ಕನ್ನಡಿಗರಿಗೆ ಅಭಿನಂದನೆ. ಹೋಗಿಬನ್ನಿ, ನಮಸ್ಕಾರ

ಈ ನಗರದಲ್ಲಿ ಆಗಾಗ ಬೃಹತ್ ಪ್ರಮಾಣದ ಮೆರವಣಿಗೆಗಳು, ರಸ್ತೆಯಲ್ಲಿ ಶಕ್ತಿ ಪ್ರದರ್ಶನ ಮಾಡುವ ವರಸೆಗಳು ನಡೆಯುತ್ತಲೇ ಇರುತ್ತವೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ನೆಪದಲ್ಲಿ ಅಪಾರ ಸಂಖ್ಯೆಯಲ್ಲಿ ಕಲೆತ ಕನ್ನಡಿಗರು ಪ್ರದರ್ಶಿಸಿದ್ದು ತಾಳ್ಮೆ, ಸಹನೆ ಮತ್ತು ಒಗ್ಗಟ್ಟು. ಸಮೂಹ ಶಕ್ತಿಯನ್ನು ಬೆನ್ನಲ್ಲಿ ಕಟ್ಟಿಕೊಂಡು ಯಾವುದೇ ಅಹಿತಕರ ಘಟನೆಗಳಿಗೆ ಮುಂದಾಗದಿದ್ದುದು ಕನ್ನಡ ಭಾಷಿಕರ ಬಲುಮೆ ಮತ್ತು ಅದೇ ಅವರ ಶಕ್ತಿ ಕೂಡ.
ಕೆಲವು ಕಡೆಗಳಲ್ಲಿ ಸಂಚಾರ ದಟ್ಟಣೆಯಿಂದಾಗಿ ನಾಗರೀಕರಿಗೆ ತೊಂದರೆ ಆಗಿರುವುದು ಹೊರತುಪಡಿಸಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಜಮಾಯಿಸಿದರೂ ಒಂದೇ ಒಂದು ಅಹಿತಕರ ಘಟನೆಗೆ ಅವಕಾಶ ಕೊಡದ ಕನ್ನಡ ಬಾಂಧವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ದೂರದೂರಗಳಿಂದ ಬೆಂಗಳೂರು ತನಕ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದ್ದೀರಿ. ನಿಮ್ಮ ನಿಮ್ಮ ಊರಿಗೆ ಮರು ಪ್ರಯಾಣ ಸುಖಕರವಾಗಿ, ಕ್ಷೇಮವಾಗಿ ಇರಲೆಂದು ಹಾರೈಸುವ, ನಿಮ್ಮ ಪ್ರೀತಿಯ ದಟ್ಸ್ ಕನ್ನಡ.











Click it and Unblock the Notifications