ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಮತ : ರಮ್ಯಾ ಮತ್ತೆ ರಾಜಕೀಯಕ್ಕೆ ಬರುವುದೇ ಬೇಡ!

|
Google Oneindia Kannada News

ಬೆಂಗಳೂರು, ಜುಲೈ 21 : ನಟಿ, ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರ ರಾಜಕೀಯ ಮರು ಪ್ರವೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಧಾನಪರಿಷತ್ ಪ್ರವೇಶಿಸುವ ರಮ್ಯಾ ಅವರು ಅಲ್ಲಿಂದ ರಾಜಕಾರಣಕ್ಕೆ ಮರಳಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಒನ್ ಇಂಡಿಯಾ ಕನ್ನಡದ ಓದುಗರು ರಮ್ಯಾ ರಾಜಕೀಯಕ್ಕೆ ಬರುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಸೋತ ನಂತರ ಕಣ್ಮರೆಯಾಗಿದ್ದ ರಮ್ಯಾ ಮತ್ತೆ ರಾಜಕೀಯಕ್ಕೆ ಬರಬೇಕಾ?' ಎಂಬ ಪ್ರಶ್ನೆಯೊಂದಿಗೆ ಒನ್ ಇಂಡಿಯಾ ಕನ್ನಡ ಓದುಗರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಶೇ 66ರಷ್ಟು ಜನರು ರಮ್ಯಾ ರಾಜಕೀಯಕ್ಕೆ ಬರುವುದು ಬೇಡ ಎಂದಿದ್ದಾರೆ. [ಮಾಜಿ ಸಂಸದೆ ರಮ್ಯಾ , ಶಾಸಕಿಯಾಗೋಲ್ಲ ಬಿಡಿ!]

ಓದುಗರಿಗೆ ಮತದಾನ ಮಾಡಲು ಮೂರು ಆಯ್ಕೆಗಳನ್ನು ನೀಡಲಾಗಿತ್ತು. 'ಬಂದರೆ ಬರಲಿ ತಪ್ಪೇನಿಲ್ಲ', 'ಖಂಡಿತ ಬರುವುದು ಬೇಡ', 'ಮಂಡ್ಯದ ಜನ ಹೇಗೆ ಹೇಳ್ತಾರೋ ಹಾಗೇ ಮಾಡಲಿ' ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಇದುವರೆಗೂ 1,777 ಓದುಗರು ಮತದಾನ ಮಾಡಿದ್ದಾರೆ. [ರಮ್ಯಾ ವಿರುದ್ಧ ಮಂಡ್ಯ ಕಾಂಗ್ರೆಸಿಗರ ದೂರು]

ಮತದಾನ ಮಾಡಿದ ಓದುಗರಲ್ಲಿ 1,185 ಜನರು 'ಖಂಡಿತ ಬರುವುದು ಬೇಡ' ಎಂದು ಅಭಿಪ್ರಾಯಪಟ್ಟಿದ್ದಾರೆ. ರಮ್ಯಾ ಮತ್ತೆ ರಾಜಕಾರಣಕ್ಕೆ ಬರಬೇಕು ಎಂದು 'ಬಂದರೆ ಬರಲಿ ತಪ್ಪೇನಿಲ್ಲ' ಎಂದು ಕೇವಲ 312 ಜನರು ಹೇಳಿದ್ದಾರೆ. ಮತದಾನ ಮಾಡಿದ ಎಲ್ಲಾ ಓದುಗರಿಗೂ ನಮ್ಮ ಧನ್ಯವಾದಗಳು. ಚಿತ್ರಗಳಲ್ಲಿ ನೋಡಿ ಜನರ ಅಭಿಪ್ರಾಯಗಳು.... [ನೀವು ಮತ ಹಾಕಿ]

ಓದುಗರ ಅಭಿಪ್ರಾಯಗಳು ಹೀಗಿವೆ

ಓದುಗರ ಅಭಿಪ್ರಾಯಗಳು ಹೀಗಿವೆ

ಬಂದರೆ ಬರಲಿ ತಪ್ಪೇನಿಲ್ಲ - 312 ಮತ
ಖಂಡಿತ ಬರುವುದು ಬೇಡ - 1,185 ಮತ
ಮಂಡ್ಯದ ಜನ ಹೇಗೆ ಹೇಳ್ತಾರೋ ಹಾಗೇ ಮಾಡಲಿ - 280 ಮತ
ಒಟ್ಟು 1,777 ಮತ (ಇದುವರೆಗೂ)

ಹಿಂಬಾಗಿಲಿನಿಂದ ರಾಜಕೀಯಕ್ಕೆ ಬಂದರೆ ಹೇಗೆ?

ಹಿಂಬಾಗಿಲಿನಿಂದ ರಾಜಕೀಯಕ್ಕೆ ಬಂದರೆ ಹೇಗೆ?

ಗೋಪಿಕೃಷ್ಣ ಎಂಬ ಓದುಗರು 'ರಮ್ಯಾ ನೇರವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಬೇಕು. ಅದನ್ನು ಬಿಟ್ಟು ವಿಧಾನಪರಿಷತ್ ಎಂಬ ಹಿಂಬಾಗಿಲನಿಂದ ರಾಜಕೀಯಕ್ಕೆ ಬಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಜನರು ಹೇಗೆ ಉತ್ತರಿಸಬೇಕು?' ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

6 ತಿಂಗಳು ಅಮೆರಿಕ, 6 ತಿಂಗಳು ಭಾರತದಲ್ಲಿ ಇದ್ರೆ ಹೇಗೆ?

6 ತಿಂಗಳು ಅಮೆರಿಕ, 6 ತಿಂಗಳು ಭಾರತದಲ್ಲಿ ಇದ್ರೆ ಹೇಗೆ?

ಕೆ.ಪಿ.ಮಧು ಎಂಬ ಓದುಗರು ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದು, 'ಇವರು ಸಿನಿಮಾ ಮತ್ತು ಡ್ರಾಮಾ ಮಾಡೋಕೆ ಮಾತ್ರ, ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಲ್ಲ. ನಮ್ಮ ಎಂಎಲ್‌ಎ, ಎಂಪಿಗಳು 6 ತಿಂಗಳು ಭಾರತ, 6 ತಿಂಗಳು ಅಮೆರಿಕದಲ್ಲಿದ್ರೆ ಹೇಗೆ?, ನಮ್ಮ ದೇಶದಲ್ಲಿ ಭ್ರಷ್ಟ ರಾಜಕಾರಣಿಗಳೇ ತುಂಬಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯದ ರಾಜಕೀಯ ದೆಹಲಿ ಇದ್ದಂತೆ

ಮಂಡ್ಯದ ರಾಜಕೀಯ ದೆಹಲಿ ಇದ್ದಂತೆ

ಶಿವಕುಮಾರ್ ಎನ್ನುವ ಓದುಗರು 'ಮಂಡ್ಯದ ರಾಜಕೀಯ ದೆಹಲಿ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಅರವಿಂದ್ ಕ್ರೇಜಿವಾಲ್ ಅವರೇ ಜನರ ಆಯ್ಕೆ, ಮಂಡ್ಯದಲ್ಲಿ ಅಂಬರೀಶ್ ಅಥವ ರಮ್ಯಾ ಜನರ ಆಯ್ಕೆ' ಎಂದು ಹೇಳಿದ್ದಾರೆ.

ಅಂಬರೀಶ್ ಬಗ್ಗೆ ಉಲ್ಟಾ ಮಾತಾಡಿದ್ರೆ ಅಷ್ಟೆ

ಅಂಬರೀಶ್ ಬಗ್ಗೆ ಉಲ್ಟಾ ಮಾತಾಡಿದ್ರೆ ಅಷ್ಟೆ

ಹರೀಶ್ ಬಿ.ಟಿ. ಎನ್ನುವ ಓದುಗರು, ಮಂಡ್ಯದಲ್ಲಿ ಅಂಬರೀಶ್ ಮಾತ್ರ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಅಂಬರೀಶ್ ಬಗ್ಗೆ ಯಾರು ಉಲ್ಟಾ ಮಾತನಾಡಿದ್ರು ಉದ್ದಾರ ಆಗೋಲ್ಲ. ಕರ್ನಾಟಕಕ್ಕೆ ಒಬ್ಬರೇ ಕರ್ಣ' ಎಂದು ಕಮೆಂಟ್ ಮಾಡಿದ್ದಾರೆ.

ಜನಸೇವೆ ಮಾಡೋರು ವಾಪಸ್ ಯಾಕೆ ಹೋದ್ರು?

ಜನಸೇವೆ ಮಾಡೋರು ವಾಪಸ್ ಯಾಕೆ ಹೋದ್ರು?

ನಾಗರಾಜ್ ಎಂಬ ಓದುಗರು ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದು, 'ಅವರು ಜನಸೇವೆ ಮಾಡುವವರು ಆಗಿದ್ರೆ ರಾಜಕಾರಣದಿಂದ ವಾಪಸ್ ಹೋಗ್ತಾ ಇರಲಿಲ್ಲ. ಈಗ ವಾಪಸ್ ಬರುವುದಾದದರೆ ದುಡ್ಡು ಮಾಡೋಕೆ ಬರುತ್ತಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Actor turned politician and Mandya lok sabha constituency former MP Ramya will back in politics. Here is poll survey results conducted by http://kannada.oneindia.com/.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X