ಸಮೀಕ್ಷೆ : ಅಪನಗದೀಕರಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ರುಪಾಯಿ ನಿಷೇಧದಿಂದ ದೈನಂದಿನ ಜೀವನದಲ್ಲಿ ಯಾವ ರೀತಿ ಬದಲಾವಣೆಗಳಾಗಿವೆ? ಸರಕಾರ ಏನು ಮಾಡಬೇಕೆಂದು ಬಯಸುತ್ತೀರಿ? ಅಪನಗದೀಕರಣವನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೀರೋ, ತುಂಬಾ ಕಷ್ಟವಾಗಿದೆಯೆಂದು ಟೀಕಿಸುತ್ತೀರೋ? ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ.
ಬೆಂಗಳೂರು, ನವೆಂಬರ್ 23 : ಪ್ರತಿ ಭಾರತೀಯ ಇಂದು ಮಾತಾಡುತ್ತಿರುವುದು ಒಂದೇ ವಿಷಯ, ಅದು ಅಪನಗದೀಕರಣ. ಈ ಸಮಸ್ಯೆ ಇಂದು ಪ್ರತಿಯೊಬ್ಬರಿಗೂ ತಟ್ಟಿದೆ. ಇದರ ಅನುಷ್ಠಾನದಿಂದ ದೀರ್ಘಕಾಲೀನ ಲಾಭವಿದೆ ಎಂದು ಸರಕಾರ ಹೇಳಿದರೆ, ಸಾಕಷ್ಟು ದೂರುಗಳೂ ಕೇಳಿಬರುತ್ತಿವೆ. ಅಪನಗದೀಕರಣದ ಬಗ್ಗೆ ನಿಮ್ಮ ಖಚಿತ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗೂ ಮಹತ್ವ ಸಿಗಬೇಕಿದ್ದರೆ ಒನ್ಇಂಡಿಯಾದ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ.
ಕಪ್ಪು ಹಣ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ ಎಂದು ನರೇಂದ್ರ ಮೋದಿ ಸರಕಾರ ನವೆಂಬರ್ 8ರಂದು ಹಳೆಯ 500 ರುಪಾಯಿ ಮತ್ತು 1000 ರುಪಾಯಿ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿದ್ದು ಭಾರತದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಶೇ.87ರಷ್ಟು ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ರಾಜಕೀಯ ವಿರೋಧಿಗಳು ಇದೊಂದು ದೊಡ್ಡ ಹಗರಣ ಎಂಬಂತೆ ಬಿಂಬಿಸುತ್ತಿವೆ.
ದೈನಂದಿನ ಜೀವನದಲ್ಲಿ ನರೇಂದ್ರ ಮೋದಿ ಸರಕಾರದ ಈ ಮಹತ್ವದ ನಡೆಯಿಂದ ಯಾವ ರೀತಿ ಬದಲಾವಣೆಗಳಾಗಿವೆ? ಮುಂದೆ ಸರಕಾರ ಏನು ಮಾಡಬೇಕೆಂದು ಬಯಸುತ್ತೀರಿ? ಅಪನಗದೀಕರಣವನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೀರೋ, ಇದರಿಂದ ತುಂಬಾ ಕಷ್ಟವಾಗಿದೆಯೆಂದು ಟೀಕಿಸುತ್ತೀರೋ, ನಿಮಗೆ ಬಿಟ್ಟಿದ್ದು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ತಿಳಿಸಿ. ಹಾಗೆಯೆ, ಕಾಮೆಂಟ್ ಬಾಕ್ಸ್ನಲ್ಲಿಯೂ ನಿಮ್ಮ ಅನಿಸಿಕೆ ಬರೆಯಿರಿ.
-
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post












Click it and Unblock the Notifications