ಸ್ವದೇಶ ದರ್ಶನ 2.0: ಸಮಗ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ ಕರ್ನಾಟಕದ ಈ ನಗರ

ಸ್ವದೇಶ್ ದರ್ಶನ್ 2.0 ಕಾರ್ಯಕ್ರಮದ ಅಡಿಯಲ್ಲಿ 15 ರಾಜ್ಯಗಳ 30 ನಗರಗಳನ್ನು ಸುಸ್ಥಿರ ಮತ್ತು ಜವಾಬ್ದಾರಿಯುತ ತಾಣಗಳಾಗಿ ಅಭಿವೃದ್ಧಿಪಡಿಸಲು ಪಟ್ಟಿ ಮಾಡಲಾಗಿದೆ.

ನವದೆಹಲಿ, ಮಾರ್ಚ್ 09: ಕೇಂದ್ರ ಸರ್ಕಾರವು ದೇಶದ 15 ರಾಜ್ಯಗಳ 30 ನಗರಗಳನ್ನು ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ನಮ್ಮ್ ರಾಜ್ಯವು ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ ಜೊತೆಗೆ ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವೂ ಸೇರಿವೆ.

ಕೇಂದ್ರವು ಗುಜರಾತ್‌ನ ದ್ವಾರಕಾ ಮತ್ತು ಧೋಲಾವೀರಾವನ್ನು ಸಮಗ್ರ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿದೆ. ಜೊತೆಗೆ ಗೋವಾದ ಕೊಲ್ವಾ ಮತ್ತು ಪೊರ್ವೊರಿಮ್ ಮತ್ತು ಬಿಹಾರದ ನಳಂದಾ ಮತ್ತು ಗಯಾವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ವರ್ಷದ ಜನವರಿಯಲ್ಲಿ ಆರಂಭಿಸಲಾದ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ 2.0 ಕಾರ್ಯಕ್ರಮದ ಅಡಿಯಲ್ಲಿ 15 ರಾಜ್ಯಗಳ 30 ನಗರಗಳನ್ನು ಸುಸ್ಥಿರ ಮತ್ತು ಜವಾಬ್ದಾರಿಯುತ ತಾಣಗಳಾಗಿ ಅಭಿವೃದ್ಧಿಪಡಿಸಲು ಪಟ್ಟಿ ಮಾಡಲಾಗಿದೆ.

Swadesh Darshan: Centre selects 30 cities across 15 states including Karnataka

ಸ್ವದೇಶ್ ದರ್ಶನ್ 2.0 ಕಾರ್ಯಕ್ರಮ ದೇಶದ ಹೊಸ ದೇಶೀಯ ಪ್ರವಾಸೋದ್ಯಮ ನೀತಿಯ ಒಂದು ಭಾಗವಾಗಿದೆ. ಇದು ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳಿಂದ ದೂರ ಸರಿದು, ಗಮ್ಯಸ್ಥಾನದ ಮೇಲೆ ಕೇಂದ್ರೀಕರಿಸುತ್ತದೆ. ಆಯ್ಕೆಯಾಗಿರುವ 15 ರಾಜ್ಯಗಳಲ್ಲಿ ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವೂ ಸೇರಿವೆ.

ಆಯ್ದ ಸ್ಥಳಗಳ ಕುರಿತು ವಿವರಗಳನ್ನು ನೀಡಿರುವ ಸಚಿವಾಲಯದ ಅಧಿಕಾರಿಗಳು, ದ್ವಾರಕಾ ಬಳಿಯ ವಿವಿಧ ಪ್ರವಾಸಿ ಸ್ಥಳಗಳು (50 ಕಿಮೀ ವ್ಯಾಪ್ತಿಯಲ್ಲಿ) ದ್ವಾರಕಾ-ದ್ವಾರಕಾಧೀಶ ದೇವಾಲಯ, ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯ, ಶಿವರಾಜಪುರ ಬೀಚ್, ಸುದಾಮ ಸೇತು, ರುಕ್ಮಣಿ ದೇವಿ, ಗೋಪಿ ತಲಾಬ್ ಮತ್ತು ಭಡಕೇಶ್ವರ ಮಹಾದೇವ ಮಂದಿರ ದೇವಾಲಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ಗುಜರಾತಿನ ಅತಿದೊಡ್ಡ ಸುಸಜ್ಜಿತ ಸಿಂಧೂ ಕಣಿವೆಯ ತಾಣಗಳಲ್ಲಿ ಒಂದಾದ ಧೋಲವೀರಾಗಾಗಿ, ಉದ್ಯಾನವನ, ವೀಕ್ಷಣಾ ಸ್ಥಳಗಳು, ಪಾದಯಾತ್ರೆಯ ಹಾದಿಗಳು, ಪ್ರಾದೇಶಿಕ ಕಲೆಗಳು, ಕರಕುಶಲ ವಸ್ತುಗಳು ಮತ್ತು ಹಳ್ಳಿಯ ಜೀವನದ ಅನುಭವ ಸಿಗುವ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ.

Swadesh Darshan: Centre selects 30 cities across 15 states including Karnataka

ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಗಾಗಿ ಸ್ವದೇಶ್ ದರ್ಶನ್ ಯೋಜನೆಯನ್ನು 2014-15 ರಲ್ಲಿ ಕೇಂದ್ರವು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡುತ್ತದೆ.

ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾದ ಪ್ರಮುಖ ಸರ್ಕ್ಯೂಟ್‌ಗಳು ಬೌದ್ಧ ಸರ್ಕ್ಯೂಟ್, ಈಶಾನ್ಯ ಸರ್ಕ್ಯೂಟ್, ರಾಮಾಯಣ ಸರ್ಕ್ಯೂಟ್, ವನ್ಯಜೀವಿ ಸರ್ಕ್ಯೂಟ್, ರೂರಲ್ ಸರ್ಕ್ಯೂಟ್ ಇತ್ಯಾದಿಗಳನ್ನು ಒಳಗೊಂಡಿವೆ. ಆದರೆ, ಯೋಜನೆಯು ನಿರೀಕ್ಷಿಸಿದ ರೀತಿಯಲ್ಲಿ ಯಶಸ್ವಿ ಆಗಲು ಸಾಧ್ಯವಾಗಲಿಲ್ಲ. ಆದ್ದರಿಂದ, ಸ್ವದೇಶ ದರ್ಶನ 2.0 ಯೋಜನೆಯಲ್ಲಿ ಒಂದು ಸಮಯದಲ್ಲಿ ಒಂದು ತಾಣವನ್ನು ಕೇಂದ್ರೀಕರಿಸಿ, ದೇಶೀಯ ಪ್ರವಾಸಿಗರನ್ನು ಆಕರ್ಷಿಸಸುವ, ಪರಿಕಲ್ಪನೆ ಮಾಡಲಾಗಿದೆ. ಇದನ್ನು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.

ರಾಜ್ಯದ ಅರಮನೆ ನಗರಿಯನ್ನು ಈ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದ ವರ್ಷಪೂರ್ತಿ ದಸರಾ ವಸ್ತು ಪ್ರದರ್ಶನ ನಡೆಸಬೇಕೆಂಬ ಹಂಬಲಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಮತ್ತೊಂದು ಪ್ರವಾಸಿ ತಾಣವಾಗಿ ವಸ್ತು ಪ್ರದರ್ಶನ ರೂಪುಗೊಳ್ಳಲಿದೆ. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗೆ ಬಂದವರು ಪಕ್ಕದಲ್ಲಿಯೇ ಇರುವ ವಸ್ತುಪ್ರದರ್ಶನಕ್ಕೂ ಭೇಟಿ ನೀಡಬಹುದು. ಹೆಚ್ಚಿನ ಅನುದಾನ ಸಿಗಲಿದ್ದು, ಇದರಿಂದ ಮೂಲ ಸೌಲಭ್ಯ ಕಲ್ಪಿಸಲಾಗುವುದು.

ಇನ್ನು, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳ ನಡುವೆ ಆಯಕಟ್ಟಿನ ಸ್ಥಳದಲ್ಲಿರುವ ಚಂಡೀಗಢದಲ್ಲಿ ಹೊಸ ಯೋಜನೆಯ ಅಡಿಯಲ್ಲಿ ಸುಖನಾ ಸರೋವರ, ರಾಕ್ ಗಾರ್ಡನ್, ಬರ್ಡ್ ಪಾರ್ಕ್ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕ್ಯಾಪಿಟಲ್ ಕಾಂಪ್ಲೆಕ್ಸ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಈಶಾನ್ಯ ಭಾರತದಲ್ಲಿ, ಅಸ್ಸಾಂನ ಕೊಕ್ರಜಾರ್ - ಮಾನಸ್ ರಾಷ್ಟ್ರೀಯ ಉದ್ಯಾನವನ, ರೈಮೋನಾ ರಾಷ್ಟ್ರೀಯ ಉದ್ಯಾನವನ ಮತ್ತು ಮಹಾಮಾಯಾ ಧಾಮ್ ಮತ್ತು ಮಹಾಮಾಯಾ ಸ್ನಾನ ಘಾಟ್‌ನಂತಹ ಧಾರ್ಮಿಕ ಸ್ಥಳಗಳನ್ನು ಸೇರಿಸಲಾಗಿದೆ. ಜೋರ್ಹತ್, ರಾಜ್ಯದ ಮತ್ತೊಂದು ಜನಪ್ರಿಯ ವನ್ಯಜೀವಿ ಪ್ರವಾಸಿ ತಾಣವಾಗಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಗಿಬ್ಬನ್ ವನ್ಯಜೀವಿ ಅಭಯಾರಣ್ಯ, ಮಜುಲಿ ಮತ್ತು ಶಿವಸಾಗರವನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+