Vande Bharat Express: ಬೆಂಗಳೂರಿನಿಂದ ಹೊರಡುವ ರೈಲು ವೇಳಾಪಟ್ಟಿ ಬದಲು

ಬೆಂಗಳೂರು, ಜುಲೈ 17: ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. ಯಶವಂತಪುರ-ಕಾಚಿಗುಡ (ಹೈದರಾಬಾದ್) ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ.

ಮಹಬೂಬ್‌ನಗರ ನಿಲ್ದಾಣಕ್ಕೆ ಮಾತ್ರ ಅನ್ವಯವಾಗುವಂತೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಈ ರೈಲಿನ ಬೇರೆ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Yesvantpur Kacheguda Vande Bharat Train Schedule Change

ಯಶವಂತಪುರ-ಕಾಚಿಗುಡ ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್‌ (ರೈಲು ಸಂಖ್ಯೆ 20704) ಎಕ್ಸ್‌ಪ್ರೆಸ್‌ ರೈಲಿನ ಆಗಮನ/ ನಿರ್ಗಮನದ ವೇಳಾಪಟ್ಟಿಯನ್ನು ಮೆಹಬೂಬ್‌ನಗರ ನಿಲ್ದಾಣಕ್ಕೆ ಅನ್ವಯವಾಗುವಂತೆ ಮಾತ್ರ ಬದಲಾಯಿಸಲಾಗಿದೆ.

ಜುಲೈ 18ರ ಗುರುವಾರದಿಂದಲೇ ಜಾರಿಗೆ ಬರುವಂತೆ ದಕ್ಷಿಣ ಮಧ್ಯ ರೈಲ್ವೆಯು ವೇಳಾಪಟ್ಟಿಯನ್ನು ಪರಿಷ್ಕರಿಸಲು ಸೂಚಿಸಿದೆ. ಅದರಂತೆ, ರೈಲು ಮಹಬೂಬ್‌ನಗರಕ್ಕೆ ರಾತ್ರಿ 9:04/ 9:05 ಬದಲು 9:26/ 9:27 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ ಎಂದು ಮಾಹಿತಿ ನೀಡಲಾಗಿದೆ.

3ನೇ ವಂದೇ ಭಾರತ್ ರೈಲು: ಯಶವಂತಪುರ-ಕಾಚಿಗುಡ (ಹೈದರಾಬಾದ್) ನಡುವಿನ ವಂದೇ ಭಾರತ್ ರೈಲು ಕರ್ನಾಟಕದ 3ನೇ ವಂದೇ ಭಾರತ್ ರೈಲಾಗಿದೆ. 2022ರ ನವೆಂಬರ್‌ನಲ್ಲಿ ಮೈಸೂರು-ಚೆನ್ನೈ ಮತ್ತು 2023ರ ಜೂನ್‌ನಲ್ಲಿ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಮೊದಲ ಎರಡು ರೈಲುಗಳು ಸಂಚಾರ ಆರಂಭಿಸಿದ್ದವು. 24 ಸೆಪ್ಟೆಂಬರ್ 2023ರಂದು ಪ್ರಧಾನಿ ನರೇಂದ್ರ ಮೋದಿ ಯಶವಂತಪುರ-ಕಾಚಿಗುಡ ನಡುವಿನ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು.

ಯಶವಂತಪುರ-ಕಾಚಿಗುಡ (ಹೈದರಾಬಾದ್) ನಡುವಿನ ಅಂತರ 610 ಕಿ. ಮೀ. ಗಳು. ಇತರ ರೈಲುಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲು 12 ತಾಸು ಬೇಕು. ಆದರೆ ವಂದೇ ಭಾರತ್ ರೈಲು 8.30 ತಾಸುಗಳಲ್ಲಿ ಸಂಚಾರ ನಡೆಸುತ್ತದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸಂಚಾರ ನಡೆಸುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಈ ರೈಲು ಅನುಕೂಲವಾಗಿದೆ. ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ರೈಲು ಸೇವೆ ಆರಂಭಿಸಲಾಗಿದೆ.

ಈ ರೈಲು ಆಂಧ್ರ ಪ್ರದೇಶದ ಮೆಹಬೂಬ್ ನಗರ, ಕರ್ನೂಲ್‌ ಸಿಟಿ, ಅನಂತಪುರ, ಧರ್ಮಾವರಂ ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ. ಈ ರೈಲು ಕರ್ನಾಟಕಕ್ಕಿಂತ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೇ ಹೆಚ್ಚಾಗಿ ಸಂಚಾರ ನಡೆಸುತ್ತದೆ.

ಬೆಂಗಳೂರು ನಗರದಲ್ಲಿ ಕೆಎಸ್ಆರ್‌ ಬೆಂಗಳೂರು, ಯಶವಂತಪುರ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಬೆಂಗಳೂರು ನಗರ ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ಸಂಚಾರ ನಡೆಸುವ ರೈಲು ಯಶವಂತಪುರದಿಂದ ಸಂಚಾರವನ್ನು ನಡೆಸುತ್ತದೆ.

ವಂದೇ ಭಾರತ್ ರೈಲುಗಳನ್ನು ಜನ ಶತಾಬ್ದಿ ರೈಲುಗಳಿಗೆ ಪರ್ಯಾಯವಾಗಿ ಓಡಿಸಲಾಗುತ್ತಿದೆ. ಪ್ರಮುಖ ನಗರಗಳನ್ನು ಸಂಪರ್ಕಿಸಲು ಈ ಮಾದರಿ ರೈಲುಗಳನ್ನು ಭಾರತೀಯ ರೈಲ್ವೆ ಓಡಿಸುತ್ತಿದೆ. ಐಷಾರಾಮಿ ರೈಲಿನ ದರ ಹೆಚ್ಚಿದೆ. ಆದರೆ ಕಡಿಮೆ ಸಮಯದಲ್ಲಿ ಸಂಚಾರ ನಡೆಸಬಹುದಾದ ಕಾರಣ ಹೆಚ್ಚು ಜನರು ಈ ಮಾದರಿ ರೈಲಿನಲ್ಲಿ ಸಂಚಾರವನ್ನು ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+