ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಹೆಲಿಕಾಪ್ಟರ್‌ನಲ್ಲಿ ಬೆಂಕಿ, ಕಂಪನಿ ಒಪ್ಪಂದ ರದ್ದು

|
Google Oneindia Kannada News

ಬೆಂಗಳೂರು, ಜ. 22 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣದ ನಂತರ ಕರ್ನಾಟಕ ಸರ್ಕಾರ ಪ್ರಭಾತಂ ಏವಿಯೇಷನ್‍ನ ಕಂಪನಿ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ಸರ್ಕಾರ ಸ್ವಂತ ಹೆಲಿಕಾಪ್ಟರ್ ಖರೀದಿ ಮಾಡುವ ನಿರೀಕ್ಷೆ ಇದೆ.

ಜನವರಿ 12ರ ಶನಿವಾರ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೈಸೂರಿಗೆ ಪ್ರಯಾಣಿಸಬೇಕಿದ್ದ ಸಿಎಂ ಹೆಲಿಕಾಪ್ಟರ್ ಏರಿ ಕುಳಿತಿದ್ದಾಗ, ಸೈಲೆನ್ಸರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಭದ್ರತಾ ಸಿಬ್ಬಂದಿ ಸಿದ್ದರಾಮಯ್ಯ ಅವರನ್ನು ತಕ್ಷಣ ಕೆಳಗಿಸಿ ಅನಾಹುತ ತಪ್ಪಿಸಿದ್ದರು. [ಹೆಲಿಕಾಪ್ಟರ್ ನಲ್ಲಿ ಬೆಂಕಿ, ತನಿಖೆಗೆ ಆದೇಶ]

Helicopter

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವ ಕೆಜೆ ಜಾರ್ಜ್ ಆದೇಶಿಸಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳ ಭದ್ರತಾ ಲೋಪವಿರುವ ಕುರಿತು ತನಿಖೆ ನಡೆಯುತ್ತಿದೆ. [ಹೆಲಿಕಾಪ್ಟರ್ ಅವಘಡದಿಂದ ಸಿದ್ದು ಪಾರಾದದ್ದು ಹೇಗೆ?]

ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನವದೆಹಲಿಯ ಕಂಪನಿಗೆ ಸೇರಿತ್ತು. ಪ್ರಭಾತಂ ಏವಿಯೇಷನ್‍ನ ಇಸಿ 135 ಹೆಲಿಕಾಪ್ಟರ್‌ನಲ್ಲಿ ಸಿಎಂ ಪ್ರಯಾಣಿಸುತ್ತಿದ್ದರು. ಕ್ಯಾಪ್ಟನ್ ಉನ್ನಿಕೃಷ್ಣನ್ ಹಾಗೂ ಕ್ಯಾಪ್ಟನ್ ದೌಲ್ತಾ ಹೆಲಿಕಾಪ್ಟರ್‌ ಜೊತೆಗಿದ್ದರು.

ಸದ್ಯ, ಕರ್ನಾಟಕ ಸರ್ಕಾರ ಪ್ರಭಾತಂ ಏವಿಯೇಷನ್‍ ಕಂಪನಿ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ಸರ್ಕಾರದ ವತಿಯಿಂದ ಹೆಲಿಕಾಪ್ಟರ್ ಖರೀದಿ ಮಾಡುವ ಚಿಂತನೆ ಇದ್ದು, ಅಲ್ಲಿಯ ತನಕ ಪವನ್ ಹಂಸ ಸಂಸ್ಥೆಯ ವಿಟಿಐಎಲ್‌ಡಿ ಹೆಲಿಕಾಪ್ಟರ್‌ಅನ್ನು ಸರ್ಕಾರ ಬಾಡಿಗೆಗೆ ಪಡೆಯಲಿದೆ.

English summary
Karnataka government cancelled agreement with Prabhatam Aviation Pvt. Ltd. after Chief Minister Siddaramaiah had a narrow escape as a minor fire was noticed in the Helicopter which he was flying in. Helicopter belongs to Prabhatam Aviation New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X