ಮೈಸೂರು-ವಿಜಯಪುರ ವಯಾ ಬೆಂಗಳೂರು ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 19: ದಸರಾ ಹಬ್ಬದ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ನೈಋತ್ಯ ರೈಲ್ವೆ ಮೈಸೂರು-ವಿಜಯಪುರ ನಡುವೆ ಒಂದು ಟ್ರಿಪ್ ಸಂಚಾರ ನಡೆಸುವ ವಿಶೇಷ ರೈಲು ಘೋಷಣೆ ಮಾಡಿದೆ. ಈ ರೈಲು ಬೆಂಗಳೂರು, ಹುಬ್ಬಳ್ಳಿ ಮೂಲಕ ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಈಗಾಗಲೇ ಹಲವು ಮಾರ್ಗದಲ್ಲಿ ವಾರಾಂತ್ಯದ ರಜೆ, ದಸರಾ ಹಬ್ಬದ ಅಂಗವಾಗಿ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಈಗ ಮೈಸೂರು-ವಿಜಯಪುರ ಒಂದು ಟ್ರಿಪ್ ರೈಲು ಓಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Dasara Special Train Between Mysuru Vijayapura Via Bengaluru Hubballi Schedule

ದಸರಾ ಹಿನ್ನಲೆಯಲ್ಲಿ ರೈಲು ನಂಬರ್ 06203 ಮೈಸೂರು-ವಿಜಯಪುರ ವಯಾ ಬೆಂಗಳೂರು ಒಂದು ಟ್ರಿಪ್ ಮತ್ತು ರೈಲು ನಂಬರ್ 06204 ವಿಜಯಪುರ-ಮೈಸೂರು ವಯಾ ಹುಬ್ಬಳ್ಳಿ, ಹಾಸನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ವೇಳಾಪಟ್ಟಿ; ರೈಲು ನಂಬರ್ 06203 ಅಕ್ಟೋಬರ್ 20ರಂದು ಮೈಸೂರಿನಿಂದ ಹೊರಡಲಿದೆ. ಮೈಸೂರಿಂದ 17:30ಕ್ಕೆ ಹೊರಡುವ ರೈಲು, 17:55 ಮಂಡ್ಯ, 18:36 ರಾಮನಗರ, 19:06 ಕೆಂಗೇರಿ, 20:35 ಕೆಎಸ್ಆರ್‌ ಬೆಂಗಳೂರು, 20:50 ಯಶವಂತಪುರ ಜಂಕ್ಷನ್, 21:32 ತುಮಕೂರಿಗೆ ಆಗಮಿಸಲಿದೆ.

22:45 ಅರಸೀಕೆರೆ ಜಂಕ್ಷನ್, 23:18 ಬೀರೂರು ಜಂಕ್ಷನ್, 00:45 ದಾವಣಗೆರೆ, 01:02 ಹರಿಹರ, 01:56 ಹಾವೇರಿ, 05:20 ಎಸ್‌ಎಸ್‌ಎಸ್ ಹುಬ್ಬಳ್ಳಿ, 06:52 ಹೊಳೆ ಅಲೂರು, 07:47 ಬಾದಾಮಿ, 08:15 ಬಾಗಲಕೋಟೆ, 10:00 ವಿಜಯಪುರಕ್ಕೆ ತಲುಪಲಿದೆ.

ರೈಲು ಸಂಖ್ಯೆ 06204 ವಿಜಯಪುರ ರೈಲು ನಿಲ್ದಾಣದಿಂದ ಅಕ್ಟೋಬರ್ 21ರಂದು ಹೊರಟು ಹುಬ್ಬಳ್ಳಿ-ಹಾಸನ ಮೂಲಕ ಮರುದಿನ ಮೈಸೂರಿಗೆ ತಲುಪಲಿದೆ. ವಿಜಯಪುರದಿಂದ ರೈಲು 11:45ಕ್ಕೆ ಹೊರಡಲಿದೆ. ಬಾಗಲಕೋಟೆ 13:40, ಬಾದಾಮಿ 14:10, ಹೊಳೆ ಅಲೂರು 14:22, ಎಸ್ಎಸ್‌ಎಸ್ ಹುಬ್ಬಳ್ಳಿ 17:30, ಹಾವೇರಿ 19:10, ರಾಣೆಬೆನ್ನೂರು 19:30, ಹರಿಹರ 19:52ಕ್ಕೆ ತಲುಪಲಿದೆ.

ದಾವಣಗೆರೆ 20:10, ಬೀರೂರು ಜಂಕ್ಷನ್ 21:35, ಅರಸೀಕೆರೆ 22:30, ಹಾಸನ 23:20, ಹೊಳೆನರಸೀಪುರ 23:52, ಕೃಷ್ಣರಾಜಪುರ 00:45 ಮತ್ತು ಮೈಸೂರು ಜಂಕ್ಷನ್ 03:00 ತಲುಪಲಿದೆ.

ರೈಲು ಪ್ರಯಾಣಿಕರು https://enguiry.indianrail.gov.in ವೆಬ್‌ಸೈಟ್‌ ಅನ್ನು ಪರಿಶೀಲಿಸಿ ಅಥವಾ 139ಕ್ಕೆ ಡಯಲ್ ಮಾಡಿ ಅಥವಾ ತಮ್ಮ ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ನೈಋತ್ಯ ರೈಲ್ವೆ ದಸರಾ ಸಂದರ್ಭದಲ್ಲಿ ಉಂಟಾಗುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಲವಾರು ಮಾರ್ಗದಲ್ಲಿ ವಿಶೇಷ ರೈಲು ಓಡಿಸುತ್ತಿದೆ. ಬೆಂಗಳೂರಿನ ಯಶವಂತಪುರ-ಬೀದರ್ ಮತ್ತು ಯಲಹಂಕ-ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ.

ವಾಸ್ಕೋ-ಡ-ಗಾಮಾ ಮತ್ತು ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ನಿಲ್ದಾಣಗಳ ನಡುವೆ 1 ಟ್ರಿಪ್ ಸಂಚಾರ ನಡೆಸುವ ವಿಶೇಷ ರೈಲನ್ನು ಸಹ ಓಡಿಸುತ್ತಿದೆ. ಬೆಂಗಳೂರು-ಬಳ್ಳಾರಿ-ವಿಜಯನಗರ, ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಓಡಿಸಬೇಕು ಎಂಬ ಬೇಡಿಕೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+