ಸಮ್ಮೇಳನದಲ್ಲಿ ಅಶೋಕ್, ಅಶ್ವಥ್ ಮಿಂಚಿಂಗ್

Minister Ashok and MLC Ashwath in KSS meet
ಸಮ್ಮೇಳನ ಮುಕ್ತಾಯಕ್ಕೆ ಮುಂಚಿತವಾಗಿಯೇ ಯಶಸ್ಸಿನ ಮಂತ್ರ ಜಪಿಸಿದ ನಲ್ಲೂರು ವರ್ತನೆ ಒಂದು ರೀತಿ ಮ್ಯಾಚ್ ಶುರುವಾಗುವ ಮುನ್ನವೇ ಟಾಸ್ ಹಾಕಿ ಪಂದ್ಯ ಗೆದ್ದಿದ್ದು ನಾವೇ ಎಂದು ಬಿಗಿದಂತ್ತಿತ್ತು. ಇನ್ನೊಂದು ಕಡೆ ಇದು ಪರಿಷತ್ತಿನ ಯಶಸ್ಸು, ಸಮಸ್ತ ಕನ್ನಡಿಗರ, ಕನ್ನಡಾಭಿಮಾನಿಗಳ ಯಶಸ್ಸು ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾಗಿ ಕಾಣಿಸಿಕೊಂಡ ಎಂಎಲ್ ಸಿ ಅಶ್ವಥ್ ನಾರಾಯಣ ಸಮ್ಮೇಳನದ ಆಯೋಜನೆ ಹೊಣೆ ಸಿಕ್ಕಿದು ನನ್ನ ಪೂರ್ವ ಜನ್ಮದ ಸುಕೃತ ಎಂದು ಸಾರಿದರು.

ಉದ್ಯಾನ ನಗರಿಯ ಸಾಂಸ್ಕೃತಿಕ ಬೀಡು ಬಸವನಗುಡಿಯಲ್ಲಿ ನಡೆದ ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಹಾಗಂತ ಸಚಿವ ಅಶೋಕ್ ಘೋಷಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಸಮ್ಮೇಳನಕ್ಕೆ ಜನ ಸಾಗರವೇ ಹರಿದು ಬಂತು. ಸುಮಾರು ಮೂರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಮಿತಾನಂದ ಅನುಭವಿಸಿದರು ಅವರೆಲ್ಲರಿಗೂ ತುಂಬ ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಬೆಂಗಳೂರಿನ ಸಮಸ್ತ ಕನ್ನಡಿಗರು, ಕನ್ನಡಾಭಿಮಾನಿಗಳು, ದೂರದೂರದ ಊರುಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಿದ್ದಾರೆ. ಎಲ್ಲರೂ ಒಗ್ಗೂಡಿ ಕನ್ನಡ ತೇರು ಎಳೆದು ಧನ್ಯತಾ ಭಾವ ಮೆರೆದಿದ್ದಾರೆ. ಇದು ಸ್ವಾಗತ ಸಮಿತಿಯ ಅಧ್ಯಕ್ಷನಾಗಿ ತುಂಬು ಸಂತಸ ತಂದಿದೆ ಎಂದು ಅವರು ಆನಂದಪರವಶರಾಗಿ ನುಡಿದರು.

ಅಶೋಕ್ ಕೇಂದ್ರ ಬಿಂದು : ಬಸವನಗುಡಿಯಲ್ಲೇ ಸಮ್ಮೇಳನ ನಡೆಸಲು ಅಶೋಕ್ ಸಾಹೇಬ್ರು ನಿರ್ಧರಿಸಿದ ಮೇಲೆ ಪರಿಷತ್ತಿನ ಕಡೆಯಿಂದ ಆಯೋಜಕರು ಬಂದರೋ ಬಿಟ್ಟರೋ ಅಶೋಕ್ ಅವರ ಹಿಂಬಾಲಕರಂತೂ ಮೂರು ದಿನಗಳ ಕಾಲ ಸಾಹಿತ್ಯ ಸುಧೆಯಲ್ಲಿ ಮಿಂದು ಪಾವನರಾದರು.

ಪೂರ್ವ ಜನ್ಮದ ಸುಕೃತ: ಅಶ್ವತ್ಥನಾರಾಯಣ

ಇಷ್ಟು ದಿನಗಳ ಕಾಲ ರಾಜಕೀಯ ಸಮಾರಂಭ ಏರ್ಪಡಿಸಿ ಮಾತ್ರವೇ ಅನುಭವ ಇತ್ತು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾಗುವ ಅವಕಾಶ ಸಿಕ್ಕಿದ್ದು, ತಮ್ಮ ಪೂರ್ವ ಜನ್ಮದ ಸುಕೃತ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅವಕಾಶ ತಮ್ಮಬದುಕಿನಲ್ಲೊಂದು ಮೈಲಿಗಲ್ಲು, ಸಾಹಿತ್ಯ ಸರಸ್ವತಿಯ ಸೇವೆ ಮಾಡುವ ಸೌಭಾಗ್ಯ ತಮ್ಮದಾಗಿದೆ ಎಂದು ವಿಶ್ಲೇಷಿಸಿದರು.

ಆಯೋಜನೆಯಲ್ಲಿ ಕೆಲವೊಂದು ಲೋಪಗಳಾಗಿವೆ ಎಂಬುದನ್ನು ಒಪ್ಪಿಕೊಂಡ ಅವರು, ಇಂಥ ಸಮ್ಮೇಳನ ನಡೆಸುವಾಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ ಜವಾಬ್ದಾರಿ ವಹಿಸುವುದು ಅಗತ್ಯ. ತಮ್ಮ ತಮ್ಮ ಜಿಲ್ಲೆಯಿಂದ ಬರುವ ಸದಸ್ಯರ ಊಟ, ವಸತಿಯ ಹೊಣೆಯನ್ನು ಆಯಾ ಜಿಲ್ಲೆಯ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ನಿರ್ವಹಿಸಿದೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಧಾವಂತದಲ್ಲೂ ಕನ್ನಡ ಪ್ರೇಮಿಗಳು ಸಮ್ಮೇಳನಕ್ಕೆ ನೀಡಿರುವ ಸ್ಪಂದನ ಅದ್ವಿತೀಯ ಎಲ್ಲರಿಗೂ ನಾವು ಆಭಾರಿಗಳು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+