ಗುಟ್ಕಾ ಪ್ಲಾಸ್ಟಿಕ್ ಸ್ಯಾಚೆ ನಿಷೇಧ ಎಷ್ಟು ಸರಿ?

ಆದರೆ ಪ್ಲಾಸಿಕ್ ಸ್ಯಾಚೆಟ್ / ಪೌಚ್‌ಗಳನ್ನು ತಂಬಾಕು ಉತ್ಪನ್ನ ಮಾರಾಟ ಇಲ್ಲ ಎಂಬುದರ ಅರ್ಥ ಅಥವಾ ಮರ್ಮವೇನಿರಬಹುದು ? ಅಡಿಕೆ ಉತ್ಪನ್ನಗಳಂಥ ಗುಟ್ಕಾ ಮಾರಾಟವಿಲ್ಲದಿದ್ದರೆ ನಮ್ಮ ಅಡಿಗೆ ಬೆಳೆಗಾರರ ಗತಿ ಏನು ? ಅಡಿಕೆ ಬೆಳೆಗಾರರಿಗೆ ಕೊಡಲಿ ಏಟು ಕೊಟ್ಟಂತಾಗಲಿಲ್ಲವೇ ? ಈ ಸುಗ್ರಿವಾಜ್ಞೆ ಜಾರಿಯಾದರೆ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ಕಷ್ಟ ನಷ್ಟಗಳನ್ನು ಅನುಭವಿಸುವುದಿಲ್ಲವೇನು ? ಅವರ ಗೋಳು ಕೇಳುವವರಾರು ?. ಇದಲ್ಲದೆ ಕಾಳಸಂತೆಯಲ್ಲಿ ಗುಟ್ಕಾ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಸಣ್ಣ ಉದ್ಯಮಿಗಳು, ಪೆಟ್ಟಿ ಅಂಗಡಿ ಇಟ್ಟಿಕೊಂಡಿರುವವರಿಗೂ ಈ ನಿಷೇಧದಿಂದ ಭಾರಿ ಹೊಡೆತ ಬಿದ್ದಿದೆ.
ನಮ್ಮ ಮಾಲ್‌ಗಳಿಗೆ ಸ್ವೀಟ್ ಸ್ಟಾಲ್‌ಗಳಿಗೆ ಅಥವಾ ಇನ್ಯಾವ ಆಹಾರ ವಸ್ತುಗಳನ್ನು ಕೊಂಡುಕೊಳ್ಳುವ ಶಾಫಿಗೆ ಅಂಗಡಿಗಳಿಗೆ ಹೋದರೆ ಪ್ಲಾಸಿಕ್ ಚೀಲ, ಬ್ಯಾಗ್, ಬಾಟಲಿಗಳಲ್ಲದೆ ಇನ್ಯಾವುದರಲ್ಲಿ ಸಿಗುತ್ತದೆ ? ಸಾರಾಯಿ ಸಹ ಪ್ಲಾಸಿಕ್ ಬಾಟಲಿಗಳಲ್ಲಿ ಮಾರಾಟವಾಗುತ್ತದೆ. ಖನಿಜಯುಕ್ತ ನೀರು ಬಾಟಲಿಗಳಲ್ಲಿ, ಹಾಲು ಪ್ಲಾಸಿಕ್ ಗಳಲ್ಲಿ ಇತರ ಹೋಟೆಲ್ ತಿಂಡಿ ತಿನಿಸುಗಳು ಕಟ್ಟಿ ಕೊಡುವುದಾದರೂ ಯಾವುದರಲ್ಲಿ? ಪ್ಲಾಸ್ಟಿಕ್‌ಗಳಲ್ಲಿ ಅಲ್ಲವೇನು ? ಹಾಗಾದರೆ ಈ ನಿಯಮ ನಿಷೇಧ ಗುಟ್ಕಾಕ್ಕೆ ಮಾತ್ರ ಏನು ? ಈ ತಾರತಮ್ಯ ಯಾಕಾಗಿ ?
ಪುನರ್ಬಳಕೆ ಮಾಡಲಾಗದ ಪ್ಲಾಸ್ಟಿಕ್ ಗೆ ನಿಷೇಧ ಹೇರುವುದಾದರೆ ಎಲ್ಲೆಡೆ ಅದನ್ನು ಕಡ್ಡಾಯವಾಗಿ ಜಾರಿಗೊಳಿಸಿದರೆ ಉತ್ತಮ. ಕರ್ನಾಟಕ ಅಡಿಕೆ ಬೆಳೆಗಾರರ ನೋವನ್ನು ಅರಿತ ಕ್ಯಾಂಪ್ಕೋ ಸಂಸ್ಥೆ ಈ ನಿಷೇಧವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ. ಸರ್ಕಾರ ಕೂಡಾ ಭರವಸೆ ನೀಡಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ 572,000 ಎಕರೆಗಳಿಂದ 600,000 ಮೆಟ್ರಿಕ್ ಟನ್ ಗಳಷ್ಟು ಅಡಿಕೆ ಉತ್ಪಾದನೆ ಮಾಡಲಾಗುತ್ತದೆ. ದೇಶದ ಅಡಿಕೆ ಉತ್ಪಾದನೆಯಲ್ಲಿ ಇಂದು ಕರ್ನಾಟಕ ಅಗ್ರಸ್ಥಾನದಲ್ಲಿದೆ. ಸರ್ಕಾರ ತಾರತಮ್ಯ ಮಾಡದೆ ಈ ಬಗ್ಗೆ ಗಮನ ಹರಿಸುವುದು ಒಳಿತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications