ಕೆಎಸ್‌ಆರ್‌ಟಿಸಿಯಿಂದ 100 ಹೊಸ ಬಸ್ ಖರೀದಿ; ಮೊದಲ ಬಾರಿಗೆ ಈ ಮಾದರಿ ಬಸ್ ಸಂಚಾರ
ಬೆಂಗಳೂರು, ಜೂನ್ 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) 100 ಹೊಸ ಮಾದರಿ ಬಸ್‌ಗಳ ಖರೀದಿಗೆ ಟೆಂಡರ್ ಕರೆದಿದೆ. ಸಿಟ್ಟಿಂಗ್ ಮತ್ತು ಸ್ಲೀಪರ್ ಮಾದರಿ ಬಸ್‌ಗಳು ಇವಾಗಿದ್ದು, ಮೊದಲ ಬಾರಿಗೆ ಈ ಮಾದರಿಯ ಬಸ್‌ಗಳನ್ನು ನಿಗಮ ಓಡಿಸಲಿದೆ.
ಕೆಎಸ್ಆರ್‌ಟಿಸಿಯ ಅಂತರ ನಗರ ಬಸ್ ಪ್ರಯಾಣಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ಹೊಸ ಮಾದರಿ ಬಸ್‌ಗಳನ್ನು ಇಂತಹ ಮಾರ್ಗದಲ್ಲಿ ಪರಿಚಯಿಸಲು ನಿಗಮ ಮುಂದಾಗಿದೆ.

ಜೂನ್ 14ರಂದು ಕೆಎಸ್ಆರ್‌ಟಿಸಿ 30 ಆಸನಗಳ ಸೀಟರ್ ಕಮ್ ಸ್ಲೀಪರ್, 70 ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಬಸ್‌ಗಳ ಖರೀದಿಗೆ ಟೆಂಡರ್ ಕರೆದಿದೆ. ಇದೇ ಮೊದಲ ಬಾರಿಗೆ ನಿಗಮ ನಾನ್ ಎಸಿ ಸೀಟರ್ ಕಮ್ ಸ್ಲೀಪರ್ ಬಸ್‌ಗಳನ್ನು ಓಡಿಸುತ್ತಿದೆ. ಈ ಮಾದರಿಯ ಹಲವು ಖಾಸಗಿ ಬಸ್‌ಗಳು ರಾಜ್ಯದಲ್ಲಿ ಸಂಚಾರ ನಡೆಸುತ್ತಿವೆ.
ಪಲ್ಲಕ್ಕಿ ಮಾದರಿ ಬಸ್‌ಗಳು: ಕೆಎಸ್ಆರ್‌ಟಿಸಿ 2023ರ ಅಕ್ಟೋಬರ್‌ನಲ್ಲಿ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿತು. 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಬಸ್‌ಗಳು ರಾಜ್ಯದಲ್ಲಿ ಜನಪ್ರಿಯವಾಗಿವೆ. ಈ ಮಾದರಿಯಲ್ಲಿಯೇ ಹೊಸ 100 ಬಸ್‌ಗಳನ್ನು ಖರೀದಿ ಮಾಡಲು ಈಗ ಟೆಂಡರ್ ಕರೆಯಲಾಗಿದೆ.
ಟೆಂಡರ್ ನಿಯಾವಳಿಗಳ ಅನ್ವಯ ಸುಮಾರು 6 ತಿಂಗಳಿನಲ್ಲಿ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಖರೀದಿಗೆ ಮೊದಲು 30 ಆಸನಗಳ ಸೀಟರ್ ಕಮ್ ಸ್ಲೀಪರ್ ಬಸ್‌ನಲ್ಲಿ 5 ಬಸ್‌ಗಳು, 70 ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಬಸ್‌ಗಳಲ್ಲಿ 10 ಬಸ್‌ಗಳು ರಾಜ್ಯದಲ್ಲಿ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಬೇಕಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕ ಸಂಚಾರ ನಡೆಯಲಿದೆ.
'ಪಲ್ಲಕ್ಕಿ' ಮಾದರಿ ಬಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ನಾವು ಖಾಸಗಿ ಬಸ್‌ಗಳ ಮಾದರಿಯಲ್ಲಿ ನಾನ್ ಎಸಿ ಸೀಟರ್ ಕಮ್ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲು ತಯಾರಿ ನಡೆಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲು ನಾವು 30 ಆಸನಗಳ ಸೀಟರ್ ಕಮ್ ಸ್ಲೀಪರ್ ಮೂವತ್ತು ಬಸ್‌ಗಳನ್ನು ಖರೀದಿ ಮಾಡಲಿದ್ದೇವೆ. ಇವುಗಳಿಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಹಂತ-ಹಂತವಾಗಿ ಹೆಚ್ಚು ಬಸ್‌ಗಳನ್ನು ಖರೀದಿ ಮಾಡಲಾಗುತ್ತದೆ. ಈ ಮಾದರಿಯ ಖಾಸಗಿ ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಂಡರ್ ಪಡೆಯುವ ಕಂಪನಿ ಮೊದಲು ಪ್ರಾಯೋಗಿಕ ಸಂಚಾರ ನಡೆಸಬೇಕು. ಕೆಎಸ್ಆರ್‌ಟಿಸಿಯ ತಜ್ಞರ ತಂಡ ಬಸ್‌ಗಳ ವಿವಿಧ ಪರೀಕ್ಷೆಗಳನ್ನು ನಡೆಸಿ ಬಸ್ ಖರೀದಿಗೆ ಹಸಿರು ನಿಶಾನೆ ತೋರಿಸಲಿದೆ. ಒಂದು ವೇಳೆ ಬಸ್‌ಗಳ ಸೇವೆ ತೃಪ್ತಿದಾಯಕವಾಗಿಲ್ಲ ಎಂದರೆ ಬಸ್‌ಗಳ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸುವ ರೀತಿ ನಿಯಮ ರೂಪಿಸಲಾಗಿದೆ.
ಕೆಎಸ್ಆರ್‌ಟಿಸಿ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ ಪುದುಚೇರಿ ಸೇರಿದಂತೆ ವಿವಿಧ ಅಂತರಾಜ್ಯ ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ ನಿಗಮದ 8,113 ಬಸ್‌ಗಳು ಸಂಚಾರ ನಡೆಸುತ್ತಿದ್ದು, ಸುಮಾರು 32.7 ಲಕ್ಷ ಪ್ರಯಾಣಿಕರು ಸಂಚಾರವನ್ನು ನಡೆಸುತ್ತಿದ್ದಾರೆ. ಈ ಬಸ್ ಸೇವೆಯಲ್ಲಿ ಸಾಮಾನ್ಯದಿಂದ ಐಷಾರಾಮಿ ಬಸ್ ತನಕ ವಿವಿಧ ಮಾದರಿ ಬಸ್‌ಗಳು ಸೇರಿವೆ.
ಈಗಾಗಲೇ ಕೆಎಸ್ಆರ್‌ಟಿಸಿ ಸಾಮಾನ್ಯ, ರಾಜಹಂಸ, ಐರಾವತ ಸೇರಿದಂತೆ ವಿವಿಧ ಮಾದರಿಯ ಎಸಿ, ನಾನ್ ಎಸಿ, ಸ್ಲೀಪರ್ ಬಸ್‌ಗಳನ್ನು ಓಡಿಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಖಾಸಗಿ ಬಸ್‌ಗಳ ಮಾದರಿಯಲ್ಲಿ ಸೀಟರ್ ಕಮ್ ಸ್ಲೀಪರ್ ಬಸ್ ಓಡಿಸಲು ಮುಂದಾಗಿದೆ. ಈ ಬಸ್ ಸೇವೆಗೆ ಹೇಗೆ ಪ್ರತಿಕ್ರಿಯೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.
-
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ











Click it and Unblock the Notifications