Get Updates
Get notified of breaking news, exclusive insights, and must-see stories!

ಬೆಂಗ್ಳೂರಲ್ಲಿ ಚಳಿ ಚಳಿ ತಾಳೆನು ಈ ಚಳಿಯ ಆಹಾ

Bangalore in the grip of cold
ಬೆಂಗಳೂರು, ಡಿ.24: ಉದ್ಯಾನನಗರಿ ಬೆಂಗಳೂರಿನಲ್ಲಿ ಮೈ ಗಡಗಡ, ಹಲ್ಲು ಕಟಕಟ ಎಂದು ನಡುಗಿಸುವಷ್ಟು ಚಳಿ. ನಗರವಾಸಿಗಳು ಚಳಿಗೆ ಗುಬ್ಬಚ್ಚಿಯಂತಾಗಿ ಮನೆಯಿಂದ ಹೊರಗೆ ಬರಲು ಮನಸ್ಸು ಮಾಡುತ್ತಿಲ್ಲ. ಚಳಿ ಚಳಿ ತಾಳೆನು ಈ ಚಳಿಯ ಆಹಾ ಓಹೋ ಎಂದು ರಾಗಾಲಾಪನೆ ಮಾಡುವಂತಾಗಿದೆ.

ಹವಾಮಾನ ಇಲಾಖೆ ವರದಿಯ ಪ್ರಕಾರ, ಇನ್ನೂ ಮೂರು ನಾಲ್ಕು ವಾರಗಳ ಕಾಲ ಇದೇ ರೀತಿ ಚಳಿ ಮುಂದುವರಿಯಲಿದೆ. ಕಳೆದ ಎರಡು ದಿನಗಳಿಂದ ನಗರದ ಕನಿಷ್ಠ ಉಷ್ಣಾಂಶ 13 ರಿಂದ 13.7 ಸೆಲ್ಸಿಯಸ್ ಡಿಗ್ರಿಗಳಿಗೆ ಇಳಿದಿದೆ. ಗರಿಷ್ಠ ಉಷ್ಣಾಂಶ 23 ರಿಂದ 26ರ ನಡುವೆ ಗಿರಕಿ ಹೊಡೆಯುತ್ತಿದೆ.

ಈ ಪಾಟಿ ಚಳಿಗೆ ಕಾರಣವಾಗಿರುವುದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ. ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರ ಮಾರ್ಗವಾಗಿ ವಾಯುಭಾರ ಕುಸಿತ ತಣ್ಣಗೆ ಮುಂದುವರಿದಿದೆ. ಕೇರಳ, ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯಾಗುತ್ತಿದೆ.

ಇದರ ಪರಿಣಾಮವಾಗಿ ಈ ಎರಡೂ ರಾಜ್ಯಗಳ ತಲೆಮೇಲಿರುವ ಕರ್ನಾಟಕಕ್ಕೆ ಚಳಿಯ ಅನುಭವ ಹೆಚ್ಚಾಗಿದೆ. ಸೂರ್ಯನ ಪ್ರಖರ ಬಿಸಿಲು ಬೀಳುವವರೆಗೂ ಮೋಡಗಳು ದಟ್ಟವಾಗಿರುವ ಕಾರಣ ವಾತಾವರಣದ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಬಿ ಪುಟ್ಟಣ್ಣ ತಿಳಿಸಿದ್ದಾರೆ.

ಸಂಕ್ರಾಂತಿ ಹಬ್ಬದವರೆಗೂ ಇದೇ ರೀತಿ ವಾತಾವರಣ ಇರುತ್ತದೆ. ಬೆಂಗಳೂರು ನಗರಕ್ಕಿಂತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್ ವಿಮನಾ ನಿಲ್ದಾಣಗಳ ಸುತ್ತಮುತ್ತ ಎರಡು, ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆ ಇರುತ್ತದೆ ಎನ್ನುತ್ತದೆ ವಾತಾವರಣ ಇಲಾಖೆ. (ಒನ್‌ಇಂಡಿಯಾ ಕನ್ನಡ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+