NWKRTC : ಹುಬ್ಬಳ್ಳಿ ಟು ಮುಂಬೈ ಎಸಿ ಸ್ಲೀಪರ್ ಸಾರಿಗೆ ಸೇವೆ ಆರಂಭ, ದರಪಟ್ಟಿ ತಿಳಿಯಿರಿ
ಹುಬ್ಬಳ್ಳಿ, ಜುಲೈ. 08: ಸಾರ್ವಜನಿಕರ ನಿರಂತರ ಆಗ್ರಹ ಮತ್ತು ಬೇಡಿಕೆಗೆ ಮಣಿದ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಎರಡು ವಾಣಿಜ್ಯ ನಗರಗಳ ನಡುವೆ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಮುಂಬೈಗೆ ಎಸಿ ಸ್ಲೀಪರ್ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.
ಜನನಿಬೀಡ ವಾಣಿಜ್ಯ ನಗರಿ ಮುಂಬೈಗೆ ಹುಬ್ಬಳ್ಳಿಯಿಂದ ಎಸಿ ಸ್ಲಿಪರ್ ಸಾರಿಗೆ ಸೇವೆ ಆರಂಭಿಸಿರುವ ಬಗ್ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪ್ರತಿ ದಿನ ಎರಡು ನಗರಗಳ ನಡುವೆ NWKRTC ಬಸ್ ಸೇವೆ ಇರಲಿದೆ. ದರಪಟ್ಟಿ, ಬಸ್ ಸಮಯ ಮತ್ತು ಮಾರ್ಗಗಳ ವಿವರಣೆ ಇಲ್ಲಿದೆ.

ಹುಬ್ಬಳ್ಳಿಯಿಂದ ಮುಂಬೈಗೆ ಎಸಿ ಸ್ಲೀಪರ್ ಬಸ್
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 25ನೇ ಸಂಸ್ಥಾಪನೋತ್ಸವ ಆಚರಿಸುತ್ತಿದ್ದು, ಇದೆ ವೇಳೆ ಹಲವು ನಗರಗಳಿಂಗೆ ತನ್ನ ಬಸ್ ಜಾಲವನ್ನಿ ವಿಸ್ತರಿಸಿದೆ. ಹುಬ್ಬಳ್ಳಿಯಿಂದ ಮುಂಬೈಗೆ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ಪ್ರತಿ ದಿನ ಈ ಬಸ್‌ಗಳು ಸಂಚರಿಸಲಿವೆ. ಹುಬ್ಬಳ್ಳಿಯನ್ನು ಪ್ರತಿ ದಿನ ರಾತ್ರಿ 20:30ಕ್ಕೆ ಬಿಟ್ಟು, ಮುಂಬೈ ಸಿಟಿಗೆ ಬೆಳ್ಳಗೆ 08 ಗಂಟೆಗೆ ತಲುಪಲಿದೆ.
ಅದೇ ರೀತಿ ಮುಂಬೈನಿಂದ ಪ್ರತಿ ದಿನ ರಾತ್ರಿ 20:30ಕ್ಕೆ ಹೊರಡುವ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಗೆ ಬೆಳ್ಳಗೆ 08:30ಕ್ಕೆ ತಲುಪಲಿದೆ. ಈ ಬಸ್‌ಗಳು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗದ ಮೂಲಕ ಪ್ರಯಾಣಿಸಲಿವೆ. ಪ್ರಯಾಣ ದರ 1,419 ರೂಪಾಯಿಗಳಾಗಿವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಬಸ್ ಟಿಕೆಟ್ ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ http://ksrtc.in ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ 7760991682 ಮತ್ತು 77609 91555 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ.












Click it and Unblock the Notifications