ಸಾವಿರಾರು ರೈತರ ಕೋಟ್ಯಂತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್
Recommended Video

ಮುಂಬೈ, ನವೆಂಬರ್ 21: ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಿಜ ಜೀವನದಲ್ಲೂ ನಾಯಕರಾಗಿ ಮೆರೆದಿದ್ದಾರೆ. ಅವರು ಸಾವಿರಾರು ರೈತರ ಬೆಳೆ ಸಾಲವನ್ನು ತೀರಿಸಿದ್ದಾರೆ.
ಉತ್ತರ ಪ್ರದೇಶದ 1356 ರೈತರ ಸುಮಾರು 4.05 ಕೋಟಿ ರೂಪಾಯಿ ಮೊತ್ತದ ರೈತರ ಬೆಳೆ ಸಾಲವನ್ನು ನಟ ಅಮಿತಾಬ್ ಬಚ್ಚನ್ ತೀರಿಸಿದ್ದಾರೆ. ಸಾಲ ತೀರಿಸಿರುವ ಮಾಹಿತಿಯನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ರೈತರಿಗೆ ಮುಂಬೈಗೆ ಬರಲು ವ್ಯವಸ್ಥೆಯನ್ನೂ ಅಮಿತಾಬ್ ಅವರು ಮಾಡಿದ್ದು, ರೈತರೊಂದಿಗೆ ಅಮಿತಾಬ್ ಬಚ್ಚನ್ ಮಾತುಕತೆ ನಡೆಸಲಿದ್ದಾರೆ. ಈ ಮುಂಚೆಯೂ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿದ್ದರು.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಮಿತಾಬ್ ಬಚ್ಚನ್ ಅವರು, ಈ ಕಾರ್ಯ ನನಗೆ ನೆಮ್ಮದಿ, ಸಂತಸ ತಂದಿದೆ. ಸಾಧನೆ ಮಾಡಿದ ಹೆಮ್ಮೆಯನ್ನು ಹುಟ್ಟುಹಾಕಿದೆ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ರೈತರಿಗೆ ಸಹಾಯ
ಈ ಹಿಂದೆ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರ ರೈತರ ಸಾಲ ಮನ್ನಾ ಮಾಡಿದ್ದರು. ಸುಮಾರು 350 ಜನ ರೈತರ ಸಾಲವನ್ನು ಅವರು ಮನ್ನಾ ಮಾಡಿದ್ದರು. ಕೆಲವು ಗ್ರಾಮಗಳನ್ನೂ ಬಚ್ಚನ್ ಕುಟುಂಬ ದತ್ತು ತೆಗೆದುಕೊಂಡು ಸುದ್ದಿಯಾಗಿತ್ತು.

ನಾನಾ ಪಟೇಕರ್ ಕೂಡ ಸಹಾಯ
ಈ ಹಿಂದೆ ಬಾಲಿವುಡ್ ನಟ ನಾನಾ ಪಟೇಕರ್ ಸಹ ರೈತರಿಗೆ ನೆರವಾಗಿದ್ದರು. ಬರದಿಂದ ಒದ್ದಾಡಿದ್ದ ಮಹಾರಾಷ್ಟ್ರ ರೈತರಿಗೆ ಆರ್ಥಿಕ ಸಹಾಯ ಮಾಡಿದ್ದರು ನಾನಾ.

ಅಕ್ಷಯ್ ಕುಮಾರ್ ಸಹಾಯ
ನಟ ಅಕ್ಷಯ್ ಕುಮಾರ್ ಅವರು ಮಹಾರಾಷ್ಟ್ರದ ರೈತರು ನೀರಿಲ್ಲದೆ ವಿಷಮ ಪರಿಸ್ಥಿತಿಯಲ್ಲಿದ್ದಾಗ ಸುಮಾರು ಒಂದು ಕೋಟಿ ಹಣವನ್ನು ನೀರಿಗಾಗಿ ಅಕ್ಷಯ್ ಕುಮಾರ್ ಅವರು ನೀಡಿದ್ದರು.

ಅಮೀರ್ ಖಾನ್ ರ ವಾಟರ್ ಕಪ್
ಅಮೀರ್ ಖಾನ್ ಅವರ ವಾಟರ್ ಕಪ್ ನೀರು ಸಂರಕ್ಷಿಸುವ ಅತ್ಯುತ್ತಮ ಕಾರ್ಯಕ್ರಮವಾಗಿ ಉತ್ತರ ಭಾರತದಲ್ಲಿ ಪ್ರಚಲಿತ. ಕೆಲವು ಹಳ್ಳಿಗಳನ್ನು ಗುರುತಿಸಿ ಅಲ್ಲಿ ನೀರನ್ನು ಉಳಿಸುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಯಾರು ಹೆಚ್ಚು ನೀರು ಉಳಿಸಿ ಸದ್ಬಳಕೆ ಮಾಡುತ್ತಾರೆಯೋ ಆ ಗ್ರಾಮಕ್ಕೆ ವಾಟರ್ ಕಪ್ ಸಿಗುತ್ತದೆ. ಇದು ಮಹಾರಾಷ್ಟ್ರದ ಬರಪೀಡಿತ ಹಳ್ಳಿಗಳ ಚಿತ್ರಣವನ್ನೇ ಬದಲಾಯಿಸಿದೆ.












Click it and Unblock the Notifications