Breaking; ಧಾರ್ಮಿಕ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್, ವೇಳಾಪಟ್ಟಿ
ದಾವಣಗೆರೆ, ಡಿಸೆಂಬರ್ 18; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಡಿಸೆಂಬರ್ ಅಂತ್ಯದಲ್ಲಿ ವಿವಿಧ ಧಾರ್ಮಿಕ ಸ್ಥಳಗಳಿಗೆ ಬಸ್‌ಗಳನ್ನು ಓಡಿಸಲಿದೆ. ಬಸ್ ಸಂಚಾರದ ಸ್ಥಳ, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಕೆಎಸ್ಆರ್‌ಟಿಸಿಯ ದಾವಣಗೆರೆ ವಿಭಾಗ ಈ ಭಾಗದ ಪ್ರಯಾಣಿಕರು/ ಭಕ್ತರ ಅನುಕೂಲಕ್ಕಾಗಿ ದಾವಣಗೆರೆಯಿಂದ ಡಿಸೆಂಬರ್ 23ರಿಂದ ಧಾರ್ಮಿಕ ಸ್ಥಳಗಳಿಗೆ ಪ್ರತಿನಿತ್ಯ ವೇಗದೂತ ಸಾರಿಗೆ ಸೌಕರ್ಯವನ್ನು ಆರಂಭಿಸುತ್ತಿದೆ.
ಪ್ರಯಾಣಿಕರು/ ಭಕ್ತರ ಅನುಕೂಲಕ್ಕಾಗಿ ಪ್ರತಿನಿತ್ಯ ವೇಗದೂತ ಸಾರಿಗೆ ಸೌಕರ್ಯವನ್ನು ಆರಂಭಿಸಲಾಗಿದೆ. ಜನರು ಈ ಬಸ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

* ಪ್ರತಿದಿನ ಸಂಜೆ 6.55ಕ್ಕೆ ದಾವಣಗೆರೆಯಿಂದ ಹೊರಟು ಹರಿಹರ-ಶಿವಮೊಗ್ಗ-ಚಿಕ್ಕಮಗಳೂರು-ಧರ್ಮಸ್ಥಳ ಮಾರ್ಗವಾಗಿ ಬೆಳಗ್ಗೆ 4.30ಕ್ಕೆ ಕುಕ್ಕೆ ಸುಬ್ರಮಣ್ಯಕ್ಕೆ ವೇಗದೂತ ಬಸ್ ತಲುಪಲಿದೆ.
* ಪ್ರತಿದಿನ ಬೆಳಗ್ಗೆ 11.30ಕ್ಕೆ ಕುಕ್ಕೆ ಸುಬ್ರಮಣ್ಯದಿಂದ ಹೊರಡುವ ಬಸ್ ಧರ್ಮಸ್ಥಳ-ಚಿಕ್ಕಮಗಳೂರು- ಶಿವಮೊಗ್ಗ-ಹರಿಹರ ಮಾರ್ಗವಾಗಿ ಸಂಜೆ 6.55 ಕ್ಕೆ ದಾವಣಗೆರೆಗೆ ತಲುಪಲಿದೆ.
ಆಸಕ್ತ ಪ್ರಯಾಣಿಕರು ಆನ್‌ಲೈನ್‌ನ್ ಮೂಲಕವೂ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಮಂಗಳೂರಿನಿಂದಲೂ ಬಸ್ ಸೇವೆ; ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗ ದಸರಾ ಮತ್ತು ದೀಪಾವಳಿ ಸಮಯದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದು ಯಶಸ್ವಿಯಾದ ನಂತರ ಈಗ ವರ್ಷಾಂತ್ಯದಲ್ಲಿಯೂ ಪ್ಯಾಕೇಜ್ ಆರಂಭಿಸುತ್ತಿದೆ.
ಗೋವಾ ಮತ್ತು ಕೇರಳಕ್ಕೆ ಕೆಎಸ್ಆರ್‌ಟಿಸಿ ಬಸ್‌ಗಳು ಈ ಪ್ಯಾಕೇಜ್ ಅಡಿ ಸಂಚಾರ ನಡೆಸಲಿವೆ. ಕ್ರಿಸ್‌ಮಸ್ ರಜೆ ಪ್ರಯುಕ್ತ ಎರಡು ದಿನಗಳ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ. ಇದರಲ್ಲಿ ವಾಸ್ತವ್ಯ, ಆಹಾರ ವ್ಯವಸ್ಥೆಗಳು ಸಹ ಸೇರಿವೆ.
ಶುಕ್ರವಾರ ರಾತ್ರಿ ಹೊರಡುವ ಬಸ್‌ಗಳು ಶನಿವಾರ ಉತ್ತರ ಗೋವಾ, ಭಾನುವಾರ ದಕ್ಷಿಣ ಗೋವಾಗೆ ಸಂಚಾರ ನಡೆಸಿ ಮಂಗಳೂರಿಗೆ ವಾಪಸ್ ಆಗಲಿವೆ. ಡಿಸೆಂಬರ್ 20ರಂದು ಕೆಎಸ್ಆರ್‌ಟಿಸಿ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications