1000 ದಿನ ದಾಟಿದ ರೈತರ ಹೋರಾಟ, ಸಗಣಿ ಸುರಿದುಕೊಂಡು ಪ್ರತಿಭಟನೆ

ನರಗುಂದ, ಏಪ್ರಿಲ್ 10: ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ಮಹದಾಯಿ, ಕಳಸ ಬಂಡೂರಿ ಹೋರಾಟ ಇಂದಿಗೆ 1000 ದಿನಗಳನ್ನು ಪೂರೈಸಿತು. ಇಷ್ಟು ಸುದೀರ್ಘವಾಗಿ ಹೋರಾಟ ನೆಡೆದರು ಹೋರಾಟಕ್ಕೆ ಪರಿಹಾರ ಕಾಣದೆ ಇರುವದು ದುರದೃಷ್ಟಕರ ಎಂದು ರೈತ ಸೇನಾ ಕರ್ನಾಟಕ ದ ರಾಜ್ಯ ಅಧ್ಯಕ್ಷರಾದ ಶ್ರೀ ವೀರೇಶ ಸೊಬರದಮಠ ಸ್ವಾಮೀಜಿ ಅವರು ಹೇಳಿದರು.

ನರಗುಂದದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೀಕ್ಷಣವಾಗಿ ತರಾಟೆಗೆ ತೆಗೆದುಕೊಂಡರು.

1000 days to Kalasa-Banduri protest

ತಮ್ಮ ಮೈಮೇಲೆ ಸಗಣಿಯನ್ನು ಸುರಿದುಕೊಂಡು ನರಗುಂದ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಸ್ವಾಮಿಗಳ ಜೊತೆಗೆ ನೂರಾರು ಸಂಖ್ಯೆಯಲ್ಲಿ ರೈತರು ಪ್ರತಿಟನೆಯಲ್ಲಿ ಭಾಗವಹಿಸಿದ್ದರು.

1000 days to Kalasa-Banduri protest

ಕಳಸ-ಬಂಡೂರಿ ನಿರಂತರ ಧರಣಿ ಹೋರಾಟ ಇಂದಿಗೆ 1000 ನೆ ದಿನಕ್ಕೆ ಕಾಲಿಟ್ಟಿದ್ದು ನಿಜಕ್ಕೂ ದುರದೃಷ್ಟಕರ. ಇಲ್ಲಿಯವರೆಗೂ ಧನಾತ್ಮಕವಾಗಿ ಸ್ಪಂದಿಸದ ಸರ್ಕಾರಗಳನ್ನು ರೈತ ವಿರೋಧಿ ಸರ್ಕಾರ ಎಂದು ಜರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+