ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ 2013-14 ಮುಖ್ಯಾಂಶಗಳು

By Mahesh
|
Google Oneindia Kannada News

Railway budget 2013 highlights
ನವದೆಹಲಿ, ಫೆ. 26: ಸುಮಾರು 17 ವರ್ಷಗಳ ನಂತರ ಕಾಂಗ್ರೆಸಿನ ರೈಲ್ವೆ ಸಚಿವರಾಗಿ ಪವನ್ ಕುಮಾರ್ ಬನ್ಸಾಲ್ ಅವರು ಬಜೆಟ್ ಮಂಡಿಸುವ ಮೂಲಕ 'ಇತಿಹಾಸ' ಸೃಷ್ಟಿಸಿದ್ದಾರೆ. ಅವರು ಮಂಗಳವಾರ ಮಂಡಿಸಿದ ಚೊಚ್ಚಲ ಮುಂಗಡ ಪತ್ರದಲ್ಲಿ ಏನೇನಿದೆ? ಮುಖ್ಯಾಂಶಗಳು ಹೀಗಿವೆ :

ಸದಸ್ಯರ ತೀವ್ರ ಗದ್ದಲದ ನಡುವೆ ಬಜೆಟ್ ಭಾಷಣ ಮುಂದುವರಿಸಲಾಗದೆ ಬನ್ಸಾಲ್ ಅವರು ರೈಲ್ವೆ ಬಜೆಟ್ ಮಂಡನೆಯನ್ನು ಮೊಟಕುಗೊಳಿಸಿದ್ದಾರೆ (1.45PM).
13.25:
62 ಹೊಸ ಏಕ್ಸ್ ಪ್ರೆಸ್ , 26 ಪ್ಯಾಸೆಂಜರ್ ರೈಲು ಘೋಷಣೆ
* ಮುಂಗಡ ಬುಕ್ಕಿಂಗ್, ಟಿಕೆಟ್ ಕ್ಯಾನ್ಸಲ್ ದರದಲ್ಲಿ ಕೊಂಚ ಏರಿಕೆ
* ಸೂಪರ್ ಫಾಸ್ಟ್ ಹಾಗೂ ತತ್ಕಾಲ್ ಬುಕ್ಕಿಂಗ್ ದರ ಕೂಡಾ ಏರಿಕೆ
* ಸರಕು ಸಾಗಣೆ ದರದಲ್ಲಿ ಶೇ 5 ರಷ್ಟು ಏರಿಕೆ ಏ.1 ರಿಂದ ಜಾರಿ
* ಹೊಸ ರೈಲು ಘೋಷಣೆ ನಂತರ ವಿಪಕ್ಷ ಸದಸ್ಯರಿಂದ ಪ್ರತಿಭಟನೆ
* ಪಿಕೆ ಬನ್ಸಾಲ್ ನಗರಗಳ ಹೆಸರು ಉಚ್ಚರಿಸಲು ತಡವರಿಸಿದಾಗ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಗೆ ನಗೆ ತಡೆಯಲಾಗಲಿಲ್ಲ.
* ಶ್ರೀನಿವಾಸಪುರ-ಮದನಪಲ್ಲಿ ಹೊಸ ರೈಲು ಮಾರ್ಗ
* ಗದಗ್ -ವಾಡಿ ಹೊಸ ಮಾರ್ಗ
* ಬಿಜಾಪುರ -ಕಿರಣ್ ದುಲ್ ಹೊಸ ಮಾರ್ಗ ಸಮೀಕ್ಷೆ
* ಅಜ್ಜಂಪುರ- ಶಿವಮೊಗ್ಗ ಚನ್ನಪಟ್ಟಣ ಶೆಟ್ಟಿಹಳ್ಳಿ, ಮಂಡ್ಯ ಯೆಲಿಯೂರು ಜೋಡಿ ಮಾರ್ಗ
* ಶಿವನಿ ಹೊಸ ದುರ್ಗ ಶೆಟ್ಟಿಹಳ್ಳಿ ಮದ್ದೂರು ಯಲಹಂಕ ಚನ್ನಸಂದ್ರ ಜೋಡಿ ಮಾರ್ಗಕ್ಕೆ ಪ್ರಸ್ತಾವನೆ
* ವಿದ್ಯುತ್ತೀಕರಣಕ್ಕೆ ರಾಮನಗರ ಮದ್ದೂರು ಯಲಹಂಕ ಸೋಮೇಶ್ವರ

13.15: ಹೊಸ ರೈಲುಗಳು:
* ತಾಳಗುಪ್ಪ- ಶಿವಮೊಗ್ಗ ಪ್ಯಾಸೆಂಜರ್ ರೈಲು ಪ್ರತಿದಿನ ಸಂಚಾರ
* ಉಡುಪಿ- ಕಾರವಾರ-ಮಡಗಾಂವ್ ಮಂಗಳೂರು ಇಂಟರ್ ಸಿಟಿ ಏಕ್ಸ್ ಪ್ರೆಸ್
* ಪ್ರತಿದಿನ ತಿರುಚಿನಾಪಳ್ಳಿ- ಮಧುರೈ- ನಾಗರಕೋಯಿಲ್ ಬೆಂಗಳೂರು
* ಮೀರಜ್ -ಪುಣೆ- ಹುಬ್ಬಳ್ಳಿ ರೈಲು
* ಮೈಸೂರಿಗೆ ರೈಲು;ಯಶವಂತಪುರ -ಬಾಗಲಕೋಟೆ ರೈಲು ಮೈಸೂರಿಗೆ ವಿಸ್ತರಣೆ
* ವಾರಕ್ಕೊಮ್ಮೆ ಬೆಂಗಳೂರು- ಮಂಗಳೂರು ಎಕ್ಸ್ ಪ್ರೆಸ್ ಸಂಚಾರ
* ಗುಲ್ಬರ್ಗಾ-ಸುಲ್ತಾನ್ ಪುರ ರೈಲು ಈ ವರ್ಷ ಪೂರ್ಣ
* ಪಂಡರಾಪುರ ಬಿಜಾಪುರ ವಯಾ ಮಂಗಳವೇಡ ಹೊಸ ಸಮೀಕ್ಷೆ
* ರಾಯಚೂರು ಪಾಂಡುರಂಗಸ್ವಾಮಿಗೆ ಹಣ ಬಿಡುಗಡೆ
* ತುಮಕೂರು ಮದ್ದೂರು ಮಳವಳ್ಳಿ ರೈಲು ಮಾಗ ಸಮೀಕ್ಷೆ
* ದರ್ಭಂಗ ಬೆಂಗಳೂರು ಎಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆ
* ಚಿಕ್ಕಬಳ್ಳಾಫುರ -ಪುಟ್ಟಪರ್ತಿ ಹೊಸ ರೈಲು
* ಚಿಕ್ಕಬಳ್ಳಾಪುರ- ಗೌರಿಬಿದನೂರು ಹೊಸ ರೈಲು
* ತುಮಕೂರು-ಅರಸೀಕೆರೆ ರೈಲು ಮಾರ್ಗ ಡಬ್ಲಿಂಗ್
* ಜಬಲ್ ಪುರ್ ಯಶವಂತಪುರ ವಯಾ ಧರ್ಮಾವರಂ ವಾರಕ್ಕೊಮ್ಮೆ
* ಮಂಗಳೂರು ಕಾಚಿಗುಡ ವಾರಕ್ಕೊಮ್ಮೆ

13:10: ಚಿಕ್ಕಮಗಳೂರು- ಸಕಲೇಶಪುರ ರೈಲುಮಾರ್ಗಕ್ಕೆ ಗ್ರೀನ್ ಸಿಗ್ನಲ್
* ಕರ್ನಾಟಕ ಸರ್ಕಾರದಿಂದ ಉಚಿತವಾಗಿ ಭೂ ಹಾಗೂ ಯೋಜನೆಯ ಶೇ 5೦ ರಷ್ಟು ವೆಚ್ಚ ಹೂಡಿಕೆ
* ಸಾಮಾನ್ಯ ಪ್ರಯಾಣ ದರ ಏರಿಕೆ ಇಲ್ಲ. 750 ಕೋಟಿ ರು ನಷ್ಟ ಇಲಾಖೆಯೆ ಭರಿಸಲಿದೆ
* ವಾರಕ್ಕೊಮ್ಮೆ ಬೆಂಗಳೂರು -ಮಂಗಳೂರು ಎಕ್ಸ್ ಪ್ರೆಸ್ ಸಂಚಾರ

13.00:
ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ
* 60ಕ್ಕೂ ಹೆಚ್ಚು ನಗರಗಳಲ್ಲಿ ಆರ್ ಆರ್ ಬಿ ಪರೀಕ್ಷೆ
* ಶೌರ್ಯ, ಕೀರ್ತಿ ಪುರಸ್ಕೃತರಿಗೆ ಉಚಿತ ಪಾಸ್
* ಕತ್ರಾ, ವೈಷ್ಣೋದೇವಿ ಪ್ರವಾಸಕ್ಕೆ ಬಸ್ ಹಾಗೂ ರೈಲಿಗೆ ಒಂದೇ ಟಿಕೆಟ್

12.50: ಪ್ರಸಕ್ತ ವರ್ಷ 1.2 ಲಕ್ಷ ಹುದ್ದೆಗಳ ನೇಮಕಾತಿ ನಿರೀಕ್ಷೆ
* 47,000 ಬ್ಯಾಕ್ ಲಾಗ್ ಹುದ್ದೆಗಳಿಗೆ ಕ್ಲಿಯರೆನ್ಸ್ ನೀಡಲಾಗುವುದು
* ಹಿರಿಯ ನಾಗರೀಕರ ಅನುಕೂಲಕ್ಕಾಗಿ ಎಲ್ಲೆಡೆ 400 ಲಿಫ್ಟ್ ಅಳವಡಿಕೆ
* 104 ರೈಲ್ವೇ ಸ್ಟೇಷನ್ ಗಳು ಮೇಲ್ದರ್ಜೆಗೆ, 60 ಆದರ್ಶ ರೈಲ್ವೆ ನಿಲ್ದಾಣ ನಿರ್ಮಾಣ

12.45: ಶೈಕ್ಷಣಿಕ ಪ್ರವಾಸಕ್ಕಾಗಿ ರಿಯಾಯತಿ ದರದಲ್ಲಿ ಆಜಾದ್ ಎಕ್ಸ್ ಪ್ರೆಸ್(ಸ್ವಾತಂತ್ರ್ಯ ಸಂಗ್ರಾಮ ಸ್ಥಳಗಳ ಸಂಪರ್ಕ)
* ರಾತ್ರಿ 11.30ರ ತನಕ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ
* ಅರುಣಾಚಲಪ್ರದೇಶದ ನಂತರ ಮಣಿಪುರ, ಮೇಘಾಲಯಕ್ಕೂ ರೈಲು ಮಾರ್ಗ ವಿಸ್ತರಣೆ
* ನಷ್ಟ ಸರಿದೂಗಿಸಲು ಸರಕು-ಸಾಗಣೆ ದರ ಹೆಚ್ಚಳ

ನಿರೀಕ್ಷಿಸಿ: ಪ್ರಯಾಣ ಸ್ನೇಹಿ ಯೋಜನೆಗಳು

* ಕರ್ನಾಟಕದ ಆಸೆಗಳು ನಿರೀಕ್ಷೆಗಳು* ಕರ್ನಾಟಕದ ಆಸೆಗಳು ನಿರೀಕ್ಷೆಗಳು

12.35: irctc ವೆಬ್ ಸೈಟ್ ಗೆ ತೊಂದರೆ ವರ್ಷಾಂತ್ಯಕ್ಕೆ ನಿವಾರಣೆ ನಿಮಿಷಕ್ಕೆ 7200 ಟಿಕೆಟ್ ನೀಡುವ ಸೌಲಭ್ಯ ಒದಗಿಸಲಾಗುವುದು
* ಮೊಬೈಲ್ ಮೂಲದ ರೈಲ್ವೆ ಆಗಮನ, ನಿರ್ಗಮನ, ಟಿಕೆಟ್ ಬುಕ್ಕಿಂಗ್ ಸೌಲಭ್ಯ ಸಾಧ್ಯ
* ಇ ಟಿಕೆಟಿಂಗ್ ಮೂಲಕ 1.20 ಲಕ್ಷ ಮಂದಿ ಒಮ್ಮೆಗೆ ಟಿಕೆಟ್ ಪಡೆಯಬಹುದಾಗಿದೆ.
* ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಲಾಗುವುದು ಹೆಲ್ಪ್ ಲೈನ್ ನಂಬರ್1800-111-321 ರಿಯಲ್ ಟೈಮ್ ನಲ್ಲಿ ಕಾರ್ಯ ನಿರ್ವಹಿಸಲಿದೆ.

12.30: ಟಿಕೆಟ್ ಬುಕ್ಕಿಂಗ್ ವೇಳೆ ಸಂಭವಿಸುವ ವಂಚನೆ ತಡೆಗೆ ಆಧಾರ್ ಮೂಲಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಯೋಜನೆ ಕಾರ್ಯಗತ
* ಹಲವು ರೈಲುಗಳಲ್ಲಿ ಉಚಿತ ವೈ ಫೈ ಸೌಲಭ್ಯ ಒದಗಿಸುವುದು
* 31846 ಲೆವೆಲ್ ಕ್ರಾಸಿಂಗ್ ಗಳಿದ್ದು ಅದರಲ್ಲಿ 13530 ಕ್ರಾಸಿಂಗ್ ಮಾನವ ರಹಿತ ಕ್ರಾಸಿಂಗ್ ಆಗಿದೆ.
* Train Protection Warning System (TPWS) ಎಲ್ಲಾ ಕಡೆ ಅಳವಡಿಕೆ
* ಮಹಿಳೆಯರು, ಕ್ರಾಸಿಂಗ್ ಅಪಘಾತಕ್ಕೆ ಈಡಾಗುವ ಆನೆಗಳ ಸುರಕ್ಷತೆಗೆ ರೈಲ್ವೆ ಇಲಾಖೆ ಶ್ರಮಿಸಲಿದೆ.

12.15: ಲೋಕಸಭೆಯಲ್ಲಿ ಚೊಚ್ಚಲ ಬಜೆಟ್ ಮಂಡನೆ ಸಂತಸದಲ್ಲಿ ಪಿ.ಕೆ ಬನ್ಸಾಲ್
* ಈ ಬಾರಿಯ ರೈಲ್ವೇ ಬಜೆಟ್ ಗಾತ್ರ 5.19 ಲಕ್ಷ ಕೋಟಿಗೆ ನಿಗದಿ
* ಪ್ರಯಾಣಿಕರ ಸಂಖ್ಯೆ ಏರಿದರೂ 2012-13ರಲ್ಲಿ 24,000 ಕೋಟಿ ನಷ್ಟ
* ಸುರಕ್ಷತೆಗೆ ಹೆಚ್ಚು ಒತ್ತು, ಅಲಹಾಬಾದ್ ದುರಂತ ದುಃಖ ತಂದಿದೆ.

ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ, ಸ್ವಚ್ಛ ಶೌಚಾಲಯ, ಮಹಿಳಾ ಪ್ರಯಾಣಿಕರ ಭದ್ರತೆಗೆ ಒತ್ತು, ಬ್ರೈಲ್ ಲಿಪಿ ಸ್ಟಿಕರ್ ಅಳವಡಿಕೆ ಮತ್ತು ಹೊಸ ರೈಲ್ವೇ ನಿಲ್ದಾಣಗಳ ಸ್ಥಾಪನೆಗೆ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಬನ್ಸಾಲ್ ಪ್ರಾಮುಖ್ಯತೆ ನೀಡಿದ್ದಾರೆ.

ದೇಶಾದ್ಯಂತ ಸುಮಾರು 800 ರೈಲ್ವೇ ನಿಲ್ದಾಣಗಳಲ್ಲಿ ಹೊಸದಾಗಿ ಪೇ ಅಂಡ್ ಯೂಸ್ ಟಾಯ್ಲೆಟ್ ಗಳನ್ನು ನಿರ್ಮಿಸುವ ಯೋಜನೆ. ಅಪಘಾತ ತಡೆ, ಒಂದಷ್ಟು ಹೊಸ ರೈಲ್ವೇ ಕಾರ್ಖಾನೆಗಳು, ಹೊಸ ಹಳಿ, ವಿದ್ಯುತ್ ಒದಗಿಸುವುದು, ಗೇಜ್ ಪರಿವರ್ತನೆ ಯೋಜನೆಯೂ ಅಡಗಿದೆ.

English summary
LIVE coverage of Budget in Kannada : Railway Minister Pawan Kumar Bansal presents the Railway Budget 2013-14. He will be the first Congress minister in 17 years to present the railway budget. Bansal took over as the railway minister after the Trinamool Congress (TMC) withdrew its support from the UPA government on question of popular policies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X