ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಗಾದಿ: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ರಣತಂತ್ರಗಳು live

|
Google Oneindia Kannada News

ಬೆಂಗಳೂರು, ಆ.29 : ಬಿಬಿಎಂಪಿ ಚುನಾವಣೆ ಫಲಿತಾಂಶ ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟು ಹಾಕಿದೆ. ಮೇಯರ್ ಪಟ್ಟವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ಶುಕ್ರವಾರ ಸರ್ಕಸ್ ಮಾಡಿದ್ದವು. ಇದೀಗ ಬಿಜೆಪಿ ನಾಯಕರು ಜೆಡಿಎಸ್ ಮುಖಂಡರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ.

ಜೆಡಿಎಸ್ ನೊಂದಿಗೆ ಸಖ್ಯ ಬೆಳೆಸಲು ಬಿಜೆಪಿ ಮುಂದಾಗಿರುವುದು ರಾಜಕಾರಣದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ. ಪದ್ಮನಾಭನಗರದಲ್ಲಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಕಾನೂನು ಸಚಿವ ಸದಾನಂದ ಗೌಡ ಮಾತುಕತೆ ನಡೆಸಿದ್ದಾರೆ. [ಶುಕ್ರವಾರ ಏನೇನಾಯ್ತು?]

bbmp

ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನ ಪಾಲಿಕೆ ಸದಸ್ಯರ ಸಭೆ ಶನಿವಾರ ನಡೆಯಲಿದ್ದು ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಗುತ್ತದೆ. ಇತ್ತ ಆರು ಪಕ್ಷೇತರನ್ನು ಬಿಜೆಪಿಗೆ ಕರೆತರುವ ಯತ್ನ ಸಹ ಆರಂಭವಾಗಿದೆ.[ಎಲ್ಲರಿಗೂ ಬೇಕಾದ 6 ಪಕ್ಷೇತರ ಕಾರ್ಪೋರೆಟರ್ ಗಳು ಯಾರ್ಯಾರು?]

ಬಿಬಿಎಂಪಿ ಹೊಂದಾಣಿಕೆ ಕುರಿತು ಸೆಪ್ಟೆಂಬರ್ 2 ರಂದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಶನಿವಾರ ಬಿಜೆಪಿ-ಜೆಡಿಎಸ್ ದೋಸ್ತಿ ರಾಜಕಾರಣ ಆರಂಭವಾಗಿದ್ದು ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ....[ಬಿಬಿಎಂಪಿ: ಮೇಯರ್ ಆಯ್ಕೆಗೆ ಮತ ಹಾಕುವವರು ಯಾರು?]

ಮಧ್ಯಾಹ್ನ 4.00: ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದ ಎಸ್ ಡಿಪಿಐ ಸದಸ್ಯ ಮುಜಾಹಿದ್ ಪಾಷಾ

ಮಧ್ಯಾಹ್ನ 2.30: ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಮಾತುಕತೆ

ಮಧ್ಯಾಹ್ನ 2.30: ಬಿಜೆಪಿಗೆ ಬೆಂಬಲ ನೀಡದಂತೆ ದೇವೇಗೌಡರಿಗೆ ಲಿಖಿತ ಮನವಿ ನೀಡಿದ ಬೆಂಗಳೂರು ಜೆಡಿಎಸ್ ಕಾರ್ಯಕರ್ತರು

ಮಧ್ಯಾಹ್ನ 2.00: ಮೇಯರ್ ಆಯ್ಕೆ ಆಗುವವರೆಗೆ ಕ್ಷೇತ್ರ ಬಿಟ್ಟು ತೆರಳದಂತೆ ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಚನೆ

ಮಧ್ಯಾಹ್ನ1.00: ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ. ಕೆಪಿಸಿಸಿ ಸಭೆ ಬಳಿಕ ಹೇಳಿಕೆ

ಮಧ್ಯಾಹ್ನ 12.30: ಜೆಡಿಎಸ್ ಶಾಸಕ ಜಮೀರ್ ಅಹಮದ್ ಮನೆಯಲ್ಲಿ ಜೆಡಿಎಸ್ ಕಾರ್ಯತಂತ್ರ ಆರಂಭ

ಮಧ್ಯಾಹ್ನ 12.20: ಬಿಜೆಪಿ ನಾಯಕ ಆರ್ ಅಶೋಕ್ ಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಮಧ್ಯಾಹ್ನ 12.10: ಪಕ್ಷೇತರ ಸದಸ್ಯರು ತಲಾ 10 ಕೋಟಿ ರು. ನೀಡಿ, ಸ್ಥಾಯಿ ಸಮಿತಿ ಸ್ಥಾನಮಾನ ನೀಡಲು ಬಿಜೆಪಿ ನಾಯಕರ ಬಳಿ ಬೇಡಿಕೆ ಇಟ್ಟಿದ್ದಾರೆ ಎಂಬ ವದಂತಿ

ಮಧ್ಯಾಹ್ನ 12.00: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಪೋರೇಟರ್ ಗಳ ಸಭೆ ಆರಂಭ

ಬೆಳಗ್ಗೆ 11.30: ಕೇರಳದಲ್ಲಿರುವ ಪಕ್ಷೇತರ ಸದಸ್ಯರನ್ನು ಭೇಟಿ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತೆರೆಮರೆ ಯತ್ನ

ಬೆಳಗ್ಗೆ: 11.20: ಚಿಕ್ಕಮಗಳೂರು ಭೇಟಿ ರದ್ದು ಮಾಡಿದ ಅಶೋಕ್

ಬೆಳಗ್ಗೆ, 11.00: ಮೈತ್ರಿ ಬಗ್ಗೆ ಮಾತುಕತೆ ನಡೆದಿಲ್ಲ, ಜನಾದೇಶಕ್ಕೆ ನಾವು ಬದ್ಧ ಎಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್.

ಬೆಳಗ್ಗೆ 10.30: ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಆರಂಭ

ಬೆಳಗ್ಗೆ 10.15: ಸೆಪ್ಟೆಂಬರ್ 2 ನಂತರ ದೇವೇಗೌಡರು ಯಾರ ಜತೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ ಗೋಪಾಲಯ್ಯ.

ಬೆಳಗ್ಗೆ 10.00: ಪದ್ಮನಾಭ ನಗರ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ

ಬೆಳಗ್ಗೆ 9.00: ಚಿಕ್ಕಮಗಳೂರಿನಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಭೇಟಿಗೆ ತೆರಳಿದ ಬಿಜೆಪಿ ನಾಯಕ ಆರ್ ಅಶೋಕ್

ಬೆಳಗ್ಗೆ, 8.30: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭೇಟಿ

English summary
BJP Leader R. Ashok may join hands with JDS for Bruhat Bengaluru Mahanagara Palike (BBMP) Mayor and Deputy mayor post. (August, 29) Here is latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X