ಮಡಿಯಾಗಿ ಉಳಿಯುವುದೇ ಮಡಿಕೇರಿ?
ಮಡಿಕೇರಿ ನವೆಂಬರ್ 29: ರಾಜ್ಯದ ಪಟ್ಟಣಗಳಲ್ಲಿ ಕಾಡುತ್ತಿರುವಂತಹ ಕಸದ ಸಮಸ್ಯೆ ಮಡಿಕೇರಿಯನ್ನು ಬಿಟ್ಟಿಲ್ಲ. ಈಗಾಗಲೇ ಅಲ್ಲಲ್ಲಿ ಕಸಗಳ ರಾಶಿ ಕಾಣತೊಡಗಿವೆ. ನಗರಸಭೆಯಿಂದ ಇದೀಗ ಕಸದ ಬುಟ್ಟಿಗಳನ್ನು ನಗರದಾದ್ಯಂತ ವಿತರಿಸುವ ಕಾರ್ಯ ನಡೆದಿದ್ದು ಅದು ನಗರವನ್ನು ಶುಚಿಯಾಗಿಡಲು ಸಹಕರಿಸುತ್ತಾ ಎಂಬುದನ್ನು ನೋಡಬೇಕಾಗಿದೆ.
ಒಂದು ಕಾಲದಲ್ಲಿ ಮಡಿಕೇರಿ ಮಡಿಯಾಗಿತ್ತು. ಮಡಿಯಾಗಿದ್ದರಿಂದ ಮಡಿಕೇರಿ ಎಂಬ ಹೆಸರು ಬಂತು ಎಂದು ಹೇಳುವವರೂ ಇದ್ದಾರೆ. ಈಗ ನಗರ ಅಭಿವೃದ್ಧಿಯಾಗಿದೆ. 23 ವಾರ್ಡ್ ಗಳಿದ್ದು ಸುಮಾರು 33, 381 ರಷ್ಟು ಜನಸಂಖ್ಯೆ ಹೊಂದಿದೆ. 17.04 ಚದರ ಕಿಲೋ ಮೀಟರ್ ವಿಸ್ತೀರ್ಣದ ಪಟ್ಟಣದಲ್ಲಿ ಮನೆಗಳು, ವಾಣಿಜ್ಯ ಸಂಕೀರ್ಣಗಳು ಎಲ್ಲವೂ ಇದೆ. ಆದರೆ ಬೆಟ್ಟಗುಡ್ಡ ಹೊಂದಿರುವ ಕಾರಣ ಕೆಲವು ಕಡೆಗಳಿಗೆ ವಾಹನಗಳು ತೆರಳದ ಪರಿಸ್ಥಿತಿಯೂ ಇದೆ ಹೀಗಾಗಿ ಕಸ ವಿಲೇವಾರಿ ಇಲ್ಲಿ ಅಷ್ಟು ಸುಲಭವಾಗಿ ಉಳಿದಿಲ್ಲ.[ಮಡಿಕೇರಿಯ ರಾಜಾಸೀಟ್ ಬಳಿ ಅಕ್ರಮ ಅಂಗಡಿಗಳ ತೆರವು]

ಈಗಾಗಲೇ ಮನೆಮನೆಗಳಿಂದ ಕಸ ಸಂಗ್ರಹಿಸುವ ಗುತ್ತಿಗೆಯನ್ನು ಚಂದನ ಸ್ತ್ರೀಶಕ್ತಿ ಸಂಘವು ವಹಿಸಿಕೊಂಡಿದೆ. ಈ ಸಂಘ ಆರು ಟ್ರ್ಯಾಕ್ಟರ್ ಹಾಗೂ ಟಾಟಾಏಸ್ ವಾಹನವನ್ನು ಹೊಂದಿದ್ದು, ನಗರಸಭೆಯಲ್ಲಿ 3 ಟ್ರ್ಯಾಕ್ಟರ್ ಇವೆ. ಕಸದ ತೆರಿಗೆಯನ್ನು ನಗರಸಭೆ ವಾಸದ ಮನೆಗೆ ರು. 180 ಹಾಗೂ ವಾಣಿಜ್ಯ ಕಟ್ಟಡಕ್ಕೆ ರು. 360ನ್ನು ಜನರು ತೆರಿಗೆ ಕಟ್ಟುವಾಗಲೇ ಸಂಗ್ರಹಿಸುತ್ತಿದೆ. ಆದರೆ ಕಸದ ಟ್ರ್ಯಾಕ್ಟರ್ ಎಲ್ಲ ಕಡೆ ತೆರಳಲು ಅಸಾಧ್ಯವಾದ ಹಿನ್ನಲೆಯಲ್ಲಿ ಕೆಲವಡೆ ಕಂಟೈನರ್‍ಗಳನ್ನು ಅಳವಡಿಸಲಾಗಿತ್ತು. ಅದಕ್ಕೆ ಜನ ಕಸ ತಂದು ಸುರಿಯುತ್ತಿದ್ದರು.
ಆದರೆ ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶನಾಲಯ 2014ರಲ್ಲಿಯೇ ಕಸ ವಿಲೇವಾರಿಗೆ ಕಂಟೈನರ್‍ಗಳನ್ನು (ಕಸದತೊಟ್ಟಿ) ಖರೀದಿಸದಂತೆ ಹಾಗೂ ಬಳಸದಂತೆ ಸೂಚಿಸಿದೆ. ಆದರೂ ಇಲ್ಲಿ ಅದನ್ನು ಬಳಸಲಾಗುತ್ತಿತ್ತು. ಇದೀಗ ನಗರಸಭೆಗೆ ಆಯುಕ್ತರಾಗಿ ಆಗಮಿಸಿರುವ ಶುಭಾ ಅವರು ಸರಕಾರ 2014ರಲ್ಲಿ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿ ನಗರದ ವಿವಿಧೆಡೆ ಇದ್ದ ಸುಮಾರು 24 ಕಂಟೈನರ್‍ಗಳನ್ನು ತೆರವುಗೊಳಿಸಿದ್ದಾರೆ. ಆದರೆ ಜನ ಮಾತ್ರ ಕಂಟೈನರ್ ಇದ್ದ ಜಾಗದಲ್ಲೇ ಕಸ ಹಾಕುತ್ತಿದ್ದಾರೆ ಪರಿಣಾಮ ಸ್ವಚ್ಛತೆಗೆ ಧಕ್ಕೆ ಬಂದಿದೆ.[ಸರ್ಕಾರಿ ಶಾಲೆಯಂದ್ರೆ ಹಾಕತ್ತೂರು ಶಾಲೆಯಂತಿರಬೇಕು]

ಇದೆಲ್ಲದರ ನಡುವೆ ಕೆಲವು ವಾರ್ಡ್ ಗಳಿಗೆ ಕಸದ ತೊಟ್ಟಿಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದ್ದು, ಜನ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಶುಚಿತ್ವಕ್ಕೆ ಆದ್ಯತೆ ನೀಡಿದರೆ ಮಡಿಕೇರಿ ಮಡಿಯಾಗಿರಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಆಸಕ್ತಿ ವಹಿಸುವುದು ಅಗತ್ಯವಾಗಿದೆ.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications