NWKRTC: ಪ್ರೇಕ್ಷಣೀಯ ಸ್ಥಳಗಳ ಟೂರ್ ಪ್ಯಾಕೇಜ್: ಸ್ಥಳ, ದರದ ವಿವರಗಳು

ಹುಬ್ಬಳ್ಳಿ, ಜುಲೈ 20: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯ ಇರಲಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ಸಂಚಾರ ನಡೆಸುವ ವಿಶೇಷ ಟೂರ್ ಪ್ಯಾಕೇಜ್‌ ಕುರಿತು ಮಾಹಿತಿಯನ್ನು ನೀಡಿದೆ.

NWKRTC Announces Tour Package Bus Schedule And Fare

ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ, ಧಾರವಾಡ ಮತ್ತು ಹಾವೇರಿ ವಿಭಾಗದಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಬಸ್‌ಗಳು ಸಂಚಾರ ನಡೆಸಲಿವೆ. ಈ ಬಸ್‌ಗಳಲ್ಲಿ ಐರಾವತ, ರಾಜಹಂಸ ಮತ್ತು ಸಾಮಾನ್ಯ ಬಸ್‌ಗಳು ಸೇರಿವೆ. ದರಪಟ್ಟಿಯನ್ನು ಘೋಷಣೆ ಮಾಡಲಾಗಿದ್ದು, ಸಂಚಾರ ನಡೆಸುವ ಜನರು ಅದನ್ನು ತಿಳಿದು, ಪ್ರವಾಸದ ಯೋಜನೆ ರೂಪಿಸಬಹುದು.

ಮಾರ್ಗ, ದರಗಳ ವಿವರಗಳು: ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕೋಡಿ, ಬೆಳಗಾವಿ, ಗದಗ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯವಿದೆ. ಆಸಕ್ತರು ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗಾಗಿ http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಮನವಿ ಮಾಡಲಾಗಿದೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹುಬ್ಬಳ್ಳಿ-ಜೋಗ ಫಾಲ್ಸ್ ನಡುವೆ ಐರಾವತ ಬಸ್ ಓಡಿಸಲಾಗುತ್ತದೆ. ಬಸ್ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದೆ. ಪ್ರಯಾಣ ದರ 600 (ಹೋಗಿ ಬರುವ). ಇದೇ ಮಾರ್ಗದಲ್ಲಿ ರಾಜಹಂಸ ಬಸ್‌ ಸಹ ಓಡಲಿದೆ. ಬಸ್ 7.30ಕ್ಕೆ ಹೊರಡಲಿದೆ. ಪ್ರಯಾಣ ದರ 430 ರೂ. (ಹೋಗಿ ಬರುವ). ವಾಯುವ್ಯ ಕರ್ನಾಟಕ ಸಾರಿಗೆ ಸಹ ಸಂಚಾರ ನಡೆಸಲಿದೆ. 8.10ಕ್ಕೆ ಬಸ್ ಹೊರಡಲಿದೆ. ಪ್ರಯಾಣ ದರ 350 ರೂ. (ಹೋಗಿ ಬರುವ). ವಿವರಕ್ಕೆ 7760991682, 7760991674 ಸಂಖ್ಯೆಗೆ ಕರೆ ಮಾಡಬಹುದು.

ಧಾರವಾಡ ವಿಭಾಗದಿಂದ ಧಾರವಾಡ-ದಾಂಡೇಲಿ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಂಚಾರ ನಡೆಸಲಿದೆ. 7.30ಕ್ಕೆ ಬಸ್ ಹೊರಡಲಿದೆ. ಪ್ರಯಾಣ ದರ 340 ರೂ. (ಹೋಗಿ ಬರುವ). ಧಾರವಾಡ-ಗೋಕಾಕ್ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಂಚಾರ ನಡೆಸಲಿದೆ. ಬಸ್ ಹೊರಡುವ ವೇಳೆ 7.30. ಪ್ರಯಾಣ ದರ 375 ರೂ. (ಹೋಗಿ ಬರುವ). ವಿವರಕ್ಕೆ 7760991688, 7760991679.

ಹಾವೇರಿ ವಿಭಾಗದಿಂದ ಹಾವೇರಿ-ಜೋಗ ಫಾಲ್ಸ್‌ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಓಡಿಸಲಾಗುತ್ತದೆ. ಬಸ್ 8 ಗಂಟೆಗೆ ನಿರ್ಗಮಿಸಲಿದೆ. ಪ್ರಯಾಣ ದರ 340 ರೂ. (ಹೋಗಿ ಬರುವ). ರಾಣೆಬೆನ್ನೂರು-ಜೋಗ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಓಡಲಿದೆ. 8 ಗಂಟೆಗೆ ಬಸ್ ಹೊರಡಲಿದ್ದು, ಪ್ರಯಾಣ ದರ 320 ರೂ. (ಹೋಗಿ ಬರುವ). ವಿವರಗಳಿಗೆ 7760991925, 7760991927 ಸಂಖ್ಯೆಗೆ ಕರೆ ಮಾಡಿ.

ಚಿಕ್ಕೋಡಿ ವಿಭಾಗದಿಂದ ಚಿಕ್ಕೋಡಿ-ಗೋಕಾಕ್ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಂಚಾರ ನಡೆಸಲಿದೆ. ಬಸ್ ನಿರ್ಗಮನ ವೇಳೆ 9 ಗಂಟೆ. ಪ್ರಯಾಣ ದರ 220 ರೂ. (ಹೋಗಿ ಬರುವ). ಸಂಕೇಶ್ವರ-ಗೋಕಾಕ್ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಂಚಾರ. ಬಸ್ ಹೊರಡುವ ವೇಳೆ 9.30. ಪ್ರಯಾಣ ದರ 160 ರೂ. (ಹೋಗಿ ಬರುವ). ನಿಪ್ಪಾಣಿ-ಗೋಕಾಕ್ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಂಚಾರ. ಬಸ್ ನಿರ್ಗಮನ 8.30. ಪ್ರಯಾಣ ದರ 220 ರೂ. (ಹೋಗಿ ಬರುವ). ವಿವರಕ್ಕೆ 7760991875, 7760991877 ಸಂಖ್ಯೆಗೆ ಕರೆ ಮಾಡಿ.

ಬೆಳಗಾವಿ ವಿಭಾಗದಿಂದ ಬೆಳಗಾವಿ-ಗೋಕಾಕ್ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಓಡಿಸಲಾಗುತ್ತದೆ. ಬಸ್ ನಿರ್ಗಮನ ವೇಳೆ 9 ಗಂಟೆ. ಪ್ರಯಾಣ ದರ 190 ರೂ. (ಹೋಗಿ ಬರುವ).

ಗದಗ ವಿಭಾಗದಿಂದ ಗದಗ-ಜೋಗ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಓಡಿಸಲಾಗುತ್ತದೆ. ಬಸ್ 7 ಗಂಟೆಗೆ ಹೊರಡಲಿದೆ. ಹೋಗಿ ಬರುವ ಪ್ರಯಾಣ ದರ 500 ರೂ.ಗಳು. ಗದಗ-ಗೋಕಾಕ್ ಫಾಲ್ಸ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಂಚಾರ ನಡೆಸಲಿದೆ. ಬಸ್ 8 ಗಂಟೆಗೆ ಹೊರಡಲಿದೆ. ಪ್ರಯಾಣ ದರ (ಹೋಗಿ ಬರುವ) 340 ರೂ. ಆಗಿದೆ. ವಿವರಗಳಿಗೆ 7760991825, 7760991830ಕ್ಕೆ ಕರೆ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+