ನೈಋತ್ಯ ರೈಲ್ವೆಯ ಹಲವು ರೈಲು ರದ್ದು, ಕೆಲವು ಭಾಗಶಃ ರದ್ದು, ಇಲ್ಲಿದೆ ಪಟ್ಟಿ
ನೈಋತ್ಯ ರೈಲ್ವೆಯು ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ಫೆಬ್ರವರಿ 6, 7 ಮತ್ತು 8ರಂದು ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಕೆಲವು ರೈಲುಗಳ ಸಂಚಾರ ರದ್ದುಗೊಂಡಿದೆ.
ಬೆಂಗಳೂರು, ಫೆಬ್ರವರಿ 06; ನೈಋತ್ಯ ರೈಲ್ವೆಯು ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಿದೆ. ಕೆಲವು ರೈಲುಗಳು ಭಾಗಶಃ ರದ್ದುಗೊಂಡಿವೆ.
ಈ ಕುರಿತು ನೈಋತ್ಯ ರೈಲ್ವೆ ಪ್ರತಿಕಾ ಪ್ರಕಟಣೆ ಮೂಲಕ ಫೆಬ್ರವರಿ 6, 7 ಮತ್ತು 8ರಂದು ಈ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ವಿಳಂಬವಾಗಿ ಸಹ ಸಂಚಾರ ನಡೆಸಲಿವೆ ಎಂದು ಮಾಹಿತಿ ನೀಡಿದೆ.
ಸಿಟಿಆರ್ ಕಾಮಗಾರಿ ಪೂರ್ಣಗೊಳಿಸಲು ಬ್ಲಾಕ್, ಪವರ್ ಬ್ಲಾಕ್ ಕೆಲಸವನ್ನು ರೈಲ್ವೆ ಇಲಾಖೆ ಕೈಗೊಂಡಿದೆ. ಜೋ ಕಟ್ಟೆ ಪಡೀಲ್ ಬಳಿಯ ಈ ಕಾಮಗಾರಿ ಕಾರಣ ರೈಲುಗಳ ಸಂಚಾರದಲ್ಲಿ ಕೆಲವು ಬದಲಾವಣೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಸಂಪೂರ್ಣ ರದ್ದು; ಫೆಬ್ರವರಿ 7, 8 ರಂದು ರೈಲು ನಂಬರ್ 06485/06484 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ರದ್ದುಗೊಳಿಸಲಾಗಿದೆ.
ರೈಲು ನಂಬರ್ 06489/ 06488 ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಂಡಿದೆ.
ಭಾಗಶಃ ರದ್ದುಗೊಂಡಿರುವ ರೈಲುಗಳು
* ವಿಜಯಪುರದಿಂದ ಹೊರಡುವ ರೈಲು ನಂಬರ್ 07377 ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ಎಕ್ಸ್‌ಪ್ರೆಸ್ ಫೆಬ್ರವರಿ 6, 7ರಂದು ಹಾಸನ, ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದಾಗಿದೆ. ರೈಲು ಮಂಗಳೂರು ಬದಲು ಹಾಸನದಲ್ಲಿಯೇ ನಿಲ್ಲಲಿದೆ.
* ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7, 8ರಂದು ಮಂಗಳೂರು ಜಂಕ್ಷನ್, ಹಾಸನ ನಡುವೆ ಭಾಗಶಃ ರದ್ದಾಗಿದೆ. ಮಂಗಳೂರು ಜಂಕ್ಷನ್ ಬದಲು ರೈಲು ಹಾಸನದಿಂದ ಹೊರಡಲಿದೆ.
ರೈಲುಗಳ ಸಂಚಾರ ವಿಳಂಬ
* ರೈಲು ನಂಬರ್ 16515 ಯಶವಂತಪುರ-ಕಾರವಾರ ರೈಲು ಫೆಬ್ರವರಿ 6ರಂದು ಪಡೀಲ್ ಜಂಕ್ಷನ್‌ನಲ್ಲಿ 25 ನಿಮಿಷ. ಮಂಗಳೂರು ಜಂಕ್ಷನ್‌ನಲ್ಲಿ 45 ನಿಮಿಷ ತಡವಾಗಲಿದೆ.
* ಕಣ್ಣೂರಿನಿಂದ ಹೊರಡುವ ರೈಲು ನಂಬರ್ 16512 ಕಣ್ಣೂರು- ಕೆಎಸ್ಆರ್ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ಫೆಬ್ರವರಿ 6ರಂದು ಪಡೀಲ್ ಜಂಕ್ಷನ್‌ನಲ್ಲಿ 25 ನಿಮಿಷ ವಿಳಂಬವಾಗಲಿದೆ.
* ಕಾರವಾರದಿಂದ ಹೊರಡುವ ರೈಲು ನಂಬರ್ 16596 ಕಾರವಾರ- ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಫೆಬ್ರವರಿ 6ರಂದು ಜೋಕಟ್ಟೆ, ಮಂಗಳೂರು ಜಂಕ್ಷನ್‌ನಲ್ಲಿ 45 ನಿಮಿಷ ತಡ.
* ಫೆಬ್ರವರಿ 8ರಂದು ರೈಲು ನಂಬರ್ 16576 ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಮಂಗಳೂರು ಜಂಕ್ಷನ್‌ನಿಂದ ಒಂದು ಗಂಟೆ ತಡವಾಗಿ ಹೊರಡಲಿದೆ.
* ಫೆಬ್ರವರಿ 8 ರಿಂದ ಮಾರ್ಚ್ 3ರ ತನಕ ರೈಲು ನಂಬರ್ 16596 ಕಾರವಾರ-ಕೆಎಸ್ಆರ್ ಬೆಂಗಳೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರವಾರದಿಂದ 20 ನಿಮಷ ತಡವಾಗಿ ಹೊರಡಲಿದೆ.












Click it and Unblock the Notifications