Tirupati Holi Celebration: ಹೋಳಿ ಆಡಿದ ತಿರುಪತಿ ತಿಮ್ಮಪ್ಪ!
ಹೋಳಿ ಬಣ್ಣಗಳ ಹಬ್ಬ. ಈ ಹಬ್ಬವನ್ನು ಆಚರಿಸದೇ ಇರುವವರಿಲ್ಲ. ಬಣ್ಣದ ಹಬ್ಬ ಹೋಳಿಯನ್ನು ಎಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹೋಳಿ ಸಂಬಂಧಗಳನ್ನು ಗಟ್ಟಿಗೊಳಿಸುವ ಹಬ್ಬವಾಗಿದ್ದು ಸ್ನೇಹಿತರು ಕುಟುಂಬಸ್ಥರು ಒಟ್ಟುಗೂಡಿ ಇದನ್ನು ಆಚರಿಸುತ್ತಾರೆ. ಹೀಗೆ ತಿರುಪತಿಯಲ್ಲೂ ಹೋಳಿ ಹಬ್ಬವನ್ನು ಆಚರಿಸಲಾಯಿತು. ತಿರುಪತಿ ದೇವಸ್ಥಾನದಲ್ಲಿ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಸೋಮವಾರ ತಿರುಪತಿಯಾದ್ಯಂತ ಬಣ್ಣ ಹಾಗೂ ನೀರಿನ ಬಲೂನ್‌ಗಳನ್ನು ಎಸೆಯುವ ಮೂಲಕ ಹೋಳಿ ಆಚರಣೆ ಮಾಡಲಾಯಿತು. ಅದರಲ್ಲೂ ಯುವಜನತೆ ಉತ್ಸಾಹದಿಂದ ಹೋಳಿ ಆಡಿದ್ದು ವಿವಿಧ ಶೈಕ್ಷಣಿಕ ಕ್ಯಾಂಪಸ್‌ಗಳು ಸಂಭ್ರಮದಿಂದ ತುಂಬಿರುವುದು ಕಂಡು ಬಂತು. ಉತ್ತರ ಭಾರತದ ಸಮುದಾಯಗಳು ವಾಸಿಸುವ ಚಿನ್ನಾ ಬಜಾರ್‌ನಂತಹ ಉನ್ನತ ಮಾರುಕಟ್ಟೆ ಪ್ರದೇಶಗಳಲ್ಲಿ ವಿಶೇಷವಾಗಿ ಬಣ್ಣದ ಹಬ್ಬವನ್ನು ಆಚರಿಸಲಾಯಿತು. ಮಕ್ಕಳೊಂದಿಗೆ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಬಣ್ಣಗಳನ್ನು ಎರಚುವ ಮೂಲಕ ಸಂತೋಷಪಟ್ಟರು.

ಪೊಲೀಸರಿಂದ ಹೋಳಿ...
ಇದೇ ವೇಳೆ ಸಾರ್ವತ್ರಿಕ ಚುನಾವಣೆಗೂ ಮುನ್ನ ತಿರುಪತಿಗೆ ಆಗಮಿಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ಪಟೇಲ್ ಹೋಳಿ ಆಚರಿಸಿದರು. ಹಬ್ಬದ ಸಂದರ್ಭದಲ್ಲಿ ತಮ್ಮ ಕುಟುಂಬದಿಂದ ದೂರವಿರುವ ಅನಿಶ್ಚಿತ ಸದಸ್ಯರು ಕರ್ತವ್ಯದಲ್ಲಿರುವಾಗ, ಎಸ್ಪಿ ಅವರ ಶಿಬಿರಕ್ಕೆ ಭೇಟಿ ನೀಡಿ, ಸಿಹಿ ಹಂಚಿವ ಮೂಲಕ ಅವರ ಮೇಲೆ ಬಣ್ಣ ಎರಚಿದರು.
ಬಿಎಸ್‌ಎಫ್ ಕಮಾಂಡೆಂಟ್ ಕೆ.ಮುರಳಿ, ಸಹಾಯಕ ಕಮಾಂಡೆಂಟ್‌ಗಳಾದ ಬಿ.ಸಂಜೀವ್, ಗೌರಿ ಶಂಕರ್, ಉಪ ಅಧೀಕ್ಷಕರಾದ ಭಾಸ್ಕರ್ ರೆಡ್ಡಿ, ಸುರೇಂದ್ರ ರೆಡ್ಡಿ ಮತ್ತು ರವೀಂದ್ರರೆಡ್ಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಿರುಮಲದಲ್ಲಿ ಹುಣ್ಣಿಮೆ ಗರುಡ ಸೇವೆ
ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಹುಣ್ಣಿಮೆ ಗರುಡ ಸೇವೆ ಸೋಮವಾರ ನೆರವೇರಿತು. ಸಂಜೆ 7 ಗಂಟೆಗೆ ತಿರುಮಲದಲ್ಲಿ ಪೌರ್ಣಮಿ ಗರುಡ ವಾಹನ ಸೇವೆ ಆರಂಭವಾಯಿತು. ಸರ್ವಾಲಂಕಾರ ಅಲಂಕೃತ ಶ್ರೀಮಲಯಪ್ಪ ಸ್ವಾಮಿ ದೇವಸ್ಥಾನದ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ಆಶೀರ್ವದಿಸಿದನು. ಭಕ್ತರು ಸರ್ವಾಲಂಕಾರಗೊಂಡ ತಿಮ್ಮಪ್ಪನನ್ನು ಕಣ್ತುಂಬಿಕೊಂಡರು. ವಾಹನ ಸೇವೆಯಲ್ಲಿ ತಿರುಮಲ ಚಿನ್ನ ಜೀಯರ್ ಸ್ವಾಮಿ, ದೇವಸ್ಥಾನದ ಉಪ ಈವೋ ಲೋಕನಾಥಂ ಮತ್ತಿತರರು ಪಾಲ್ಗೊಂಡಿದ್ದರು.
ಹೋಳಿಯಂದು ತಿರುಮಲದಲ್ಲಿ ತುಂಬೂರು ತೀರ್ಥ ಮುಕ್ಕೋಟಿ ಉತ್ಸವ
ತಿರುಮಲದಲ್ಲಿ ಮಾರ್ಚ್ 24 ಮತ್ತು 25 ರಂದು ತಿರುಮಲದಲ್ಲಿ ತುಂಬೂರುತೀರ್ಥ ಮುಕ್ಕೋಟಿ ಉತ್ಸವಗಳು ನಡೆದವು. ತುಂಬುತೀರ್ಥ ಮುಕ್ಕೋಟಿ ಉತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವ್ಯವಸ್ಥೆ ಮಾಡಿತ್ತು. ಹಬ್ಬದ ಸಂದರ್ಭದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು.

ಉತ್ಸವದ ಅಂಗವಾಗಿ ಮಾರ್ಚ್ 25ರ ಬೆಳಗ್ಗೆ ಅಂದರೆ ಸೋಮವಾರ ಬೆಳಗ್ಗೆ 5ರಿಂದ 11ರವರೆಗೆ ತುಂಬೂರು ತೀರ್ಥ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ದೇಗುಲಕ್ಕೆ ಬಹಳ ದೂರ ನಡೆದುಕೊಂಡು ಹೋಗಿ ಭಕ್ತರು ಉತ್ಸವ ಕಣ್ತುಂಬಿಕೊಂಡರು. ಈ ಹಿನ್ನೆಲೆಯಲ್ಲಿ ಹೃದಯ, ಉಸಿರಾಟದ ಸಮಸ್ಯೆ, ಬೊಜ್ಜು ಇರುವವರಿಗೆ ಅವಕಾಶವಿಲ್ಲ ಎಂದು ಟಿಟಿಡಿ ಪ್ರಕಟಣೆಯಲ್ಲಿ ಮೊದಲೇ ತಿಳಿಸಿತ್ತು.
ಫಾಲ್ಗುಣ ಮಾಸದಲ್ಲಿ ಉತ್ತರ ಫಾಲ್ಗುಣಿ ನಕ್ಷತ್ರದ ಹುಣ್ಣಿಮೆಯಂದು ತುಂಬೂರು ತೀರ್ಥ ಮುಕ್ಕೋಟಿ ನಡೆಸುವುದು ವಾಡಿಕೆ. ಈ ತೀರ್ಥದಲ್ಲಿ ಸ್ನಾನ ಮಾಡಿ, ದಾನಧರ್ಮ ಮಾಡಿ, ದೇವರ ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದ್ದರಿಂದ ತುಂಬುರತೀರ್ಥ ಮುಕ್ಕೋಟಿ ಉತ್ಸವದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು. ನಂಬಿ ಬಂದ ಭಕ್ತರಿಗೆ ಉತ್ಸವದಲ್ಲಿ ದರ್ಶನ ನೀಡುವ ಶ್ರೀವಾರಿ ಹೋಳಿ ಆಚರಣೆ ನೋಡಲು ಎರಡು ಕಣ್ಣು ಸಾಲದಾಗಿತ್ತು.












Click it and Unblock the Notifications