ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಾಕಿನಲ್ಲಿ ಏರ್ ಆಂಬುಲೆನ್ಸ್ ಅಪಘಾತ, ಪೈಲಟ್ ಸಾವು

ಮೇದಾಂತ ಆಸ್ಪತ್ರೆಯ ಏರ್ ಆಂಬುಲೆನ್ಸ್ ವಿಮಾನಕ್ಕೆ ಬೆಂಕಿ ತಗುಲಿದೆ. ಬ್ಯಾಂಕಾಕಿನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದರೂ ಪೈಲಟ್ ಜೀವ ಹಾನಿಯಾಗಿದೆ. ಐದು ಮಂದಿ ಸಿಬ್ಬಂದಿ ಹೊಂದಿದ್ದ ವಿಮಾನ ತುರ್ತುಭೂಸ್ಪರ್ಶವಾಗಿ ಆತಂಕ ಮೂಡಿಸಿತು.

By Mahesh
|
Google Oneindia Kannada News

ಬ್ಯಾಂಕಾಕ್, ಮಾರ್ಚ್ 07: ಮೇದಾಂತ ಆಸ್ಪತ್ರೆಯ ಏರ್ ಆಂಬುಲೆನ್ಸ್ ವಿಮಾನಕ್ಕೆ ಬೆಂಕಿ ತಗುಲಿದೆ. ಬ್ಯಾಂಕಾಕಿನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದರೂ ಪೈಲಟ್ ಜೀವ ಹಾನಿಯಾಗಿದೆ. ಐದು ಮಂದಿ ಸಿಬ್ಬಂದಿ ಹೊಂದಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿ ಆತಂಕ ಮೂಡಿಸಿತು.

ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ ಈ ದುರ್ಘಟನೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

Pilot killed after Indian air ambulance crashes near Bangkok

ಪೈಲಟ್ ಅರುಣಾಕ್ಷ ನಂದಿ ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಾ.ಶೈಲೇಂದ್ರ ಹಾಗೂ ಡಾ.ಕೋಮಲ್ ಎಂಬ ಇಬ್ಬರು ವೈದ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ.


ಇಬ್ಬರಿಗೂ ಬ್ಯಾಂಕಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುವಾಗಿರುವ ನರ್ಸ್ ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.

ನವದೆಹಲಿಯಿಂದ ಬ್ಯಾಂಕಾಕಿಗೆ ಹೊರಟ್ಟಿದ್ದ ವಿಮಾನ ಮಾರ್ಗಮಧ್ಯದಲ್ಲಿ ಕೋಲ್ಕತಾದಲ್ಲಿ ಇಂಧನ ತುಂಬಿಸಿಕೊಳ್ಳಲು ನಿಲ್ಲಿಸಲಾಗಿತ್ತು. ನಂತರ ನಖೋಮ್ ಪಾಥಮ್ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ.

English summary
An Air Ambulance of Medanta Hospital with a five member crew crash landed after it caught fire near Bangkok. The pilot died while four others including two doctors and a nurse were injured
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X