ಭೀಕರ ಅಪಘಾತ 11 ಮಂದಿ ಸಜೀವ ದಹನ
ದಾವಣಗೆರೆ
,ಏ. 14 : ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 13 ಕಲ್ಲದೇವಪುರದ ಬಳಿ ಬುಧವಾರ (ಏ.14 ) ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಕೂಲಿ ಕಾರ್ಮಿಕರು ಸಜೀವವಾಗಿ ದಹನವಾದ ಘಟನೆ ವರದಿಯಾಗಿದೆ. id="toptextpromo">ಎರಡು
ಲಾರಿಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 44 ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ನಾಗರಾಜ್ ನಾಯ್ಕ್, ಕೃಷ್ಣನಾಯ್ಕ್ಸ್, ಪಂಪ ನಾಯ್ಕ್, ಅನಿಲ್, ರತ್ನಬಾಯಿ, ಮುನೀಶ್, ಶಾಬುದ್ದೀನ್ ಎಂಬುವವರ ಪರಿಸ್ಥಿತಿ ಚಿಂತಾಜನಕವಾಗಿದೆ. 60 ಹೀರೋ ಹೋಂಡಾ ಬೈಕ್ ತುಂಬಿದ್ದ ಲಾರಿ, ಸರಿ ಸುಮಾರು ಅಷ್ಟೇ ಪ್ರಮಾಣದಲ್ಲಿದ್ದ ಕಾರ್ಮಿಕರಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಇಂಧನ ಟ್ಯಾಂಕ್ ಗೆ ಬೆಂಕಿ ತಗಲಿ 11 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಭಸ್ಮವಾಗಿದೆ. id='are-slot-1' class='oiad oi-axt oiadv'> id='top-searched-articles'>
ಮೃತ
ಪಟ್ಟವರು ಕೂಡ್ಲಗಿ ತಾಲೂಕಿನ ಬಂಡೆಬಸಾಪುರ ಗ್ರಾಮದ ಕೃಷಿ ಕಾರ್ಮಿಕರು. ಇವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೌಡ್ಲೆ ಗ್ರಾಮಕ್ಕೆ ಕಬ್ಬು ಕಡಿಯಲು ಹೋಗಿದ್ದರು. ಕೆಲಸ ಮಗಿದ ನಂತರ ತಮ್ಮ ತಾಂಡಾಕ್ಕೆ ಹಿಂದಿರುಗುತ್ತಿದ್ದರು. ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್, ಜಗಳೂರು ಡಿವೈಎಸ್ ಪಿ ಹನುಮಂತರಾಯಪ್ಪ, ಭೇಟಿ ನೀಡಿ ಪರಿಶೀಲನೆ ನಡೆಸಿದರು.











Click it and Unblock the Notifications