Arecanut and Copra Price: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕೊಬ್ಬರಿ ಧಾರಣೆ
ರಾಶಿ ಕೆಂಪಡಕೆ ಕ್ವಿಂಟಾಲ್‌ಗೆ 55000 ರೂಪಾಯಿ ಮುಟ್ಟಿದ ನಂತರ ಕುಸಿತ ಕಂಡಿದ್ದ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ಸದ್ಯ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 45,000 - 48,000 ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಮಂಗಳವಾರ ರಾಜ್ಯದ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಚಿತ್ರದುರ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 45-47 ಸಾವಿರದ ಆಸುಪಾಸಿನಲ್ಲಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 40,159 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 47,221 ರೂಪಾಯಿಗಳಾಗಿತ್ತು. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 45,269 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 47,509 ರೂಪಾಯಿ ಆಗಿತ್ತು.
ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 32,290 ರೂಪಾಯಿ ಇದ್ದರೆ ಗರಿಷ್ಠ 47,389 ರೂಪಾಯಿ ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 44,099 ರೂಪಾಯಿ ಇದ್ದರೆ ಗರಿಷ್ಠ 46,789 ರೂಪಾಯಿ ಆಗಿತ್ತು.
ನವೆಂಬರ್ 7 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹45,399 | ₹47,500 | ₹46,394 |
| 2 | ಬಂಟ್ವಾಳ | ಹಳೆಯ ವೆರೈಟಿ | ₹43,500 | ₹48,500 | ₹46,500 |
| 3 | ಚಿತ್ರದುರ್ಗ | ಕೆಂಪು ಗೋಟು | ₹30,000 | ₹30,400 | ₹30,200 |
| 4 | ಚಿತ್ರದುರ್ಗ | ರಾಶಿ | ₹44,929 | ₹45,389 | ₹45,179 |
| 5 | ಗೋಣಿಕೊಪ್ಪಲು | ಅಡಿಕೆ-ಸಿಪ್ಪೆ | ₹4,000 | ₹4,800 | ₹4,500 |
| 6 | ಹೊನ್ನಳ್ಳಿ | ರಾಶಿ | ₹46,819 | ₹46,819 | ₹46,819 |
| 7 | ಕಾರ್ಕಳ | ಹೊಸ ವೆರೈಟಿ | ₹25,000 | ₹36,500 | ₹30,000 |
| 8 | ಕುಮಟಾ | ಫ್ಯಾಕ್ಟರಿ | ₹10,099 | ₹24,299 | ₹23,579 |
| 9 | ಕುಮಟಾ | ಹಳೆ ಚಾಲಿ | ₹39,809 | ₹40,199 | ₹40,019 |
| 10 | ಸಾಗರ | ಚಾಲಿ | ₹29,499 | ₹38,899 | ₹37,199 |
| 11 | ಸಾಗರ | ಕೆಂಪು ಗೋಟು | ₹28,299 | ₹34,699 | ₹33,179 |
| 12 | ಸಾಗರ | ರಾಶಿ | ₹32,290 | ₹47,389 | ₹46,899 |
| 13 | ಶಿವಮೊಗ್ಗ | ಬೆಟ್ಟೆ | ₹45,009 | ₹52,952 | ₹52,750 |
| 14 | ಶಿವಮೊಗ್ಗ | ರಾಶಿ | ₹40,159 | ₹47,221 | ₹45,559 |
| 15 | ಸಿದ್ದಾಪುರ | ಚಾಲಿ | ₹37,609 | ₹40,239 | ₹38,699 |
| 16 | ಸಿದ್ದಾಪುರ | ರಾಶಿ | ₹44,099 | ₹46,789 | ₹45,809 |
| 17 | ಶಿರಸಿ | ರಾಶಿ | ₹45,269 | ₹47,509 | ₹46,044 |
| 18 | ಯಲ್ಲಾಪುರ | ಕೋಕಾ | ₹17,999 | ₹31,999 | ₹28,899 |
| 19 | ಯಲ್ಲಾಪುರ | ರಾಶಿ | ₹45,900 | ₹54,815 | ₹49,809 |
ಸ್ಥಿರತೆ ಕಾಯ್ದುಕೊಂಡ ಕೊಬ್ಬರಿ ಧಾರಣೆ
ಮಂಗಳವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 7,500 ರೂಪಾಯಿ ಇದ್ದರೆ ಗರಿಷ್ಠ 8,600 ರೂಪಾಯಿಗೆ ಮಾರಾಟವಾಗಿದೆ.
ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 8,200 ರೂಪಾಯಿಗೆ ಮಾರಾಟವಾಗಿದ್ದು, ಹುಳಿಯಾರಿನಲ್ಲಿ 8,000 ರೂಪಾಯಿ ಮತ್ತು ಸಿರಾ ಮಾರುಕಟ್ಟೆಯಲ್ಲಿ 8,000 ರೂಪಾಯಿಗೆ ಮಾರಾಟವಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹7,500 | ₹8,600 | ₹8,200 |
| 2 | ತುರುವೇಕೆರೆ | ಕೊಬ್ಬರಿ | ₹8,200 | ₹8,200 | ₹8,200 |
| 3 | ಅರಸೀಕೆರೆ | ಕೊಬ್ಬರಿ | ₹7,500 | ₹8,430 | ₹8,185 |
| 4 | ಹುಳಿಯಾರ್ | ಬಾಲ್ | ₹7,900 | ₹8,100 | ₹8,000 |
| 5 | ಸಿರಾ | ಸಣ್ಣ | ₹8,000 | ₹8,000 | ₹8,000 |
| 6 | ಕೆ.ಆರ್.ಪೇಟೆ | ಬೇರೆ | ₹8,408 | ₹8,408 | ₹8,408 |












Click it and Unblock the Notifications