿನ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ.

Banana Cultivation Dharwad Farmer Get Profit

ಕಳೆದ ಸಾಲಿನಲ್ಲಿ ನಿಗದಿತಗಿಂತ ಶೇ 30 ರಷ್ಟು ಅಧಿಕ ಪ್ರಗತಿ ಸಾಧಿಸಲಾಗಿದೆ. ಈ ಬಾರಿ ಶೇ 200 ರಷ್ಟು ಅಧಿಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ರೈತರು ಹತ್ತಿರದ ತೋಟಗಾರಿಕೆ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+