Get Updates
Get notified of breaking news, exclusive insights, and must-see stories!

ಸುಳ್ಯ:ದುರ್ಗಾಪರಮೇಶ್ವರಿ ಉತ್ಸವ ಮೂರ್ತಿಯನ್ನೇ ದೋಚಿದ ಕಳ್ಳರು

ಮಂಗಳೂರು, ಸೆಪ್ಟೆಂಬರ್ 01 : ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮರಕಟ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ಕಳ್ಳರು ದೇವಸ್ಥಾನದೊಳಗೆ ನುಗ್ಗಿ ದೇವರ ಆಭರಣಗಳು, ಕಾಣಿಕೆ ಹುಂಡಿ, ದೇವರ ಉತ್ಸವ ಮೂರ್ತಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

Thieves rob god's idol in Marakata Durgaparameshwari Temple at Sullya

ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಯು ಸುಮಾರು 1600 ವರ್ಷಗಳ ಹಳೆಯ ಮೂರ್ತಿಯಾಗಿದೆ ಎನ್ನಲಾಗುತ್ತಿದ್ದು, ಪುರಾತನ ಕಾಲದ ಮೂರ್ತಿಯಾಗಿರುವುದರಿಂದ ಬೆಲೆಕಟ್ಟಲಾಗದಂತಹ ಸೊತ್ತು ಇದೀಗ ಕಳ್ಳರ ಕೈ ಸೇರಿದೆ.

ಇಂದು ಮುಂಜಾನೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲು ಬಂದ ಸಿಬ್ಬಂದಿಗಳಿಂದ ಈ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಸುಬ್ರಮಣ್ಯ ಪೋಲೀಸರಿಗೆ ಮಾಹಿತಿ ನೀಡಲಾಗಿದೆ.

ದೇವಸ್ಥಾನದಲ್ಲಿ ಸಿ.ಸಿ.ಕ್ಯಾಮಾರಾ ಹಾಕಲಾಗಿದ್ದು, ಕಳ್ಳರು ಸಿ.ಸಿ.ಕ್ಯಾಮಾರಾವನ್ನು ಮೊದಲು ಪುಡಿಗೈದು ಈ ಕೃತ್ಯ ಎಸಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+