ಚಿತ್ರಗಳಲ್ಲಿ : ಭಾರಿ ಮಳೆಗೆ ಬೆಚ್ಚಿದ ಆಂಧ್ರಪ್ರದೇಶ ಜನತೆ
ಹೈದರಾಬಾದ್, ಅ.28: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಅರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇದುವರೆಗೆ ಮಳೆಗೆ ಬಲಿಯಾದವರ ಸಂಖ್ಯೆ 50 ದಾಟಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮಳೆ ಪ್ರವಾಹದಿಂದ ಸುಮಾರು 8 ಲಕ್ಷ ಹೆಕ್ಟೇರ್ ಗೂ ಅಧಿಕ ಬೆಳೆ ನಾಶವಾಗಿದ್ದು, ಸುಮಾರು 1 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ನಿರಾಶ್ರಿತರಿಗಾಗಿ 225 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆದಿದೆ.
ಕೈಗೆ ಬಂದಿದ್ದ ಹತ್ತಿ ಬೆಳೆ ಹಾಗೂ ಭತ್ತ ಸಂಪೂರ್ಣವಾಗಿ ನಾಶವಾಗಿದ್ದು, ನಷ್ಟದ ಅಂದಾಜು ಸಾವಿರಾರು ಕೋಟಿಗಳಷ್ಟಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್)ಯ 19 ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಅತ್ಯಂತ ದಯನೀಯ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶವೆಂದರೆ ಶ್ರೀಕಾಕುಳಂ ಜಿಲ್ಲೆ, ಇಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಮೇರೆ ಮೀರಿದ ಪ್ರವಾಹ ಸಿಕ್ಕಿದ್ದ ನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ.
ಭಾರೀ ಮಳೆಯಿಂದ ಸಂತ್ರಸ್ತರಾಗಿರುವವರಿಗೆ ವೈದ್ಯಕೀಯ ನೆರವನ್ನೊದಗಿಸಲು 580 ವೈದ್ಯಕೀಯ ತಂಡಗಳನ್ನು ಸ್ಥಳದಲ್ಲಿ ಸಕ್ರಿಯಗೊಳಿಸಲಾಗಿದೆ. ಭಾರೀ ಮಳೆ ಸುಮಾರು 4047.50 ಕಿ.ಮೀ. ರಸ್ತೆಗೆ ಹಾನಿ ಎಸಗಿದ್ದು, ರಾಜ್ಯದಾದ್ಯಂತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ವಂಶಧಾರಾ, ಬಹುದಾ ಮುಂತಾದ ನದಿಗಳು ತುಂಬಿ ಹರಿಯುತ್ತಿವೆ. ಉತ್ತರದ ಕರಾವಳಿ ಜಿಲ್ಲೆಗಳಾದ ಶ್ರೆಕಾಕುಳಂ, ವಿಝಿಯಾನಗರಮ್ ಹಾಗೂ ವಿಶಾಖಪಟ್ಟಣಂಗಳಲ್ಲಿ ಭಾರೀ ಮಳೆ, ಸಾರಿಗೆ, ವಿದ್ಯುತ್ ಹಾಗೂ ಸಂವಹನಗಳನ್ನು ಸ್ಥಗಿತಗೊಳಿಸುವಂತೆ ಮಾಡಿದೆ. ಈ ಜಿಲ್ಲೆಗಳ ರೈಲ್ವೆ ಹಳಿಗಳಲ್ಲಿ ನೀರು ನಿಂತಿರುವ ಕಾರಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಕೆಲವೊಂದು ರೈಲುಗಳ ದಿಕ್ಕುಗಳನ್ನು ಬದಲಿಸಲಾಗಿದೆ.

ಶ್ರೀಕಾಕುಳಂ ಜಿಲ್ಲೆ
ವರುಣನ ಆರ್ಭಟಕ್ಕೆ ಅತ್ಯಂತ ಹಾನಿಗೊಳಗಾಗಿರುವ ಶ್ರೀಕಾಕುಳಂ, ಪ್ರಕಾಶಂ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಮತ್ತೆ ಮಳೆ ಭೀತಿ
ವಿಶಾಖಪಟ್ಟಣಂ ಹಾಗೂ ವಿಜಯವಾಡ ಜಿಲ್ಲೆಗಳಲ್ಲಿ ಇನ್ನೂ 48 ಗಂಟೆಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಸಂಪೂರ್ಣ ಸ್ಥಗಿತ
ವಿಶಾಖ ಪಟ್ಟಣಂ ಚುಚುಕೊಂಡ ಗ್ರಾಮದ ಮುನಗಪಕ ಮಂಡಲದಲ್ಲಿನ ದೃಶ್ಯ

ಬೆಳೆ ನಾಶ
ಮಳೆ ಪ್ರವಾಹದಿಂದ ಸುಮಾರು 8 ಲಕ್ಷ ಹೆಕ್ಟೇರ್ ಗೂ ಅಧಿಕ ಬೆಳೆ ನಾಶವಾಗಿದ್ದು, ಸುಮಾರು 1 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ವರುಣನ ಆರ್ಭಟ
ವಿಶಾಖಪಟ್ಟಣಂ ವಿಜಯವಾಡ ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸಂಪೂರ್ಣ ಬಂದ್
ಶ್ರೀಕಾಕುಳಂ ಹಾಗೂ ನಲ್ಗೊಂಡ ಜಿಲ್ಲೆಯ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ

ವಿಶಾಖಪಟ್ಟಣಂ
ವಿಶಾಖಪಟ್ಟಣಂನಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ

ವರುಣನ ಆರ್ಭಟ
ಶ್ರೀಕಾಕುಳಂ ಹಾಗೂ ನಲ್ಗೊಂಡ ಜಿಲ್ಲೆಯ ಮನೆಗಳಿಗೆ ನೀರು ನುಗ್ಗಿದ್ದು ಹಗಲು ರಾತ್ರಿ ನಿದ್ದೆಯಿಲ್ಲದೆ ಜನ ಜೀವ ಭಯದಿಂದ ಒದ್ದಾಡಿದ್ದಾರೆ.

ವರುಣನ ಆರ್ಭಟ
ಶ್ರೀಕಾಕುಳಂ, ಪ್ರಕಾಶಂ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ

ವರುಣನ ಆರ್ಭಟ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್)ಯ 19 ತಂಡಗಳು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ

ವರುಣನ ಆರ್ಭಟ
ಕೈಗೆ ಬಂದಿದ್ದ ಹತ್ತಿ ಬೆಳೆ ಹಾಗೂ ಭತ್ತ ಸಂಪೂರ್ಣವಾಗಿ ನಾಶವಾಗಿದ್ದು, ನಷ್ಟದ ಅಂದಾಜು ಸಾವಿರಾರು ಕೋಟಿಗಳಷ್ಟಾಗಿದೆ

ವರುಣನ ಆರ್ಭಟ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಅರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ












Click it and Unblock the Notifications