ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್ ಸೇವೆ ಆರಂಭ: ಸಮಯ, ವೆಚ್ಚ ಇತರೆ ವಿವರಗಳು
ಬೆಂಗಳೂರು, ಜೂನ್. 08: ಸಿಲಿಕಾನ್ ಸಿಟಿಯಿಂದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ. ಇನ್ನು ಮುಂದೆ ಈ ತಿರುಪತಿ ತೀರ್ಥಯಾತ್ರೆ ಮಾಡುವುದು ಬೆಂಗಳೂರಿಗರಿಗೆ ತುಂಬಾ ಸುಲಭ. ಏಕೆಂದರೆ ಬ್ಲೇಡ್ ಇಂಡಿಯಾ, ಹಂಚ್ ವೆಂಚರ್ಸ್ ಜೊತೆಗೆ ಸೇರಿ ಬೆಂಗಳೂರು ಮತ್ತು ತಿರುಪತಿ ನಡುವೆ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಿದೆ.
ಕರ್ನಾಟಕದ ರಾಜಧಾನಿಯಿಂದ ಸರಿಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ತಿರುಮಲ ತಿರುಪತಿ ಒಂದು ಜನಪ್ರಿಯ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಪ್ರತಿ ತಿಂಗಳು ಲಕ್ಷಾಂತರ ಯಾತ್ರಿಕರು ಭೇಟಿ ನೀಡುತ್ತಾರೆ. ತೀರ್ಥಯಾತ್ರೆಯನ್ನು ಸುಲಭಗೊಳಿಸಲು ಹೊಸ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಲಾಗಿದೆ, ವಿಶೇಷವಾಗಿ ಈ ಪ್ರವಾಸವು ಹೆಚ್ಚಾಗಿ ವೃದ್ಧರಿಗೆ ಸವಾಲಾಗಿದ್ದು, ಇನ್ನು ಅವರ ಪ್ರಯಾಣ ಸುಲಭವಾಗಲಿದೆ.

'ಬೇಡಿಕೆ' ಆಧಾರದ ಮೇಲೆ ವಿಮಾನಗಳು ಲಭ್ಯವಿವೆ. ಫ್ಲೈಬ್ಲೇಡ್ ಇಂಡಿಯಾ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 9.30 ರ ಸುಮಾರಿಗೆ ಈ ಸೇವೆಯನ್ನು ನೀಡಲಿದೆ. ಬೆಳಗ್ಗೆ 9.15 ರಿಂದ 9:30 ಹೊರಟ ಯಾತ್ರಿಕರು ಅದೇ ದಿನ ಸಂಜೆ 4:00 ರಿಂದ 4:15 ಗಂಟೆಗೆ ತಿರುಪತಿಯಿಂದ ಹಿಂತಿರುಗಬಹುದು. ತಿರುಮಲಕ್ಕೆ ಹೋಗುವ ಹೆಲಿಕಾಪ್ಟರ್‌ನಲ್ಲಿ ಐದು ಅತಿಥಿಗಳಿಗೆ ಸ್ಥಳಾವಕಾಶವಿದೆ.
ಚಾಪರ್ ಸವಾರಿಯು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ತಿರುಪತಿಯು ಬೆಂಗಳೂರಿನಿಂದ ನಾಲ್ಕು ಗಂಟೆಗಳ ಡ್ರೈವ್ ಆಗಿದೆ. ಅದು ಹೆಲಿಕಾಪ್ಟರ್ ಸೇವೆಯೊಂದಿಗೆ ಯಾತ್ರಿಗಳು ಸುಮಾರು 1.5 ಗಂಟೆಗಳಲ್ಲಿ ದೇವಸ್ಥಾನಕ್ಕೆ ತಲುಪಬಹುದು. ಬೆಂಗಳೂರಿನಿಂದ ತಿರುಪತಿಗೆ ಹೆಲಿಕಾಪ್ಟರ್‌ನಲ್ಲಿ ಹೋಗಲು ಜಿಎಸ್‌ಟಿ (GST) ಹೊರತುಪಡಿಸಿ ಸುಮಾರು 3,50,000 ರೂಪಾಯಿಯಾಗಲಿದೆ.

ಪೂರ್ಣ ಹೆಲಿಕಾಫ್ಟರ್ 3,50,000 ರಿಂದ ಲಭ್ಯವಿದೆ. ಒಂದು ಸಮಯದಲ್ಲಿ ಐದು ಅತಿಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಐವರು ಪ್ರಯಾಣಿಕರು ಒಟ್ಟಿಗೆ ಹೋಗಬಹದು. ಒಬ್ಬರೇ ಹೋಗುವವರಿದ್ದರೂ ಖಾಸಗಿ ಹೆಲಿಕಾಫ್ಟರ್ ಪಡೆಯಬಹುದು. ಫ್ಲೈಬ್ಲೇಡ್ ಇಂಡಿಯಾ ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. BLADE India ವೆಬ್‌ಸೈಟ್‌ನಲ್ಲಿ ಅಥವಾ 1800-102-5233 ರಲ್ಲಿ ಬುಕಿಂಗ್ ಮಾಡಬಹುದು.
ಬುಕಿಂಗ್‌ಗಳನ್ನು ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಮಾಡಬೇಕಾಗಿದೆ. ದೇಶಾದ್ಯಂತದ ಯಾತ್ರಾರ್ಥಿಗಳು ದೇವಾಲಯದ ಪಟ್ಟಣಕ್ಕೆ ಭೇಟಿ ನೀಡುವುದರಿಂದ ತಿರುಪತಿ ಈಗಾಗಲೇ ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಫ್ಲೈಬ್ಲೇಡ್ ಇಂಡಿಯಾ ಇಂಡಿಯಾ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಪರ್ ಸೇವೆಯನ್ನು ಪ್ರಾರಂಭಿಸಿದೆ.
ನಗರದಿಂದ ವಿಮಾನ ನಿಲ್ದಾಣಕ್ಕೆ ಎರಡು ಗಂಟೆಗಳ ಪ್ರಯಾಣದ ಸಮಯವನ್ನು 15 ನಿಮಿಷಗಳಿಗೆ ಕಡಿಮೆ ಮಾಡಿದೆ. ಇದು ಬೆಂಗಳೂರಿನಿಂದ ಕರ್ನಾಟಕದ ಮಲೆನಾಡು ಮತ್ತು ಕಬಿನಿ ಪ್ರದೇಶಗಳಿಗೆ ಚಾಪರ್ ಸೇವೆಯನ್ನು ಸಹ ಒದಗಿಸುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ ಫ್ಲೈಬ್ಲೇಡ್ ಇಂಡಿಯಾ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ (ಜಿಟಿಡಿಸಿ) ಕೈಜೋಡಿಸಿದೆ.












Click it and Unblock the Notifications