ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಭಾರತದ ರಸ್ತೆ ಸಂಪರ್ಕ ಸಾಧನೆ ಆಗಿದೆಯಾ?

By ನಿತಿನ್ ಮೆಹ್ತಾ ಮತ್ತು ಪ್ರಣವ್ ಗುಪ್ತ
|
Google Oneindia Kannada News

ಗ್ರಾಮೀಣ ಭಾಗದ ಆರ್ಥಿಕತೆಗೆ ರಸ್ತೆಗಳು ಬಹಳ ಮುಖ್ಯ. ತುಂಬ ಸೊಗಸಾದ ರಸ್ತೆಗಳು ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲ. ಅದರ ಜತೆಗೆ ಗ್ರಾಮೀಣ ಜನರ ಜೀವನ ನಡೆಸುವುದಕ್ಕೆ ಅವಕಾಶ ಕಲ್ಪಿಸುತ್ತದೆ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಪರಿಚಯಿಸಿದ್ದು 2000ನೇ ಇಸವಿ, ಡಿಸೆಂಬರ್ ನಲ್ಲಿ. ಆಗ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಪರಿಚಯಿಸಿತು. ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿತು.

ವಿದ್ಯುತ್ ನಿಂದ ಬೆಳಗುತ್ತಿದೆಯೇ ಗ್ರಾಮೀಣ ಭಾರತ?ವಿದ್ಯುತ್ ನಿಂದ ಬೆಳಗುತ್ತಿದೆಯೇ ಗ್ರಾಮೀಣ ಭಾರತ?

ಕಳೆದ ಹದಿನೇಳು ವರ್ಷಗಳಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ಭಾಗದ ನಾಗರಿಕರ ಬದುಕಲ್ಲಿ ಬದಲಾವಣೆಗೆ ಕಾರಣವಾಗಿದೆ ಈ ಯೋಜನೆ.

Connecting rural India?

ಈ ಯೋಜನೆಗೆ ಚಾಲನೆ ನೀಡಿದ್ದು ವಾಜಪೇಯಿ ನೇತೃತ್ವದ ಎನ್ ಡಿಎ ಸರಕಾರ. ಅದನ್ನು ತುಂಬ ಚೆನ್ನಾಗಿ ಮುಂದುವರಿಸಿದ್ದು ಯುಪಿಎ 1 ಸರಕಾರ. ಆದರೆ ನೀತಿಯಲ್ಲಿ ಆದ ಸಮಸ್ಯೆಯಿಂದಾಗಿ ಆ ಕಾರ್ಯಕ್ರಮಕ್ಕೆ ಎರಡನೇ ಅವಧಿಯಲ್ಲ ಸರಿಯಾದ ನ್ಯಾಯ ಸಲ್ಲಿಸಲಿಲ್ಲ ಯುಪಿಎ ಸರಕಾರ.

ಮೂರು ವರ್ಷದ ಹಿಂದೆ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಮೂಲ ಸೌಕರ್ಯ ಒದಗಿಸುವ ಹಾಗೂ ಯುಪಿಎ ಸರಕಾರದಲ್ಲಿ ಹಳಿ ತಪ್ಪಿದ್ದ ಯೋಜನೆಯನ್ನು ಸರಿದಾರಿಗೆ ತರುವ ಸವಾಲು ಎದುರಾಯಿತು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸರಕಾರ ಹೇಳಿಕೊಳ್ಳುವ ಪ್ರಗತಿಯ ಮೌಲ್ಯಮಾಪನವನ್ನು ನಾವು ಈ ಲೇಖನದಲ್ಲಿ ಮಾಡಲಿದ್ದೇವೆ.

ಗ್ರಾಮೀಣ ರಸ್ತೆಗಳು ಏಕೆ ಮುಖ್ಯ?

ಇಡೀ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ ಎಪ್ಪತ್ತರಷ್ಟು ಜನ ಗ್ರಾಮೀಣ ಭಾಗದಲ್ಲೇ ವಾಸವಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಜನರ ಆದಾಯ ಹೆಚ್ಚಳ ಆಗುವಂತೆ ಮಾಡುವುದು ಸರಕಾರದ ಮುಂದಿರುವ ದೊಡ್ಡ ಸವಾಲು. ಇದರ ಜತೆಗೆ ಆರೋಗ್ಯ ಸೇವೆ ಹಾಗೂ ಶಿಕ್ಷಣ ಸೇವೆಯನ್ನು ಕೂಡ ಗ್ರಾಮೀಣ ಭಾಗಗಳಿಗೆ ಒದಗಿಸಬೇಕು.

ಹಾಗೆ ನೋಡಿದರೆ ಉತ್ತಮ ಗುಣಮಟ್ಟದ ರಸ್ತೆಗಳು ಇವುಗಳಿಗೆಲ್ಲ ನೇರವಾಗಿ ನೆರವಾಗದಿರಬಹುದು. ಆದರೆ ಮುಖ್ಯ ಪಾತ್ರ ವಹಿಸುತ್ತದೆ. ಒಳ್ಳೆ ರಸ್ತೆಗಳು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ. ಪಟ್ಟಣ ಪ್ರದೇಶಗಳಿಗೆ ಸಂಪರ್ಕ ವ್ಯವಸ್ಥೆ ಚೆನ್ನಾಗಿರುವುದ್ದರಿಂದ ಅಲ್ಲಿ ಜೀವನ ನಡೆಸುವ ಅವಕಾಶವನ್ನು ಹೆಚ್ಚಿಸುತ್ತದೆ.

ಅದರಲ್ಲೂ ಶಿಕ್ಷಣದ ವಿಚಾರಕ್ಕೆ ಬಂದರೆ, ಉತ್ತಮ ರಸ್ತೆಗಳು ಇರುವ ಕಡೆ ಪ್ರಯಾಣದ ಸಮಯ ಕಡಿಮೆಯಾಗಿ ಶಿಕ್ಷಣಕ್ಕಾಗಿ ಎಷ್ಟು ದೂರ ಬೇಕಾದರೂ ವಿದ್ಯಾರ್ಥಿಗಳು ತೆರಳಬಹುದು.

ಈವರೆಗಿನ ಪ್ರಗತಿ ಹೇಗಿದೆ?

ನಮ್ಮ ಗಮನಕ್ಕೆ ಬಂದ ಹಾಗೆ ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಉತ್ತಮ ಪ್ರಗತಿಯಾಗಿದೆ. ರಸ್ತೆ ನಿರ್ಮಾಣದ ವಾರ್ಷಿಕ ಸರಾಸರಿ ತುಂಬ ಹೆಚ್ಚಿದೆ. ಎರಡನೇ ಅವಧಿಯ ಯುಪಿಎ ಸರಕಾರದ ಅವಧಿಯಲ್ಲಿ ತುಂಬ ಚೆನ್ನಾಗಿ ಸಾಗಿತ್ತು.

ಆದರೆ, ಎರಡನೇ ಭಾಗದಲ್ಲಿ ತೀರಾ ಕೆಟ್ಟ ರೀತಿಯಲ್ಲಿ ಈ ಯೋಜನೆ ಸೋಲು ಕಂಡಿತು. 2008-09ರಿಂದ 2010-11ರವರೆಗೆ ಮೂರು ವರ್ಷದ ಸರಾಸರಿಯಲ್ಲಿ ದಿನಕ್ಕೆ 143.96 ಕಿ.ಮೀ ರಸ್ತೆ ನಿರ್ಮಾಣವಾಯಿತು. ಆದರೆ 2011-12 ಹಾಗೂ 2013-14ರ ಮಧ್ಯೆ ಆ ಪ್ರಮಾಣ 73.49 ಕಿ.ಮೀಗೆ ಕುಸಿದುಹೋಯಿತು.

ಮೋದಿ ನೇತೃತ್ವದ ಎನ್ ಡಿಎ ಸರಕಾರ ಯುಪಿಎ 2ಕ್ಕಿಂತ ಮುಂದಿದೆ

ಮೋದಿ ನೇತೃತ್ವದ ಸರಕಾರದಲ್ಲಿ ದಿನಕ್ಕೆ 36 ಕಿ.ಮೀ ಹೆಚ್ಚಿಗೆ ಆಗಿದ್ದು, ಸರಾಸರಿ 109.7 ರಸ್ತೆ ನಿರ್ಮಾಣವಾಗುತ್ತಿದೆ. 2016-17ರಲ್ಲಿ ಈ ಪ್ರಮಾಣ ದಿನಕ್ಕೆ 129.7 ಕಿಲೋಮೀಟರ್ ತಲುಪಿದೆ.

ಪರಿಸಮಾಪ್ತಿ

ಆದರೆ, ಎನ್ ಡಿಎ ಸರಕಾರ ಗ್ರಾಮೀಣ ಭಾಗದ ರಸ್ತೆ ನಿರ್ಮಾಣದಲ್ಲಿ ಯಶಸ್ಸು ಪಡೆದಿದೆಯಾ ಎಂಬ ಸಣ್ಣ ಅನುಮಾನ ಮೂಡುತ್ತದೆ ಮತ್ತು ಪಿಎಂಎಸ್ ಜಿವೈ ಮತ್ತೆ ಮೈ ಕೊಡವಿ ಎದ್ದು ನಿಂತಂತೆ ಇದೆ. ಸರಕಾರವು ರಸ್ತೆ ನಿರ್ಮಾಣದಲ್ಲಿ ಮತ್ತಷ್ಟು ವೇಗ ಪಡೆಯಬೇಕು.

ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಇನಾಮ್ ಪ್ರೊದಂಥ ಉಪಾಯಗಳು ಯೋಜನೆಯಲ್ಲಿ ಪಾರದರರ್ಶಕತೆ ತರುವ ಜತೆಗೆ ಇಡೀ ಪ್ರಕ್ರಿಯೆಗೆ ಒಂದು ವೇಗವನ್ನು ತರುತ್ತದೆ.

(ನಿತಿನ್ ಮೆಹ್ತಾ ರಣ್ ನೀತಿ ಕನ್ಸಲ್ಟಿಂಗ್ ಮತ್ತು ರೀಸರ್ಚ್ ನ ಕಾರ್ಯನಿರ್ವಹಣಾ ಪಾಲುದಾರ, ಪ್ರಣವ್ ಗುಪ್ತ ಸ್ವತಂತ್ರ ಸಂಶೋಧಕ)

English summary
The foundation work for PMGSY laid by Vajpayee led NDA government was carried forward really well by the UPA I. UPA II could not do justice to the programme. When Modi government took Oath in May 2014, it had a tremendous challenge. In this article, we assess the government's claim of reviving progress of the PMGSY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X