ಅಮೆರಿಕದ ಸರ್ಜನ್ ಜನರಲ್ ಆಗಿ ಮಂಡ್ಯದ ವಿವೇಕ್
ವರ್ಜೀನಿಯಾ, ಏ.23: ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್ ಹಲ್ಲೇಗೆರೆ ಮೂರ್ತಿ (37) ಅವರು ಅಮೆರಿಕದ ಸರ್ಜನ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೋ ಬಿಡೆನ್ ಅವರು ವಿವೇಕ್ ಮೂರ್ತಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಉನ್ನತ ಹುದ್ದೆಗೆ ಏರಲು ನನ್ನ ಅಜ್ಜಿಯ ಆಶೀರ್ವಾದವೇ ಕಾರಣ ಎಂದು ಮೂರ್ತಿ ಇದೇ ಸಂದರ್ಭದಲ್ಲಿ ಹೇಳಿದ್ದು ವಿಶೇಷವಾಗಿತ್ತು.
ಈ ಸಮಾರಂಭದಲ್ಲಿ ಆರೋಗ್ಯ ಕಾರ್ಯದರ್ಶಿ ಸಿಲ್ವಿಯಾ ಬರ್ವೆಲ್ ಸೇರಿದಂತೆ ಅನೇಕ ಪ್ರಮುಖ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾನು ಈ ಉನ್ನತ ಸ್ಥಾನಕ್ಕೇರಲು ನನ್ನ ಅಜ್ಜಿ ಆಶೀರ್ವಾದ, ನನ್ನ ತಂದೆ ನನ್ನಲ್ಲಿಟ್ಟಿರುವ ನಂಬಿಕೆ, ತಾಯಿಯ ಪ್ರೀತಿ, ಸೋದರಿ ಹಾಗೂ ಗೆಳತಿಯ ವಿಶ್ವಾಸ ಕಾರಣವಾಗಿದೆ ಎಂದು ವಿವೇಕ್ ಮೂರ್ತಿ ಹೇಳಿದರು.

ನನ್ನ ತಂದೆ ಮಂಡ್ಯದ ರೈತನ ಮಗ, ನಾನು ರೈತನೊಬ್ಬನ ಮೊಮ್ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಮ್ಮ ಕುಟುಂಬ ಭಾರತದಲ್ಲೇ ಉಳಿದಿದ್ದರೆ ನಾನು ರೈತನಾಗಿರುತ್ತಿದ್ದೆ ಎಂದು ವಿವೇಕ್ ಹೆಮ್ಮೆಯಿಂದ ಹೇಳಿದ್ದಾರೆ.
ವಿವೇಕ್ ಮೂರ್ತಿ ಅವರ ಆಯ್ಕೆಯನ್ನು ಈ ಹಿಂದೆ ಸೆನೆಟ್ ಅನುಮೋದಿಸಿತ್ತು. ವಿವೇಕ್ ಪರ 51 ಮತಗಳು ಬಂದಿತ್ತ್ತು. ವಿವೇಕ್ ಅಮೆರಿಕದ ಅತ್ಯಂತ ಕಿರಿಯ ಸರ್ಜನ್ ಜನರಲ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಯುಎಸ್ ನ 19ನೇ ಸರ್ಜನ್ ಜನರಲ್ ಆಫ್ ಅಮೆರಿಕ ಆಗಿದ್ದಾರೆ. [ಅಮೆರಿಕದ ಅತ್ಯಂತ ಕಿರಿಯ ಜನರಲ್ ಸರ್ಜನ್]
ಮೂರ್ತಿ ಅವರು ಬೊಜ್ಜು ನಿವಾರಣೆ, ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳ ಬಗ್ಗೆ ಅಪಾರ ಸಂಶೋಧನೆ ನಡೆಸಿದ್ದಾರೆ. ಅಮೆರಿಕದಲ್ಲಿ ಶೇ 84ರಷ್ಟು ಆರೋಗ್ಯ ವೆಚ್ಚವನ್ನು ಈ ಕಾಯಿಲೆಗಳಿಗೆ ವ್ಯಯಿಸಲಾಗುತ್ತಿದೆ. ಇವಕ್ಕೆಲ್ಲ ಒಂದು ಪರಿಹಾರವನ್ನು ಡಾ.ಮೂರ್ತಿ ಅವರಿಂದ ನಿರೀಕ್ಷಿಸಬಹುದು ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ.

ಸರ್ಜನ್ ಜನರಲ್ ಹುದ್ದೆ: ಅಮೆರಿಕದ ಸಾರ್ವಜನಿಕರ ಒಟ್ಟಾರೆ ವೈದ್ಯಕೀಯ ಸೇವೆಗಳ ಮುಖ್ಯಸ್ಥ ; ಇವರ ಸೇವಾ ಅವಧಿ 4 ವರ್ಷ. ಸಾರ್ವಜನಿಕ ಆರೋಗ್ಯ ಕುರಿತ ಮುಖ್ಯ ವಕ್ತಾರರಾಗಿರುತ್ತಾರೆ. ಇವರ ಅಧೀನದಲ್ಲಿ 6,500 ಕ್ಕೂ ಹೆಚ್ಚು ವೈದ್ಯರ ಪಡೆಯಿದೆ.
ಇವರೆಲ್ಲಾ ರಾಷ್ಟ್ರದ ಸಾರ್ವಜನಿಕ ವೈದ್ಯಕೀಯ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗುತ್ತಾರೆ. ಡಾ.ವಿವೇಕ್ ಮೂರ್ತಿಯವರು, 'ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಆಪ್ತ ಸರ್ಜನ್ ಜನರಲ್' ಆಗಿಯೂ ನಿಯೋಜಿತರಾಗಿದ್ದಾರೆ. 'ಭಾರತೀಯ ಯೋಗ ಪದ್ಧತಿ'ಯಲ್ಲಿ ವಿವೇಕ್ ಅಪಾರ ಗೌರವ ಹೊಂದಿದ್ದಾರೆ. (ಪಿಟಿಐ)
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications