Vande Bharat; ಚೆನ್ನೈ-ಬೆಂಗಳೂರು-ಚೆನ್ನೈ ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ನವೆಂಬರ್ 19: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ಚೆನ್ನೈ-ಬೆಂಗಳೂರು-ಚೆನ್ನೈ ಸೆಂಟ್ರಲ್ ನಡುವೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಓಡಿಸುತ್ತಿದೆ. ಒಂದು ಟ್ರಿಪ್ ಮಾತ್ರ ಈ ರೈಲು ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ದೀಪಾವಳಿ ಹಬ್ಬ ಮುಗಿಸಿಕೊಂಡು ವಾಪಸ್ ಆಗುವಾಗ ಉಂಟಾಗುವ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ವಿಶೇಷ ರೈಲು ಓಡಿಸಲಾಗುತ್ತಿದೆ.

Vande Bharat Special Train Between Chennai Bengaluru Schedule

ರೈಲು ನಂಬರ್ 06031 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ರೈಲು ನಂಬರ್ 06032 ಯಶವಂತಪುರ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಸಂಚಾರ ನಡೆಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಶೇಷ ರೈಲು ವೇಳಾಪಟ್ಟಿ

ರೈಲು ನಂಬರ್ 06031 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ವಿಶೇಷ ವಂದೇ ಭಾರತ್ ರೈಲು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ 17.15ಕ್ಕೆ ನವೆಂಬರ್ 20ರಂದು ಹೊರಡಲಿದೆ. ಅದೇ ದಿನ 22 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸಲಿದೆ.

ರೈಲು ನಂಬರ್ 06032 ಯಶವಂತಪುರ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವಿಶೇಷ ವಂದೇ ಭಾರತ್ ರೈಲು ಯಶವಂತಪುರದಿಂದ ನವೆಂಬರ್ 21ರಂದು 23 ಗಂಟೆಗೆ ಹೊರಡಲಿದೆ. ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ಮರುದಿನ 4.30ಕ್ಕೆ ತಲುಪಲಿದೆ.

ಈ ರೈಲು ಸೇವೆ ಕೇವಲ ಒಂದು ಟ್ರಿಪ್‌ಗೆ ಸೀಮಿತವಾಗಿದೆ. ಈ ವಿಶೇಷ ವಂದೇ ಭಾರತ್ ರೈಲು ಒಟ್ಟು 8 ಕೋಚ್‌ಗಳನ್ನು ಒಳಗೊಂಡಿದೆ. ಈ ವಿಶೇಷ ರೈಲು ಡಾ. ಎಂಜಿಆರ್‌ ಚೆನ್ನೈ ಸೆಂಟ್ರಲ್, ಕಟಪಾಡಿ, ಎಸ್‌ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿದೆ.

ಜನರು ಈ ವಿಶೇಷ ರೈಲು ಸೇವೆ ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ ರೈಲ್ವೆ ಇಲಾಖೆ ವೆಬ್‌ಸೈಟ್‌ನಲ್ಲಿ ಈಗಾಗಲೇ ಆರಂಭವಾಗಿದೆ.

ಮೈಸೂರು-ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. 2022ರ ನವೆಂಬರ್‌ನಲ್ಲಿ ಆರಂಭಿಸಲಾದ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅಲ್ಲದೇ ಮೈಸೂರು-ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಶತಾಬ್ದಿ ರೈಲಿನ ಸಂಚಾರ ಸಹ ಇದೆ. ಆದರೆ ಈಗ ಹಬ್ಬದ ಸಂದರ್ಭದ ದಟ್ಟಣೆ ಕಡಿಮೆ ಮಾಡಲು ವಿಶೇಷ ಒಂದೇ ಭಾರತ್ ರೈಲು ಓಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+