ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್ ಕುರಿತು ಮುಖ್ಯಮಂತ್ರಿ ಟ್ವೀಟ್ ನಲ್ಲೇನಿದೆ?

ಯಾವೆಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತೆ, ಯಾರ್ಯಾರಿಗೆ ಲಾಭ, ಯಾರಿಗೆ ನ‌ಷ್ಟ, ಸಾಲ ಮನ್ನಾ ಆಗುತ್ತಾ... ಎಂಬೆಲ್ಲ ವಿಷಯಗಳು ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಜೆಟ್ ಕುರಿತು ಏನಿದೆ ನೋಡಿ.

|
Google Oneindia Kannada News

ಬೆಂಗಳೂರು, ಮಾರ್ಚ್ 15: ದಾಖಲೆಯ 12ನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಜೆಟ್ ಒಂದು ಸವಾಲೆಂದೇ ಕರೆಯಲಾಗುತ್ತಿದೆ.

2018 ರ ವಿಧಾನಸಭಾ ಚುನಾವಣೆ, ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯ ಮೇಲೆ ಪ್ರಭಾವ ಬೀರುವುದಕ್ಕೆ ಈ ಬಜೆಟ್ ಒಂದು ಉತ್ತಮ ಅವಕಾಶ. ಈ ಅವಕಾಶವನ್ನು ಸಿದ್ದರಾಮಯ್ಯ ಸಮರ್ಪಕವಾಗಿ ಬಳಸಿಕೊಳ್ಳುತ್ತಾರಾ ಎಂಬುದು ಇಂದು ಬೆಳಗ್ಗೆ 11:30 ರ ನಂತರವೇ ತಿಳಿಯಲಿದೆ.

ಯಾವೆಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತೆ, ಯಾರ್ಯಾರಿಗೆ ಲಾಭ, ಯಾರಿಗೆ ನ‌ಷ್ಟ, ಸಾಲ ಮನ್ನಾ ಆಗುತ್ತಾ... ಎಂಬೆಲ್ಲ ವಿಷಯಗಳು ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಜೆಟ್ ನ ವಿಶೇಷತೆಯ ಕುರಿತು ಕೆಲವು ಟ್ವೀಟ್ ಗಳು ಹರಿದಾಡುತ್ತಿವೆ. ಬಜೆಟ್ ಆರಂಭಕ್ಕೂ ಮುನ್ನ ಅವುಗಳ ಮೇಲೊಮ್ಮೆ ಕಣ್ಣು ಹಾಯಿಸೋಣ.

ಅಭಿವೃದ್ಧಿ ಚಿತ್ರವೊಂದೇ ಕಣ್ಣಮುಂದೆ

ಆಯವ್ಯಯವನ್ನು ಮಂಡಿಸಲು ಹೊರಟಿರುವ ಈ ಹೊತ್ತಲ್ಲಿ ನಾಡಿನ ಸಮಗ್ರ ಅಭಿವೃದ್ಧಿ ಚಿತ್ರವೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ದಾಖಲೆಯ 12 ನೇ ಬಜೆಟ್

ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗುವಂಥ 12 ಬಜೆಟ್ ಗಳ್ನು ಮಂಡಿಸುವ ಸಾರ್ಥಕ ಅವಕಾಶ ನೀಡಿದ ರಾಜ್ಯದ ಜನತೆಯನ್ನು ನೆನಯುತ್ತ ಜನಪರ ಬಜೆಟ್ ಮಂಡಿಸಲು ಹೊರಟಿದ್ದೇನೆ ಎಂದು ಜನತೆಗೆ ಡನ್ಯವಾದ ಅರ್ಪಿಸಿದ್ದಾರೆ.

ಬಹುಜನ ಹಿತಾಯ

ಕರ್ನಾಟಕ ರಾಜ್ಯದ ಸಾಮಾನ್ಯ ಜನರಿಗೆ, ಮಹಿಳೆಯರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ, ಯುವಕರಿಗೆ ಎಲ್ಲರಿಗೂ ಉಪಯೋಗವಾಗುವಂಥ ಜನಪರ ಬಜೆಟ್ ಮಂಡಿಸುತ್ತಿದ್ದೇವೆ ಎಂದು ಬಹುಜನ ಹಿತಾಯ ಮಂತ್ರವನ್ನು ಪುರುಚ್ಚರಿಸಿದ್ದಾರೆ.

ಜನಪರ ಬಜೆಟ್

ಸರ್ವರನ್ನೂ ಒಳಗೊಳ್ಳುವ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ಬಜೆಟ್ ಮಂಡನೆಗೆ ಅಣಿಯಾಗುತ್ತಿದ್ದೇನೆ ಎಂದಿರುವ ಅವರು ಬಜೆಟ್ ಜನಪರವಾಗಿರಲಿದೆ ಎಂಬ ಸೂಚನೆ ನೀಡಿದ್ದಾರೆ.

English summary
CM Siddaramaiah will present Karnataka State budget 2017-18 today. Some tweets from the CM related to today's budget is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X