ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ ಯಾತ್ರೆ : ಕನ್ನಡಿಗ ಯಾತ್ರಾರ್ಥಿಗಳಿಗೆ ಸಹಾಯವಾಣಿ

By Mahesh
|
Google Oneindia Kannada News

ಜಮ್ಮು, ಜುಲೈ 11: ಹಿಮಾವೃತ ಶಿವಲಿಂಗರೂಪಿ ಅಮರನಾಥನ ದರ್ಶನ ಪಡೆದು ಧನ್ಯರಾದ ಯಾತ್ರಾರ್ಥಿಗಳು ಇನ್ನೂ ಕಣಿವೆ ರಾಜ್ಯದಲ್ಲೇ ಉಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 350ಕ್ಕೂ ಅಧಿಕ ಯಾತ್ರಾರ್ಥಿಗಳು ಸದ್ಯ ವಿವಿಧ ಬೇಸ್ ಕ್ಯಾಂಪ್ ಗಳಲ್ಲಿ ಕಾಲದೂಡುತ್ತಿದ್ದಾರೆ. [ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರಿಗೆ ಸಂಕಷ್ಟ]

ಕರ್ನಾಟಕ ಮೂಲದ ಯಾತ್ರಾರ್ಥಿಗಳ ಸುರಕ್ಷತೆ ಬಗ್ಗೆ ಕರ್ನಾಟಕ ಭವನ ನಿಗಾ ವಹಿಸಿದ್ದು, ಸಹಾಯವಾಣಿ, ತುರ್ತು ಸೇವೆ ಕರೆ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. [ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಹತ್ಯೆ]

ಶ್ರೀನಗರ ಪಟಾಲ್​ಚೌಕ್​ನ ಬೈಪಾಸ್ ಬಳಿ 3 ಎಕರೆ ಜಾಗದಲ್ಲಿ ದೇಶದ ವಿವಿಧ ರಾಜ್ಯಗಳ 2,500ಕ್ಕೂ ಅಧಿಕ ಯಾತ್ರಾರ್ಥಿಗಳನ್ನು ಕ್ಯಾಂಪ್ ಗಳಲ್ಲಿ ಇರಿಸಲಾಗಿದೆ. ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ರಾಜ್ಯ ಪ್ರಕ್ಷುಬ್ಧಗೊಂಡಿದ್ದು, ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವುದರಿಂದ ಇನ್ನೂ ಎರಡು ದಿನ ಶ್ರೀನಗರದಿಂದ ಹೊರಹೋಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದ ಯಾತ್ರಾರ್ಥಿಗಳು

ರಾಜ್ಯದ ಯಾತ್ರಾರ್ಥಿಗಳು

ಬೆಂಗಳೂರು, ಬಳ್ಳಾರಿ, ದಾವಣಗೆರೆ, ಬಾಗಲಕೋಟೆ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಸುಮಾರು 350ಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳು ಜಮ್ಮುವಿನಲ್ಲಿರುವ ವಿವಿಧ ಬೇಸ್ ಕ್ಯಾಂಪ್ ನಲ್ಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ಭವನ ತಿಳಿಸಿದೆ.

ಕಂಟ್ರೋಲ್ ರೂಂ ಸಂಖ್ಯೆ

ಕಂಟ್ರೋಲ್ ರೂಂ ಸಂಖ್ಯೆ

* ಜಮ್ಮು ಕಾಶ್ಮೀರ ಕಂಟ್ರೋಲ್ ರೂಮ್ ಸಂಖ್ಯೆ: 01942506479
* ಬೆಂಗಳೂರು ಕಂಟ್ರೋಲ್ ರೂಮ್ ಸಂಖ್ಯೆ: 080-1070
* ಶ್ರೀಕಾಂತ್ ರಾವ್ : 9868393971
* ರೇಣುಕುಮಾರ್ :9868393953
* ಅನೀಸ್ ಕೆ ಜಾಯ್ 98683 93979

 ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತ

ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಮೊಬೈಲ್ ನೆಟ್ ವರ್ಕ್ ಸೇವೆ ಕೂಡ ಸ್ಥಗಿತವಾಗಿದೆ. ಹೀಗಾಗಿ ಅಮರನಾಥ್ ಯಾತ್ರೆಗಳಿಗೆ ಭಾರಿ ತೊಂದರೆಯಾಗಿದೆ. ಎಲ್ಲರಿಗೂ ಬೇಸ್ ಕ್ಯಾಂಪ್ ನಲ್ಲಿ ಉಳಿದುಕೊಳ್ಳಲು ಅವಕಾಶ ದೊರೆತಿದೆ. ಆದರೆ, ಔಷಧ, ಊಟ ಸರಿಯಾಗಿ ಸಿಗದೆ ಪರದಾಡುವಂತಾಗಿದೆ.

 ಎಲ್ಲಿಂದ ಎಷ್ಟು ಮಂದಿ ತೆರಳಿದ್ದರು

ಎಲ್ಲಿಂದ ಎಷ್ಟು ಮಂದಿ ತೆರಳಿದ್ದರು

* ಬೆಂಗಳೂರಿನ ಕಿಸಾನ್ ಯಾತ್ರಾ ಸೇವಾ ಸಂಘದಿಂದ 40.

* ಬಳ್ಳಾರಿಯ ಅಮರನಾಥ ಯಾತ್ರಾ ಸಮಿತಿಯಿಂದ 28
* ಬಾಗಲಕೋಟೆ ಹುನಗುಂದದ ಒಂದೇ ಕುಟುಂಬ 7 ಮಂದಿ

ದೆಹಲಿ, ಅಮೃತ್​ಸರ, ಅಮರನಾಥ ಯಾತ್ರೆ ಮುಗಿಸಿಕೊಂಡು ವೈಷ್ಣೋದೇವಿ ದರ್ಶನಕ್ಕೆಂದು ತಂಡ ಪ್ರಯಾಣ ಬೆಳೆಸಿತ್ತು. ಜುಲೈ 8ರಂದು ಶ್ರೀನಗರಕ್ಕೆ ಆಗಮಿಸಿದ್ದ ಕರ್ನಾಟಕ ತಂಡ ಈ ವೇಳೆಗೆ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ವಾಪಸ್ ಬರಬೇಕಿತ್ತು. ಚಿತ್ರದಲ್ಲಿ ಜುಲೈ 2ರಂದು ಕಂಡ ಅಮರನಾಥ ಲಿಂಗ.

English summary
More than 350 pilgrims from Karnataka are stranded in Jammu. The Amarnath Yatra remained suspended for the third consecutive day on Monday as no pilgrim was allowed to move from Jammu to Kashmir Valley, officials said. Here are the Helpline, emergency control room numbers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X