ಸಾವು-ನೋವಿನ ನೆರಳಿನ ಮಧ್ಯೆ ಗುಂಪಿಗೆ ಸೇರದ ಘಟನೆಗಳು!

Subscribe to Oneindia Kannada

ಕಾನ್ಪುರದಲ್ಲಿ ನಡೆದ ರೈಲು ದುರಂತದ ಛಾಯೆ ಇನ್ನೂ ಉಳಿದುಕೊಂಡಿದೆ. ಹಲವೆಡೆ ಮೃತರ ಅತ್ಮಕ್ಕೆ ಶಾಂತಿ ಕೋರಲಾಗುತ್ತಿದೆ. ಆದರೆ ಆ ದುಃಖದಿಂದ ಆಚೆ ಬರುವುದು ಅಷ್ಟು ಸಲೀಸಾದ ವಿಚಾರವಲ್ಲ. ಸಹೋದರನನ್ನು ಕಳೆದುಕೊಂಡ ಮಹಿಳೆಯೊಬ್ಬರು ಶವಾಗಾರದ ಹೊರಗೆ ರೋದಿಸುತ್ತಿದ್ದ ಫೋಟೋ ಎಂಥವರ ಕರುಳಲ್ಲೂ ನೋವು ಉಂಟು ಮಾಡುತ್ತದೆ.

ಅದೇ ದುರಂತದ ಹಲವು ಚಿತ್ರಗಳು ಇಲ್ಲಿವೆ. ಎಷ್ಟು ಬದುಕನ್ನು, ಎಷ್ಟು ಮನೆಯನ್ನು ನೋವಿನಲ್ಲಿ ದಿನ ದೂಡುವಂತೆ ಮಾಡಿದ ದುರಂತವಿದು? ಈ ಮಧ್ಯೆ ನೋಟು ರದ್ದು ಆಕ್ರೋಶ ಇನ್ನೂ ಮುಂದುವರಿದಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇಂಥ ಸುದ್ದಿ ಮಧ್ಯೆ ಇಂದಿರಾ ಗಾಂಧಿ ನೂರನೇ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಏರ್ಪಡಿಸಿದ್ದ ಫೋಟೋ ಪ್ರದರ್ಶನದಲ್ಲಿ ಮೊಮ್ಮಕ್ಕಳಾದ ರಾಹುಲ್-ಪ್ರಿಯಾಂಕಾ ಭಾಗವಹಿಸಿದ್ದಾರೆ

ಸೂರತ್ ನಲ್ಲಿ ನಡೆದ ಸಾಮೂಹಿಕ ವಿವಾಹ ಹಾಗೂ ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ಏರ್ ಶೋನಲ್ಲಿ ಸಂಭ್ರಮ ಪಟ್ಟ ನಾಯಿಯೊಂದರ ಓಟ ಗುಂಪಿಗೆ ಸೇರದ ಘಟನೆಗಳಾಗಿ ಕಾಣಿಸುತ್ತವೆ. ಆದರೆ ಈ ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ನೋಡುವ, ಓದುವ ಸಲುವಾಗಿ ಇಲ್ಲಿವೆ.

ಇಂದಿರಾ ಶತಮಾನ-ಮೊಮ್ಮಕ್ಕಳು

ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ನೂರನೇ ಜನ್ಮ ದಿನಾಚರಣೆ ಸಂಭ್ರಮದ ಸಲುವಾಗಿ ಅಲಹಾಬಾದ್ ನ ಸ್ವರಾಜ್ ಭವನ್ ನಲ್ಲಿ ಫೋಟೋ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದಿರಾ ಮೊಮ್ಮಕ್ಕಳಾದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಂಡಿದ್ದು ಹೀಗೆ.

ಆತ್ಮಶಾಂತಿಗಾಗಿ ಪ್ರಾರ್ಥನೆ

ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ ನೂರಾ ನಲವತ್ತರಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಾಟ್ನಾದಲ್ಲಿ ಮೋಂಬತ್ತಿ ಹೊತ್ತಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಕಾಂಗ್ರೆಸ್ ಪ್ರತಿಭಟನೆ

500, 1000 ರುಪಾಯಿ ರದ್ದು ಅಂತ ಘೋಷಣೆಯಾದ ದಿನದಿಂದ ಪ್ರತಿಪಕ್ಷಗಳಿಂದ ಹೋರಾಟ, ಪ್ರತಿಭಟನೆ ನಡೆಯುತ್ತಲೇ ಇದೆ. ಅಹಮದಾಬಾದ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನಾ ವೈಖರಿ ಹೀಗಿತ್ತು.

ಮದುವೆ ಸಂಭ್ರಮ

ಗುಜರಾತ್ ನ ಸೂರತ್ ನಲ್ಲಿ ಸೋಮವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಜೋಡಿಗಳು ಹೊಸ ಜೀವನಕ್ಕೆ ಕಾಲಿರಿಸಿದ ಸಂಭ್ರಮಪಟ್ಟರು.

ದುರಂತ ಪರಿಹಾರ

ಕಾನ್ಪುರದ ಪುಕ್ರಾಯನ್ ಬಳಿ ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ರೈಲು ದುರಂತ ಸಂಭವಿಸಿದ ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದ್ದ ವೇಳೆ ಕಂಡ ದೃಶ್ಯವಿದು.

ಸಹೋದರನ ಸಾವು, ದುಃಖ, ದುರಂತ

ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ ಸಹೋದರನನ್ನು ಕಳೆದುಕೊಂಡ ಮಹಿಳೆಯೊಬ್ಬರು ಶವಾಗಾರದ ಹೊರಗೆ ದುಃಖಿಸುತ್ತಿದ್ದನ್ನು ಕಂಡಾಗ ಹೃದಯ ಕರಗುವಂತಿತ್ತು.

ನಾಯಿ ಓಟ

ಹೊಸದಾಗಿ ಉದ್ಘಾಟನೆಯಾದ ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇನಲ್ಲಿ ಏರ್ ಶೋ ನಡೆದ ವೇಳೆ ರಸ್ತೆ ಮೇಲೆ ಜಿಗಿದಾಡಿದ ನಾಯಿ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ.

English summary
Rail accident, Indira gandhi birthday celebration and other events represented through photos of PTI.
Please Wait while comments are loading...