ಇಡೀ ಭಾರತದ ಕಣ್ಣು ಬೆಳಗಾವಿ ಮೇಲೆ

ಕೇಂದ್ರದಲ್ಲಿ 70 ಕಂಪ್ಯೂಟರ್ ಗಳನ್ನು ಸ್ಥಾಪಿಸಲಾಗಿದ್ದು ವರದಿಗಾರರು ಮತ್ತು ಛಾಯಾಚಿತ್ರಕಾರರು ಆರಂಭಿಕ ವರದಿ ಮಾಡುವಲ್ಲಿ ಈಗಾಗಲೇ ನಿರತರಾಗಿದ್ದಾರೆ. ಎಲ್ಲಾ ಕಂಪ್ಯೂಟರ್ ಗಳಿಗೂ ಇಂಟರ್ನೆಟ್ ಸೌಕರ್ಯವಿದೆ. ಕನ್ನಡದಲ್ಲಿ ಬರೆಯುವವರಿಗೆ ನುಡಿ ಮತ್ತು ಬರಹ ತಂತ್ರಾಂಶ ಅಳವಡಿಸಲಾಗಿದೆ.
ಕನ್ನಡ ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳು, ದೂರದರ್ಶನ ವಾಹಿನಿಗಳು ಮತ್ತು ಅಂತರ್ಜಾಲ ತಾಣಗಳು ಪೆನ್ನು, ಕ್ಯಾಮೆರಾ ಮತ್ತು ಲ್ಯಾಪ್ ಟಾಪ್ ಸಿದ್ಧಪಡಿಸಿಕೊಂಡು ಲೈವ್ ಕವರೇಜಿಗೆ ಸಿದ್ಧವಾಗಿವೆ. ಅಂದಹಾಗೆ ವೈಫೈ ಕನೆಕ್ಟಿವಿಟಿ ಕೂಡಾ ಇದೆ! ಜೊತೆಗೆ ಯುಪಿಎಸ್, ಜೆನರೇಟರ್, ಜೆರಾಕ್ಸ್ ಮತ್ತು ಫ್ಯಾಕ್ಸ್ ಸೌಲಭ್ಯ ಒದಗಿಸಲಾಗಿದೆ. ಮಾಧ್ಯಮ ಕೇಂದ್ರದ ವ್ಯವಸ್ಥೆ ಹರಿಚನ್ ಟೆಕ್ನಾಲಜೀಸ್ ಸಂಸ್ಥೆಯ ಮಧುಸೂಧನ್ ಫೌಸದಾರ್ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಮುಂತಾದವರು ಉಪಸ್ಥಿತರಿದ್ದರು. ಕನ್ನಡಿಗ ನಾರಾಯಣ ಮೂರ್ತಿ ಮತ್ತು ಕನ್ನಡದ ಬೆಡಗಿ ಐಶ್ವರ್ಯ ರೈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದರಿಂದ ಕರ್ನಾಟಕ ಮಾತ್ರವಲ್ಲದೆ ಭಾರತದ ನಾನಾ ಮಾಧ್ಯಮ ವೇದಿಕೆಗಳ ಕಣ್ಣು ನಮ್ಮ ಬೆಳಗಾವಿಗೆ ಮೇಲೆ ಬೀಳುತ್ತದೆ ಎಂದು ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು ದಟ್ಸ್ ಕನ್ನಡಕ್ಕೆ ಗುರುವಾರ ಮಧ್ಯಾನ್ಹ ತಿಳಿಸಿದರು.











Click it and Unblock the Notifications