ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನ ಬಿಡುಗಡೆಯ, ಕ್ಷಣ-ಕ್ಷಣದ ಮಾಹಿತಿ

|
Google Oneindia Kannada News

ಬೆಂಗಳೂರು, ಅ. 18 : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶುಕ್ರವಾರ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಅಮ್ಮನನ್ನು ಅವರ ನೂರಾರು ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಸೆ.27ರಂದು ಜೆ.ಜಯಲಲಿತಾ ಮತ್ತು ಅವರ ಆಪ್ತರಾದ ಶಶಿಕಲಾ, ಇಳವರಸಿ ಮತ್ತು ದತ್ತುಪುತ್ರ ಸುಧಾಕರನ್‌ಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಕಳೆದ 22 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲರೂ ಇಂದು ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ.

ಸಮಯ 5.54 : ತಮಿಳುನಾಡು ಮಾಜಿ ಸಿಎಂ ಚೆನ್ನೈನ ಪೋಯಾಸ್ ಗಾರ್ಡನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸ ತಲುಪಿದ್ದಾರೆ. ಚೆನ್ನೈನಲ್ಲಿ ವರುಣ ದೇವ ಸಹ ಅಮ್ಮನಿಗೆ ಸ್ವಾಗತ ಕೋರಿದ್ದು, ಭಾರೀ ಮಳೆಯಾಗುತ್ತಿದೆ.

ಸಮಯ 5.14 : ಜಯಲಲಿತಾ ಚೆನ್ನೈಗೆ ತಲುಪಿದ್ದಾರೆ. ಅಮ್ಮನನ್ನು ಸಾವಿರಾರು ಅಭಿಮಾನಿಗಳು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಜಯಲಲಿತಾ ನಿವಾಸ 22 ಕಿ.ಮೀ ದೂರವಿದ್ದು, ದಾರಿಯುದ್ದಕ್ಕೂ ಸಾವಿರಾರು ಜನರು ಅಮ್ಮ ಅಮ್ಮ ಎಂದು ಘೋಷಣೆಗಳನ್ನು ಕೂಗುತ್ತಾ ಅವರಿಗೆ ಸ್ವಾಗತ ಕೋರಿದ್ದಾರೆ.

ಸಮಯ 4.17 : ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಚೆನ್ನೈಗೆ ಹೊರಟಿದೆ.

ಸಮಯ 4 ಗಂಟೆ : ಜಯಲಲಿತಾ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ವಿಮಾನ ನಿಲ್ದಾನದ ಗೇಟಿನ ಬಳಿ ಕಾರಿನಿಂದಲೇ ಅಭಿಮಾನಿಗಳಿಗೆ ಅಮ್ಮಾ ಕೈ ಬೀಸಿದರು.

ಸಮಯ 3.45 : ಒಂದೇ ಕಾರಿನಲ್ಲಿ ಜಯಲಲಿತಾ ಮತ್ತು ಶಶಿಕಲಾ ಎಚ್‌ಎಎಲ್‌ಗೆ ಪ್ರಯಾಣ ಬೆಳೆಸಿದ್ದು, ಇಳವರಸಿ ಮತ್ತು ಸುಧಾಕರನ್ ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ.

ಸಮಯ 3.35 : ಕಾರಿನೊಳಗಿಂದಲೇ ಜಯಲಲಿತಾ ಅವರು ಅಭಿಮಾನಿಗಳಿಗೆ ಕೈ ಮುಗಿದು ನಮಸ್ಕಾರ ಮಾಡಿದ್ದಾರೆ.

ಸಮಯ 3.30: ಜಯಲಲಿತಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ನಂತರ ಪ್ರಯಾಣಿಸುತ್ತಿರುವ ಕಾರಿಗೆ ಹೂವಿನ ಹಾರಗಳನ್ನು ಎಸೆದು ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದ್ದಾರೆ.

ಸಮಯ 3.15 : ಜಯಲಲಿತಾ ಜೈಲಿನಿಂದ ಬಿಡುಗಡೆ

ಸಮಯ 3.07 : ಜಯಲಲಿತಾ ಮತ್ತು ಮೂವರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಸಮಯ 2.40 : ಜಯಲಲಿತಾ ಬಿಡುಗಡೆ ಆದೇಶ ಪ್ರತಿಯನ್ನು ನ್ಯಾಯಾಲಯದಿಂದ ತಂದ ಸಂದೇಶವಾಹಕ ವೆಂಕಟೇಶ್ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕ ಜಯಸಿಂಹ ಅವರಿಗೆ ಸಲ್ಲಿಸಿದ್ದಾರೆ.

ಸಮಯ 2.16 : ಪರಪ್ಪನ ಅಗ್ರಹಾರ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಜನರು ಮತ್ತು ಪೊಲೀಸರು ಮಳೆಯಲ್ಲಿ ನೆನೆಯುತ್ತಿದ್ದಾರೆ. ಆದರೆ, ಜಯಾ ಅಭಿಮಾನಿಗಳು ಮಳೆಯಲ್ಲೇ ಅಮ್ಮನಿಗಾಗಿ ಕಾದು ನಿಂತಿದ್ದಾರೆ.

ಸಮಯ 2 ಗಂಟೆ : ಜಯಲಲಿತಾ ಬಿಡುಗಡೆ ಆದೇಶಕ್ಕೆ ನ್ಯಾಯಮೂರ್ತಿ ಮತ್ತು ಶ್ಯೂರಿಟಿ ನೀಡಿದವರ ಸಹಿ ಆಗಿದ್ದು, ಅದನ್ನು ಹಿಡಿದು ಸಂದೇಶವಾಹಕ ವೆಂಕಟೇಶ್ ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿದ್ದಾರೆ. ಕೆಲವು ನಿಷಮಿಗಳಲ್ಲಿ ವೆಂಕಟೇಶ್ ಆದೇಶವನ್ನು ಜೈಲು ಅಧೀಕ್ಷಕರಿಗೆ ತಲುಪಿಸಲಿದ್ದಾರೆ.

ಸಮಯ 1.25 : ಜಯಲಲಿತಾ ಬಿಡುಗಡೆ ಆದೇಶ ಪ್ರತಿ ಸಿದ್ಧವಾಗಿದ್ದು, ಅದನ್ನು ನ್ಯಾಯಮೂರ್ತಿಗಳ ಸಹಿಗೆ ಕಳುಹಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಪ್ರತಿಯನ್ನು ಸಿಟಿ ಸಿವಿಲ್ ಕೋರ್ಟ್‌ ಆವರಣದಲ್ಲಿರುವ ವಿಶೇಷ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗುತ್ತಿದೆ.

ಸಮಯ 12.57 : 1.30ರಿಂದ 3.30ರ ತನಕ ಯಮಗಂಡ ಕಾಲವಿದೆ. ಆದ್ದರಿಂದ ಮಧ್ಯಾಹ್ನ 3.30ರ ನಂತರ ಜೈಲಿನಿಂದ ಹೊರಬರುವಂತೆ ಜ್ಯೋತಿಷಿಗಳು ಜಯಲಲಿತಾಗೆ ಸಲಹೆ ನೀಡಿದ್ದಾರೆ. ಆದ್ದರಿಂದ ಅವರ ಬಿಡುಗಡೆ 3.30ರ ನಂತರ ಆಗುವ ಸಾಧ್ಯತೆ ಇದೆ. [ಜಯಾಗೆ ಕಾಡಿದ ರಾಹು ಕಾಲ ಯಮಗಂಡ ಕಾಲ!]

J Jayalalithaa

ಸಮಯ 12.25 : ಎಚ್‌ಎಎಲ್ ವಿಮಾನ ನಿಲ್ದಾಣದತ್ತ ಜಯಲಲಿತಾ ಅಭಿಮಾನಿಗಳು ಆಗಮಿಸುತ್ತಿರುವುದರಿಂದ ವಿಮಾನ ನಿಲ್ದಾಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. [ಜಯಲಲಿತಾಗೆ ಜಾಮೀನು ಮಂಜೂರು]

ಸಮಯ 12.15 : ಜಯಲಲಿತಾ ಅವರ ಬಿಡುಗಡೆ ಹಿನ್ನಲೆಯಲ್ಲಿ ತಮಿಳುನಾಡಿನಿಂದ ಸಿಎಂ, ಸಚಿವರು, ಶಾಸಕರು ಆಗಮಿಸಿದ್ದಾರೆ. ಜಯಲಲಿತಾ ಅವರ ಅಪಾರ ಅಭಿಮಾನಿಗಳು ಆಗಮಿಸಿದ್ದಾರೆ. ಭದ್ರತೆಗಾಗಿ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸಜ್ಜಾಗಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಜಯಲಲಿತಾ ಅವರಿಗೆ ಇರುವ ಝೆಡ್ ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿಲ್ಲ. ಆದ್ದರಿಂದ ಜೈಲಿನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ತನಕ ಅದನ್ನು ಮುಂದುವರೆಸಲಾಗುತ್ತದೆ. ಜೈಲಿನಿಂದ ಏರ್‌ಪೋರ್ಟ್‌ಗೆ ತೆರಳುವ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಎಂ.ಎನ್.ರೆಡ್ಡಿ ಹೇಳಿದ್ದಾರೆ.

ಸಮಯ 12.10 : ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆ 500 ಪೊಲೀಸರ ನಿಯೋಜನೆ, ಅಮ್ಮ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಸಿದ್ಧತೆ

ಸಮಯ 12 ಗಂಟೆ : ಪರಪ್ಪನ ಅಗ್ರಹಾರ ಜೈಲಿನ ಬಳಿ ಆಗಮಿಸಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಭದ್ರತೆ ಬಗ್ಗೆ ಪರಿಶೀಲನೆ

ಸಮಯ 11.50 : ನಾಲ್ವರು ಅಪರಾಧಿಗಳ ಕಡೆಯಿಂದ ತಲಾ ಒಂದು ಕೋಟಿ ರೂ. ಬಾಂಡ್ ಬರೆಸಿಕೊಳ್ಳುವಂತೆ ನ್ಯಾಯಮೂರ್ತಿ ಕುನ್ಹಾ ಅವರು ಜೈಲು ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ.

ಸಮಯ 11.43 : ಜಯಲಲಿತಾ ಅವರ ಬಿಡುಗಡೆಗೆ ನೀಡಿದ ಒಂದು ಕೋಟಿ ರೂ.ಮೌಲ್ಯದ ಶ್ಯೂರಿಟಿಯನ್ನು ವಿಶೇಷ ಕೋರ್ಟ್‌ ಒಪ್ಪಿಕೊಂಡಿದೆ. ಬೆಂಗಳೂರಿನ ಗುಣಜ್ಯೋತಿ ಮತ್ತು ಭರತ್‌ ಎನ್ನುವವರು ಜಿಗಣಿಯಲ್ಲಿರುವ 1 ಕೋಟಿ ಮೌಲ್ಯದ ಆಸ್ತಿಯನ್ನು ಶ್ಯೂರಿಟಿಯಾಗಿ ನೀಡಿದ್ದಾರೆ. ಅಪರಾಧಿಗಳು ನಾಪತ್ತೆಯಾದರೆ ನೀವೆ ಹೊಣೆಗಾರರು ಎಂದು ಶ್ಯೂರಿಟಿ ನೀಡಿದವರಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.

Jayalalithaa

ಸಮಯ 11.31 : ನ್ಯಾ.ಜಾನ್‌ ಮೈಕಲ್‌ ಡಿ ಕುನ್ಹಾ ಅವರು ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ಜಯಲಲಿತಾ ಸೇರಿ ಮೂವರ ಬಿಡುಗಡೆಗೆ ಆದೇಶ ನೀಡಿದ್ದಾರೆ. ವಿಶೇಷ ಸಂದೇಶ ವಾಹಕರು ನ್ಯಾಯಮೂರ್ತಿಗಳು ನೀಡಿದ ಆದೇಶವನ್ನು ಜೈಲಿಗೆ ತಲುಪಿಸಲಿದ್ದಾರೆ.

ಸಮಯ 11 ಗಂಟೆ : ವಿಶೇಷ ಕೋರ್ಟ್ ಕಲಾಪ ಆರಂಭವಾಗಿದ್ದು, ನ್ಯಾ.ಜಾನ್‌ ಮೈಕಲ್‌ ಡಿ ಕುನ್ಹಾ ಅವರಿಗೆ ಸುಪ್ರೀಂಕೋರ್ಟ್‌ ಆದೇಶದ ಪ್ರತಿಯನ್ನು ವಕೀಲರು ಸಲ್ಲಿಸಿದ್ದಾರೆ.

ಸಮಯ 10.47 : ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಬೆಂಗೂರಿಗೆ ಆಗಮನ

ಸಮಯ 10.40 : ಜಯಲಲಿತಾ ಅವರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಅವರಿಗೆ ನೀಡಲಾಗಿರುವ ಝೆಡ್‌ಪ್ಲಸ್ ಭದ್ರತೆ ಮುಂದುವರೆಯಲಿದೆ. ಅವರಿಗೆ ಭದ್ತೆ ನೀಡುವ ಎನ್‌ಎಸ್‌ಜಿ ಕಮಾಂಡೋಗಳ ಪಡೆ ಜೈಲಿನ ಬಳಿಗೆ ಆಗಮಿಸಿದೆ.

Parappana Agrahara

ಸಮಯ 10 ಗಂಟೆ : ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ ಅವರು ಕೋರ್ಟ್‌ಗೆ ಆಗಮಿಸಿದ್ದು, 11 ಗಂಟೆಗೆ ಕೋರ್ಟ್ ಕಲಾಪ ಆರಂಭವಾಗಲಿದೆ.

ಸಮಯ 9.30 : ಜೈಲಿನಿಂದ ಹೊರಬಂದ ತಕ್ಷಣ ಜಯಲಲಿತಾ ಅವರಿಗೆ ಝೆಡ್‌ ಪ್ಲಸ್ ಭದ್ರತೆ ಮುಂದುವರೆಯಲಿದೆ, ಪರಪ್ಪನ ಅಗ್ರಹಾರದಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿರುವ ಜಯಲಲಿತಾ ಅಲ್ಲಿಂದ ವಿಶೇಷ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.

ಸಮಯ 9ಗಂಟೆ : ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಭದ್ರತೆ ಬಗ್ಗೆ ಪರಿಶೀಲನೆ

ಸಮಯ 8.30 : ರಾಜ್ಯ ಸಭಾ ಸದಸ್ಯ ಸೆಲ್ವ ಕುಮಾರ್ ಸೇರಿ ಹಲವರು ಅಮ್ಮನನ್ನು ಸ್ವಾಗತಿಸಲು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ.

ಸಮಯ 8 ಗಂಟೆ : ಪರಪ್ಪನ ಅಗ್ರಹಾರ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್‌, 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

Jayalalithaa

ಸಮಯ 7.30 : ಅಮ್ಮನ ಬಿಡುಗಡೆ, ಪರಪ್ಪನ ಅಗ್ರಹಾರ ಸುತ್ತ-ಮುತ್ತ ನೂರಾರು ಬೆಂಬಲಿಗರ ಜಮಾವಣೆ

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾ. ಮದನ್ ಬಿ ಲೋಕೂರ್ ಹಾಗೂ ನ್ಯಾ. ಎ.ಕೆ.ಸಿಕ್ರಿ ಅವರ ಪೀಠ ಎಲ್ಲಾ ನಾಲ್ವರು ಅಪರಾಧಿಗಳಿಗೂ ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು. ಆದರೆ, ಸುಪ್ರೀಂ ಆದೇಶದ ಪ್ರತಿ ಬೆಂಗಳೂರು ತಲುಪುವುದು ತಡವಾದ ಕಾರಣ, ಶನಿವಾರ ಜಾಮೀನು ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಬಿಡುಗಡೆ ಯಾಗಲಿದ್ದಾರೆ.

English summary
AIADMK supremo J Jayalalithaa, granted bail by the Supreme Court in the disproportionate assets case on Friday. Jayalalithaa released form Bangalore jail on Saturday after completion of formalities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X