ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಪ್ತ ಭ್ರಷ್ಟರ ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಮಂಗಳವಾರ ರಾಜ್ಯದ 7 ಸರ್ಕಾರಿ ಅಧಿಕಾರಿಗಳ ಮನೆ.ಕಚೇರಿ ಹಾಗೂ ಸಂಬಂಧಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಆಸ್ತಿ ವಿವರ ಇಲ್ಲಿದೆ.

By Ramesh
|
Google Oneindia Kannada News

ಬೆಂಗಳೂರು, ಮಾರ್ಚ್, 01 : ಮಿತಿ ಮೀರಿ ಆದಾಯ ಹೊಂದಿರುವವರ ಮೆನೆ ಹಾಗೂ ಕಚೇರಿಗಳ ಮೇಲೆ ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಜ್ಯದ ಬೆಳಗಾವಿ, ಚಿತ್ರದುರ್ಗ, ಹುಬ್ಬಳ್ಳಿ, ಬೀದರ್, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ 7 ಮಂದಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ದೊರೆತ ಕೋಟ್ಯಾಂತರ ರು. ಬೆಲೆಬಾಳುವ ತಮ್ಮ ಹೆಸರಿನಲ್ಲಿರುವ ಹಾಗೂ ಬೇನಾಮಿ ಆಸ್ತಿಗಳನ್ನು ಪತ್ತೆಮಾಡಿ, ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇನ್ನು ಯಾವ-ಯಾವ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಲಾಯಿತು. ಅವರ ಮನೆಗಳ ಸಿಕ್ಕ ಆಸ್ತಿ, ಬಂಗಾರ ನಗದು ಸೇರಿದಂತ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಹುಬ್ಬಳ್ಳಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ

ಹುಬ್ಬಳ್ಳಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ

ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಮನೆ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದಾರೆ. *1 ಲಕ್ಷ 35 ಸಾವಿರ ರು. ನಗದು ಹಣ ಕಚೇರಿಯಲ್ಲಿ. * 6 ಲಕ್ಷ 94 ಸಾವಿರ ರು ನಗದು ಹಣ ಮನೆಯಲ್ಲಿ ಸಿಕ್ಕಿದೆ. ಅಂದಾಜು 5 ಸಾವಿರ ವಿವಿಧ ಬಗೆಯ ಸೀರೆಗಳು. * ಸುಮಾರು 12 ಲಕ್ಷ ಬೆಲೆಯ ಹೋಂಡಾ ಅಮೇಜ್ ಕಾರು, * ನೆಹರು ನಗರದಲ್ಲಿ 1 ಕೋಟಿ ಬೆಲೆ ಬಾಳುವ ಡೂಪ್ಲೆಕ್ಸ್ ವಾಸದ ಮನೆ, * ಬೆಂಗಳೂರಿನ ಹೆಸರಘಟ್ಟದಲ್ಲಿ ಒಂದು ಫ್ಲಾಟ್, * ಹುಬ್ಬಳ್ಳಿಯ ತಿಮ್ಮಸಂದ್ರ ಹಳ್ಳಿಯಲ್ಲಿ 2 ಪ್ಲಾಟ್ಸ್, * ಮಗ ಮನೋಹರ್ ಹೆಸರಿನಲ್ಲಿ ಎಸ್.ಬಿ.ಎಂ ಬ್ಯಾಂಕ್‌ನಲ್ಲಿ 5.5 ಲಕ್ಷ ಠೇವಣಿ, * ಕೋಳಿವಾಡ ಗ್ರಾಮದಲ್ಲಿ 20 ಎಕರೆ ಜಮೀನು, *ನವಲಗುಂದ ತಾಲ್ಲೂಕಿನಲ್ಲಿ 4 ಎಕರೆ ಜಮೀನು, ದಾಳಿ ವೇಳೆ ಇಷ್ಟೆಲ್ಲ ಆಸ್ತಿ ಪತ್ತೆಯಾಗಿದೆ.

ಸೆಂಟ್ರೆಲ್ ಪ್ರಾಜೆಕ್ಟ್, ಬಿ.ಬಿ.ಎಂ.ಪಿಯ ಮುಖ್ಯ ಇಂಜಿನಿಯರ್ ಬೆಂಗ್ಳೂರು

ಸೆಂಟ್ರೆಲ್ ಪ್ರಾಜೆಕ್ಟ್, ಬಿ.ಬಿ.ಎಂ.ಪಿಯ ಮುಖ್ಯ ಇಂಜಿನಿಯರ್ ಬೆಂಗ್ಳೂರು

ಸೆಂಟ್ರೆಲ್ ಪ್ರಾಜೆಕ್ಟ್, ಬಿ.ಬಿ.ಎಂ.ಪಿಯ ಮುಖ್ಯ ಇಂಜಿನಿಯರ್ ಕೆ. ಟಿ. ನಾಗರಾಜು ಅವರ ಜಯನಗರದ 4ನೇ ಬ್ಲಾಕಿನಲ್ಲಿರುವ ವಾಸದ ಮನೆ, ಹಾಸನ ಜಿಲ್ಲೆ ಸಕಲೇಶಪುರದಲ್ಲಿರುವ ಅವರ ಬಾವಮೈದುನ ರಾಜೀವ್ ರವರ ಮನೆ, ಸಕಲೇಶಪುರದಲ್ಲಿರುವ ಇವರ ಸ್ನೇಹಿತ ನಾಗೇಶ ಮನೆ ಹಾಗೂ ಇವರ ಬಿಬಿಎಂಪಿ ಕಚೇರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
* ಪತ್ನಿ ಎಂ.ಬಿ.ರೂಪ ಹೆಸರಿನಲ್ಲಿ ಬೇಲೂರು ತಾಲ್ಲೂಕಿನಲ್ಲಿ 40 ಎಕರೆ ಕಾಫಿ ಎಸ್ಟೇಟ್. * ಭಾಮೈದನಾದ ಎಂ.ಬಿ.ರಾಜೀವ್ ಹೆಸರಿನಲ್ಲಿ 3.240 ಚದುರ ಅಡಿಗಳ ಸೈಟ್ ಕುದುರೆ ಗ್ರಾಮದಲ್ಲಿ. * ಸ್ನೇಹಿತನಾದ ಹಾರ್ದಿಕ್ ಗೌಡ ಮತ್ತು ಸಹೋದರನಾದ ಚಂದ್ರಪ್ಪಗೌಡ ಹೆಸರಿನಲ್ಲಿ 5 ಕೋಟಿ ರು. ಮೌಲ್ಯದ 72 ಎಕರೆ ಕಾಫಿ ಎಸ್ಟೇಟ್‌ನ್ನು ಸಕಲೇಶಪುರ ತಾಲ್ಲೂಕಿನಲ್ಲಿ. * ಮಾವ ಬಿಳಿಗೌಡ ಹೆಸರಿನಲ್ಲಿ ಸೀಗೇಹಳ್ಳಿ ಬೆಂಗಳೂರಲ್ಲಿ 5 ಲಕ್ಷ ರು. ಬೆಲೆಬಾಳುವ 5 ಗುಂಟೆ ಜಮೀನು.* 35 ಲಕ್ಷ ಬೆಲೆ ಬಾಳುವ ಜಯಾಗಾರ್ಡೇನಿಯ ಅಪಾರ್ಟ್ ಮೆಂಟ್, ಕಾವೇರಿನಗರ, ನಾಗಾವರ, ಬೆಂಗಳೂರು ಹಾಗೂ ಅಂದಾಜು 25 ಲಕ್ಷ ರೂ ಬೆಲೆಬಾಳುವ ಮೈಸೂರು ನಗರದ, ಹೂಟಗಹಳ್ಳಿಯಲ್ಲಿ ಕಮರ್ಷಿಯಲ್ ಕಟ್ಟಡ. * ಜಯನಗರ ಬೆಂಗಳೂರಲ್ಲಿ 40*60 ನಿವೇಶನ ಇದರ ಬೆಲೆ ಸುಮಾರು 20 ಲಕ್ಷ ರೂಗಳು. * ಡಾಲರ್ಸ್ ಲೇಔಟ್, ಜೆ.ಪಿ.ನಗರ,ಬೆಂಗಳೂರಲ್ಲಿ 80*50 ಅಡಿ ಅಳತೆಯ ನಿವೇಶನವನ್ನು ತನ್ನ ಸಹೋದರ ಕೃಷ್ಣೇಗೌಡ ಹೆಸರಿನಲ್ಲಿ 3 ಮಹಡಿಗಳ ಮನೆ. ಇದರ ಬೆಲೆ ಸುಮಾರು 2 ಕೋಟಿ ರೂಗಳು. * 2013ರಲ್ಲಿ ಟೆಲಿಕಾಂ ಎಂಪ್ಲಾಯೀಸ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ರವರಿಂದ ತನ್ನ ಹೆಸರಿನಲ್ಲಿ ಜಾಲ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ 80*50 ಸೈಟ್ ಇದರ ಬೆಲೆ ಅಂದಾಜು 12 ಲಕ್ಷ ರೂಗಳು.* ಪತ್ನಿ ಎಂ.ಬಿ.ರೂಪ ಹೆಸರಿನಲ್ಲಿ 30 ಗುಂಟೆ ಜಮೀನು ಕುರುಬರಹಳ್ಳಿ ಗ್ರಾಮದಲ್ಲಿ. * ಭಾಮೈದ ಎಂ.ಬಿ.ರಾಜೀವ್ ಹೆಸರಿನಲ್ಲಿ 2360 ಚದುರ ಅಡಿಗಳ ಸೈಟ್ ಸಕಲೇಶಪುರದಲ್ಲಿ ಸುಮಾರು 3,91000 ರೂಗಳಿಗೆ. * 7, 32000 ರು ನಗದು ಹಣ ಜಯನಗರದ ಮನೆಯಲ್ಲಿ ದೊರೆತಿದೆ. 2 ಬ್ಯಾಂಕ್ ಲಾಕರ್ಸ್ ಇನ್ನೂ ಪರಿಶೀಲನೆಯಲ್ಲಿದೆ. * ಸುಮಾರು 800 ಗ್ರಾಂ ಚಿನ್ನದ ಒಡವೆಗಳು. * 1 ವಜ್ರದ ಉಂಗುರ, * ಅಂದಾಜು 6 ಕೆಜಿಯಷ್ಟು ಬೆಳ್ಳಿ ಆಭರಣಗಳು, * 1 ಸ್ಯಾಂಟ್ರೋ ಕಾರ್.

ಉಪ ತಹಶೀಲ್ದಾರ್, ಹಿರೇಬಾಗೇವಾಡಿ, ಬೆಳಗಾವಿ ಜಿಲ್ಲೆ

ಉಪ ತಹಶೀಲ್ದಾರ್, ಹಿರೇಬಾಗೇವಾಡಿ, ಬೆಳಗಾವಿ ಜಿಲ್ಲೆ

ಬೆಳಗಾವಿ ನಗರದ ವಾಸದ ಮನೆ, ಆಳಿಯನಾದ ಮೊಹಮದ್ ಇಸಾಕ್ ಇವರ ಬಾಳೇಕುಂದ್ರಿಯಲ್ಲಿನ ವಾಸದ ಮನೆ, ಹಾಗೂ ಕರ್ತವ್ಯ ನಿರ್ವಹಿಸುವ ಉಪ ತಹಶೀಲ್ದಾರ್ ರವರ ಕಚೇರಿ, ಹಿರೇಬಾಗೇವಾಡಿ, ಬೆಳಗಾವಿ ಜಿಲ್ಲೆ ಇಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು. * ಅಂದಾಜು 380 ಗ್ರಾಂ ಚಿನ್ನ, * 10,000 ರು. ನಗದು,* 5,00,000 ರು ಫಿಕ್ಸೆಡ್ ಡೆಪೋಸಿಟ್, 2 ಲಕ್ಚ ರು. ಬ್ಯಾಂಕ್ ಬ್ಯಾಲೇನ್ಸ್, 3 ದ್ವಿಚಕ್ರ ವಾಹನಗಳು, ಒಂದು ಶೆವರ್ ಲೆಟ್ ಕಾರು, * 60*40ಸೈಟ್, ರಾಮತೀರ್ಥನಗರ, ಬೆಳಗಾವಿಲ್ಲಿ, ಇದರ ಬೆಲೆ ಸುಮಾರು 1,50,000 ರೂಗಳು. * ಕಣಬರಗಿಯಲ್ಲಿನ ವಾಸದ ಮನೆ ಅಂದಾಜು ಬೆಲೆ40 ಲಕ್ಷ ರೂಗಳು, * ಕೆ.ಐ.ಎ.ಡಿ.ಬಿ ಯಿಂದ 1.25 ಲಕ್ಷ ರೂಗಳಿಗೆ 40*60 ಸೈಟ್, ಇದರ ಅಂದಾಜು ಬೆಲೆ 20 ಲಕ್ಷ ರೂಗಳು, *ಅಳಿಯನ ಮನೆಯಲ್ಲಿ 50 ಸಾವಿರ ನಗದು 230ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿ.

ಹಿರಿಯ ಮೋಟಾರ್ ವಾಹನ ನಿರೀಕ್ಷಕರು, ಚಿತ್ರದುರ್ಗ

ಹಿರಿಯ ಮೋಟಾರ್ ವಾಹನ ನಿರೀಕ್ಷಕರು, ಚಿತ್ರದುರ್ಗ

ವಾಸವಿರುವ ಶಿವಮೊಗ್ಗ ನಗರದ ವಿನೋಭ ನಗರದ ವಾಸದ ಮನೆ, ಚಿತ್ರದುರ್ಗದಲ್ಲಿರುವ ಬಾಡಿಗೆ ಮನೆ ಹಾಗೂ ಕರುಣಾಕರ ಕರ್ತವ್ಯ ನಿರ್ವಹಿಸುವ ಸ್ಥಳ ಚಿತ್ರದುರ್ಗ, ಆರ್.ಟಿ.ಓ ಕಚೇರಿಗೆ ಏಕಕಾಲದಲ್ಲಿ ದಾಳಿ.
* ತರಿಕೆರೆ ತಾಲ್ಲೂಕು, ಅಮೃತಪುರ ಹೋಬಳಿ, ನಾಗೇಹಳ್ಳಿ ಗ್ರಾಮದಲ್ಲಿ 13 ಎಕರೆ ಪಿತ್ರಾರ್ಜಿತ ಆಸ್ತಿ, * ಲಕ್ಕವಳ್ಳಿ ಹೋಬಳಿ, ಮಂಡನಹಳ್ಳಿ ಗ್ರಾಮದಲ್ಲಿ 1 ಎಕರೆ 30 ಗುಂಟೆ ಜಮೀನು. ಅಂದಾಜು 15 ಲಕ್ಷ ರು.* ಮಂಡನಹಳ್ಳಿ ಗ್ರಾಮದಲ್ಲಿ ಮಗಳ ಹೆಸರಿನಲ್ಲಿ ೮ ಗುಂಟೆ ಜಮೀನು.* 5 ಲಕ್ಷ ರು. ಮ್ಯೂಚುಯಲ್ ಫಂಡ್, ಯುಟಿಐ ಬಾಂಡ್ಸ್ ಸುಮಾರು 2.5 ಲಕ್ಷಗಳು. * ತರಿಕೇರೆ ತಾಲ್ಲೂಕು ಗುಂಡೇನಹಳ್ಳಿಯಲ್ಲಿ ಪತ್ನಿ ಹೆಸರಿನಲ್ಲಿ 5 ಎಕರೆ ಜಮೀನು ಅಂದಾಜು ವೆಚ್ಚ 50 ಲಕ್ಷ ರು.* ಶಿವಮೊಗ್ಗದಲ್ಲಿ ವಿನೋಭ ನಗರದಲ್ಲಿ ಎರಡು ಖಾಲಿ ನಿವೇಶನಗಳು, ನವಲೇ ಹತ್ತಿರ ಮ್ಯಾಕ್ಸ್ವೆಲ್ ಬಡಾವಣೆಯಲ್ಲಿ 1 ಸೈಟ್. ಒಟ್ಟು ಅಂದಾಜು ಬೆಲೆ 24 ಲಕ್ಷ ರು.* ಶಿವಮೊಗ್ಗ ನಗರದ ವಿನೋಬ ನಗರದಲ್ಲಿ ಇರುವ ವಾಸದ ಮನೆ ಅಂದಾಜು 80 ಲಕ್ಷ. * ಮಂಗಳೂರು ನಗರದಲ್ಲಿ ಒಂದು ಫ್ಲಾಟ್.* ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಂ.ಎಲ್.ಎ ಬಡಾವಣೆಯಲ್ಲಿರುವ ನೆಲೆ ರೆಸಿಡೆನ್ಸಿಯಲ್ಲಿ ಒಂದು ಫ್ಲಾಟ್.* 1 ಕೆನೆಟಿಕ್ ದ್ವಿಚಕ್ರ ವಾಹನ ಮತ್ತು 2 ಹುಂಡೈ ಕಾರುಗಳು.* ಸುಮಾರು 250 ಗ್ರಾಂ ಚಿನ್ನದ ಆಭರಣಗಳು,* ಸುಮಾರು 3 ಕೆ.ಜಿ ಬೆಳ್ಳಿಯ ವಸ್ತುಗಳು. * ಎಂಟು ವಿಮಾ ಪಾಲಿಸಿಗಳು.

ಪಿ.ಡಿ. ಕುಮಾರ್, ಕಾರ್ಯಪಾಲಕ ಅಭಿಯಂತರರು, ಬನಶಂಕರಿ, ಬಿಡಿಎ ಕಚೇರಿ

ಪಿ.ಡಿ. ಕುಮಾರ್, ಕಾರ್ಯಪಾಲಕ ಅಭಿಯಂತರರು, ಬನಶಂಕರಿ, ಬಿಡಿಎ ಕಚೇರಿ

* ಜೆ.ಪಿ ನಗರದಲ್ಲಿ ಸುಮಾರು 2 ಕೋಟಿ ಬೆಲೆ ಬಾಳುವ ಸ್ವಂತ ಮನೆ.* ಹೆಚ್‌ಎಸ್ ಆರ್ ಲೇಔಟ್‌ನ ಇಟ್ಟಿನ ಅರ್ಪಾಟಮೆಂಟ್ ನಲ್ಲಿ ಒಂದು ಫ್ಲಾಟ್. *ಜೆ.ಪಿ ನಗರ ಸಾರಕ್ಕಿ ಸಿಗ್ನಲ್‌ನಲ್ಲಿ ಒಂದು ಮನೆ.* ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನಲ್ಲಿ 4 ಎಕರೆ ಜಮೀನು.(ತನ್ನ ಹೆಸರಿನಲ್ಲಿ) * ಒಂದು ಹೋಂಡಾ ಸಿಟಿ ಮತ್ತು ಮಾರುತಿ ಸಿಲ್ಯಾರಿಯೋ ಕಾರ್. (ಪತ್ನಿಯ ಹೆಸರಿನಲ್ಲಿ).* ವಾಸದ ಮನೆಯಲ್ಲಿ ಸುಮಾರು 2 ಲಕ್ಷ 30 ಸಾವಿರದ ನಗದು, ಸುಮಾರು 12 ಲಕ್ಷ ರೂಗಳ ಚಿನ್ನದ ಆಭರಣಗಳು, ಸುಮಾರು 2.5 ಲಕ್ಷದಷ್ಟು ಬೆಳ್ಳಿಯ ಒಡವೆಗಳು, ಸುಮಾರು 3 ಲಕ್ಷ ರುಗಳ ವಜ್ರದ ಒಡವೆಗಳು.

ಜಗನ್ನಾಥ ಬಿನ್ ಮಾನಿಕಪ್ಪ ಊಟಗಿ ಇ.ಓ,ತಾಲ್ಲೂಕ ಪಂಚಾಯತ್ ಕಚೇರಿ, ಔರಾದ್

ಜಗನ್ನಾಥ ಬಿನ್ ಮಾನಿಕಪ್ಪ ಊಟಗಿ ಇ.ಓ,ತಾಲ್ಲೂಕ ಪಂಚಾಯತ್ ಕಚೇರಿ, ಔರಾದ್

ಇವರ ಬೀದರ್ ನಗರದಲ್ಲಿರುವ ವಾಸದ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. * ಬೀದರ್ ನಗರ ಬ್ರಹ್ಮಾಪುರ ಕಾಲೋನಿಯಲ್ಲಿ ಜಗನ್ನಾಥ ರವರ ಹೆಸರಿನಲ್ಲಿರುವ 900 ಚ.ಅ ಒಂದು ಮನೆ, * ಬೀದರ್ ನಗರ ಬ್ರಹ್ಮಾಪುರ ಕಾಲೋನಿಯಲ್ಲಿ ಪತ್ನಿ ಶ್ರೀಮತಿ. ಸುರೇಖ ರವರ ಹೆಸರಿನಲ್ಲಿ 800 ಚ. ಅ.ಒಂದು ಮನೆ * ಸುಮಾರು 400 ಗ್ರಾಂ ಚಿನ್ನ, * ಸುಮಾರು 75 ಗ್ರಾಂ ಬೆಳ್ಳಿ, * 20110 ರೂಗಳ ನಗದು. ನಿರ್ಣಾ ಗ್ರಾಮ, ಹುಮನಾಬಾದ್ ತಾಲ್ಲೂಕ್, ಬೀದರ್ ಜಿಲ್ಲೆಯಲ್ಲಿ 16 ಎಕರೆ ಜಮೀನು. * ಆಲ್ಟೋ ಕಾರ್ ಪತ್ನಿ ಶ್ರೀಮತಿ. ಸುರೇಖ ಹೆಸರಿನಲ್ಲಿರುತ್ತದೆ. * ಒಂದು ಟಿ.ವಿ.ಎಸ್ ವಿಕ್ಟರ್ ಶ್ರೀ.ಜಗನ್ನಾಥ ಹೆಸರಿನಲ್ಲಿರುತ್ತದೆ.

ಶಿವಕುಮಾರ್ ಡೊಳ್ಳಿನ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ (ಪಿ.ಡಿ.ಓ), ಗದಗ ಜಿಲ್ಲೆ

ಶಿವಕುಮಾರ್ ಡೊಳ್ಳಿನ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ (ಪಿ.ಡಿ.ಓ), ಗದಗ ಜಿಲ್ಲೆ

ಇವರ ರೋಣ್ ತಾಲ್ಲೂಕಿನ, ಹಿರೇಹಾಳ್ ಗ್ರಾಮದ ವಾಸದ ಮನೆ, ಯಾವಗಲ್ ಗ್ರಾಮದ ತನ್ನ ಕಚೇರಿ, ಗದಗ ನಗರದ ಅವರ ಅಕ್ಕನ ಮನೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆ ತಾಲ್ಲೂಕಿನ ಅವರ ಅಕ್ಕನ ಮನೆಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. * ಹಿರೇಹಾಳದಲ್ಲಿ 3 ಮನೆಗಳು, ಹಾಗೂ 3 ಸೈಟ್‌ಗಳು. (ಸ್ವಂತ ಹೆಸರಿನಲ್ಲಿ) * ರೋಣ್ ತಾಲ್ಲೂಕು ಹಿರೇಹಾಳದಲ್ಲಿ ಹಾಗೂ ಮುಂಡರಗಿ ತಾಲ್ಲೂಕು ವಿಟ್ಲಾಪುರದಲ್ಲಿ ಒಟ್ಟು 16 ಎಕರೆ ಜಮೀನು.(ಸ್ವಂತ ಹೆಸರಿನಲ್ಲಿ) * ಶಿವಕುಮಾರ್ ತಮ್ಮ ಹೆಸರಿನಲ್ಲಿದ್ದ ರೋಣ್ ತಾಲ್ಲೂಕಿನಲ್ಲಿನ 2 ಎಕರೆ 32 ಗುಂಟೆ ಜಮೀನನ್ನು ತನ್ನ ಅಕ್ಕನಾದ ಪರಿಮಳ ರವರಿಗೆ ನೀಡಿದ್ದಾರೆ. * ಅಕ್ಕ ಪರಿಮಳ ಹೆಸರಿನಲ್ಲಿ 12 ವಿಮಾ ಪಾಲಿಸಿಗಳು.

English summary
Complete detail of Karnataka Anti-Corruption Bureau officers raid on 7 government officers at various district on February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X