Chardham Yatra 2024: ಚಾರ್‌ಧಾಮ್ ಹೆಲಿಕಾಪ್ಟರ್ ಆನ್‌ಲೈನ್ ಬುಕಿಂಗ್ ಪ್ರಾರಂಭ ದಿನಾಂಕ ಪ್ರಕಟ
ಉತ್ತರಖಂಡದ ಚಾರ್‌ಧಾಮ್ ಯಾತ್ರೆ ಆರಂಭಗೊಳ್ಳುತ್ತಿದ್ದು ಇದಕ್ಕಾಗಿ ಮುಂಗಡ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಈ ನಡುವೆ ಹೆಲಿಕಾಪ್ಟರ್ ಸೇವೆಗಾಗಿ ಆನ್‌ಲೈನ್ ಬುಕಿಂಗ್ ಪ್ರಾರಂಭ ದಿನಾಂಕ ಕೂಡ ಘೋಷಣೆ ಮಾಡಲಾಗಿದೆ. ಚಾರ್‌ಧಾಮ್‌ಗೆ ತೆರಳು ಬಯಸುವ ಭಕ್ತರು ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಲು ಆನ್‌ಲೈನ್ ಬುಕಿಂಗ್ ಮಾಡಬಹುದಾಗಿದೆ. ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಚಾರ್‌ಧಾಮ್ ದೇಶದಲ್ಲೇ ತುಂಬಾ ಪ್ರಸಿದ್ಧವಾದ ಯಾತ್ರೆಯಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿದರೆ ಮೋಕ್ಷ ಪಡೆಯುತ್ತಾರೆನ್ನುವ ನಂಬಿಕೆ ಇದೆ. ಹೀಗಾಗಿ ಜನ ಉತ್ತರಖಂಡದಲ್ಲಿ ಇರುವ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಲು ಬಯಸುತ್ತಾರೆ.

ಈ ಬಾರಿ ಕೇದಾರನಾಥ ದೇವಸ್ಥಾನದ ಬಾಗಿಲು ಮೇ10ರಂದು ತೆರೆಯಲಿದ್ದು, ಈ ದಿನದಿಂದ ಭಕ್ತಾಧಿಗಳಿಗೆ ಕೇದಾರನಾಥನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿಗೆ ಭೇಟಿ ನೀಡಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೀಗಾಗಿ ಭಕ್ತರಿಗಾಗಿ ಸೋಮವಾರ (ಏಪ್ರಿಲ್ 15) ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಆರಂಭವಾದ ಮೊದಲ ದಿನವೇ ಚಾರ್ಧಾಮ್ ಯಾತ್ರೆಗಾಗಿ 2 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ.
ಹೆಲಿಕಾಪ್ಟರ್ ಸೇವೆಗಾಗಿ ಆನ್‌ಲೈನ್ ಬುಕಿಂಗ್ ಪ್ರಾರಂಭ
ಚಾರ್‌ಧಾಮ್ ಯಾತ್ರೆಗಾಗಿ ಹೆಲಿಕಾಪ್ಟರ್ ಸೇವೆಗಳ ಬುಕಿಂಗ್ ಏಪ್ರಿಲ್ 20ರಿಂದ ಪ್ರಾರಂಭವಾಗಲಿದೆ. ಈ ಬಾರಿ ಚಾರ್‌ಧಾಮ್‌ಗೆ ಹೆಲಿಕಾಪ್ಟರ್ ಸೇವೆಯ ದರವನ್ನು ಶೇಕಡಾ ಐದರಷ್ಟು ಹೆಚ್ಚಿಸಲಾಗಿದೆ. ಐಆರ್‌ಸಿಟಿಸಿ ಮೂಲಕ ಬುಕ್ಕಿಂಗ್ ಮಾಡಲಾಗುವುದು.
ಒಂದು ಧಾಮ್‌ಗೆ ಪ್ರಯಾಣ ದರ:
ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಏಕ್ ಧಾಮ್ ಗೆ ಭೇಟಿ ನೀಡಲು 3.5 ಲಕ್ಷ ರೂಪಾಯಿಗೆ ಚಾರ್ಟರ್ಡ್ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುತ್ತದೆ. ಕೆಸ್ಟ್ರೆಲ್ ಏವಿಯೇಷನ್ ಆರು ಲಕ್ಷಕ್ಕೆ ದೋ ಧಾಮ್‌ಗೆ ಪ್ರಯಾಣಿಸಲು ಚಾರ್ಟರ್ಡ್ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುತ್ತದೆ.

ಎರಡು ಧಾಮ್‌ಗೆ ಪ್ರಯಾಣ ದರ:
ಎರಡು ಧಾಮ್‌ಗೆ ಪ್ರಯಾಣಿಸಲು UCADA ಪ್ರತಿ ಪ್ರಯಾಣಿಕರಿಗೆ ದರವನ್ನು ನಿಗದಿಪಡಿಸಿದೆ. ಇದರಲ್ಲಿ ಏರೋ ಕ್ರಾಫ್ಟ್ ಏವಿಯೇಷನ್ ಕಂಪನಿ ಚಾರ್ಟರ್ಡ್ ಹೆಲಿಕಾಪ್ಟರ್‌ನ ದರ ಪ್ರತಿ ಪ್ರಯಾಣಿಕರಿಗೆ 1.15 ಲಕ್ಷ ರೂಪಾಯಿ ಆದರೆ ಹಿಮಾಲಯನ್ ಹೆಲಿ ಸರ್ವೀಸ್ ಕಂಪನಿ ಪ್ರತಿ ಪ್ರಯಾಣಿಕರಿಗೆ 1.25 ಲಕ್ಷ ರೂಪಾಯಿ ನಿಗಧಿಪಡಿಸಿದೆ. ಇನ್ನೂ ಧಾಮ್‌ನಲ್ಲಿ ರಾತ್ರಿ ವಾಸ್ತವ್ಯವಿರುತ್ತದೆ. ಅದೇ ದಿನ ಹಿಂದಿರುಗಿದರೆ, ಪ್ರತಿ ಪ್ರಯಾಣಿಕರಿಗೆ 1.05 ಲಕ್ಷ ರೂಪಾಯಿ ಇರುತ್ತದೆ.
ಚಾರ್‌ಧಾಮ್‌ಗೆ ಪ್ರಯಾಣ ದರ:
ಇದಲ್ಲದೇ ಚಾರ್‌ಧಾಮ್ ಗೆ ಪ್ರಯಾಣಿಸಲು ಚಾರ್ಟರ್ಡ್ ಹೆಲಿಕಾಪ್ಟರ್ ದರವನ್ನು ಪ್ರತಿ ಪ್ರಯಾಣಿಕರಿಗೆ 1.95 ಲಕ್ಷದಿಂದ 2 ಲಕ್ಷ ರೂ.ಗೆ ನಿಗದಿಪಡಿಸಲಾಗುತ್ತದೆ.












Click it and Unblock the Notifications