Vande Bharat Train: ಬೆಂಗಳೂರು-ಕೊಯಮತ್ತೂರು ವೇಳಾಪಟ್ಟಿ ಬದಲು
ಬೆಂಗಳೂರು, ಏಪ್ರಿಲ್ 29: ಬೆಂಗಳೂರು ಮತ್ತು ತಮಿಳುನಾಡು ನಡುವೆ ಸಂಚಾರ ನಡೆಸುವ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದಿದೆ. ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು 28/5/2024ರ ತನಕ ಪರಿಷ್ಕರಣೆ ಮಾಡಲಾಗಿದೆ.
ಬೆಂಗಳೂರು-ಕೊಯಮತ್ತೂರು ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. 29/4/2024 ರಿಂದ 28/5/2024ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಪರಿಷ್ಕೃತ ವೇಳಾಪಟ್ಟಿ: ಪಾಲಕ್ಕಾಡ್ ಮತ್ತು ಧರ್ಮಪುರಿ ರೈಲು ನಿಲ್ದಾಣಗಳ ನಡುವೆ ನಿರ್ವಹಣೆ ಕಾರ್ಯ ಕೈಗೊಳ್ಳುವುದಿಂದ ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೊಯಮತ್ತೂರು ನಡುವೆ ಸಂಚಾರ ನಡೆಸುವ ರೈಲು ನಂಬರ್ 20641 ವೇಳಾಪಟ್ಟಿ ಪರಿಷ್ಕರಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು ನಡುವಿನ ವಂದೇ ಭಾರತ್ ರೈಲು 14.20ರ ಬದಲಾಗಿ, 15.15ಕ್ಕೆ ಹೊರಡಲಿದೆ. 29 ಏಪ್ರಿಲ್‌ನಿಂದ 28 ಮೇ ತನಕ ರೈಲು 55 ನಿಮಿಷ ತಡವಾಗಿ ಹೊರಡಲಿದೆ ಎಂದು ಪ್ರಕಟಣೆ ಹೇಳಿದೆ.
Bengaluru - Coimbatore
— DRM Salem (@SalemDRM) April 28, 2024
Vande Bharat Express
Rescheduled.
Passengers, Kindly Take Note. pic.twitter.com/pDJgBRM6Or
ಆದರೆ ರೈಲು ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ನಡುವೆ ಸಂಚಾರ ನಡೆಸುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗುರುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ರೈಲು ಸಂಚಾರ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಆಗ ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ಮೊದಲ ಬಾರಿಗೆ ವೇಳಾಪಟ್ಟಿಯನ್ನು ನಿರ್ವಹಣಾ ಕಾಮಗಾರಿಗಳ ಕಾರಣಕ್ಕೆ ಬದಲಾವಣೆ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಪ್ರಧಾನಮಂತ್ರಿಗಳು 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು. ಇವುಗಳಲ್ಲಿ ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್, ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕರ್ನಾಟಕದಲ್ಲಿ ಸಂಚಾರ ನಡೆಸುತ್ತವೆ.
ವಂದೇ ಭಾರತ್ ರೈಲು ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು ನಡುವಿನ ಸಂಚಾರಕ್ಕೆ 6 ಗಂಟೆ ತೆಗೆದುಕೊಳ್ಳಲಿದೆ. ಈ ರೈಲು ಓಮಲೂರ್, ಧರ್ಮಪುರಿ, ಹೊಸೂರು ನಿಲ್ದಾಣಗಳ ಮೂಲಕ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಸಂಚಾರ ನಡೆಸುವ ಮೊದಲ ವಂದೇ ಭಾರತ್ ರೈಲು ಇದಾಗಿದೆ.












Click it and Unblock the Notifications