ತಿರುಪತಿ ಭಕ್ತರ ಗಮನಕ್ಕೆ; ಈ ರೈಲಿನ ವೇಳಾಪಟ್ಟಿ ಬದಲಾವಣೆ

ಚಾಮರಾಜನಗರ, ಅಕ್ಟೋಬರ್ 03; ನೈಋತ್ಯ ರೈಲ್ವೆ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ದೇಶಾದ್ಯಂತ ಒಟ್ಟು 300ಕ್ಕೂ ಅಧಿಕ ರೈಲುಗಳ ವೇಳಾಪಟ್ಟಿ ಪ್ರಯಾಣಿಕರ ಬೇಡಿಕೆಯಂತೆ ಬದಲಾವಣೆಯಾಗಿದೆ.

ರೈಲು ನಂಬರ್ 16219 ಚಾಮರಾಜನಗರ-ತಿರುಪತಿ ರೈಲಿನ ವೇಳಾಪಟ್ಟಿಯನ್ನು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗಿದೆ. ಬದಲಾದ ವೇಳಾಪಟ್ಟಿ ಅನ್ವಯ 30 ನಿಮಿಷ ಮೊದಲೇ ರೈಲು ತಿರುಪತಿ ನಿಲ್ದಾಣಕ್ಕೆ ತಲುಪುತ್ತದೆ.

Chamarajanagar Tirupati Train Timings Revised Know Schedule

ಭಾರತೀಯ ರೈಲ್ವೆಯ ಹೊಸ ವೇಳಾಪಟ್ಟಿ 2023-24ರ ಆದೇಶದ ಅನ್ವಯ ಚಾಮರಾಜನಗರ-ತಿರುಪತಿ ರೈಲಿನ ವೇಳಾಪಟ್ಟಿಯೂ ಬದಲಾಗಿದೆ. ಅಕ್ಟೋಬರ್ 1ರಿಂದಲೇ ಹೊಸ ವೇಳಾಪಟ್ಟಿ ಜಾರಿಗೆ ಬಂದಿದ್ದು, ತಿರುಪತಿಗೆ ಭೇಟಿ ನೀಡುವ ಜನರು ಹೊಸ ವೇಳಾಪಟ್ಟಿ ಬಗ್ಗೆ ತಿಳಿಯುವುದು ಉತ್ತಮ.

ಹೊಸ ವೇಳಾಪಟ್ಟಿ; ಹೊಸ ವೇಳಾಪಟ್ಟಿಯ ಪ್ರಕಾರ ರೈಲು ನಂಬರ್ 16219 ಚಾಮರಾಜನರದಿಂದ 15:30ಕ್ಕೆ ಹೊರಡಲಿದೆ. ತಿರುಪತಿಗೆ 03:40ಕ್ಕೆ ತಲುಪಲಿದೆ. ಈ ಹಿಂದಿನ ವೇಳಾಪಟ್ಟಿಯಂತೆ ರೈಲು ಚಾಮರಾಜನಗರದಿಂದ 15:30ಕ್ಕೆ ಹೊರಡುತ್ತಿದ್ದ ರೈಲು ತಿರುಪತಿಗೆ 4:10ಕ್ಕೆ ತಲುಪುತ್ತಿತ್ತು.

ಚಾಮರಾಜನಗರದಿಂದ ಹೊರಡುವ ರೈಲು ನಂಜನಗೂಡು ಟೌನ್ 15:55/ 15:57, ಚಾಮರಾಜಪುರಂ 16:22/ 16:23, ಮೈಸೂರು ಜಂಕ್ಷನ್ 16:45/ 16:55, ಪಾಂಡವಪುರ 17:14/ 17:15, ಮಂಡ್ಯ 17:36/ 17:37, ಮದ್ದೂರು 17.55/ 17:56, ಚನ್ನಪಟ್ಟಣ 18:10/ 18:11, ರಾಮನಗರ 18:21/ 18:22ಕ್ಕೆ ಆಗಮನ/ ನಿರ್ಗಮನವಾಗಲಿದೆ.

ಬಿಡದಿ 18:33/ 18:34, ಕೆಂಗೇರಿ 18:51/ 18:52, ನಾಯಂಡಹಳ್ಳಿ 19:01/19:02, ಕೆಎಸ್ಆರ್ ಬೆಂಗಳೂರು 20:20/ 20.30, ಬೆಂಗಳೂರು ಕಂಟೋನ್ಮೆಂಟ್ 20:40/ 20:42, ಬೈಯಪ್ಪನಹಳ್ಳಿ 20:50/ 20:51, ಕೆಆರ್ ಪುರ 20:55/ 20:57, ವೈಟ್‌ಫೀಲ್ಡ್‌ 21:08/ 21:09, ಮಾಲೂರು 21:24/ 21:25 ಆಗಮನ/ ನಿರ್ಗಮನ.

ಬಂಗಾರಪೇಟೆ 21:49/ 21:51, ಕುಪ್ಪಂ 22:25/ 22:26, ಜೋಲಾರಪಟ್ಟಿ 00:01/ 00:05, ಅಂಬುರ್ 00:30/ 00:32, ಕಟ್ಪಾಡಿ ಜಂಕ್ಷನ್ 01:23/ 01/25, ಚಿತ್ತೂರು 01:58/ 02:00, ತಿರುಪತಿ 03:40ಗೆ ಆಗಮನವಾಗಲಿದೆ.

ರೈಲಿನ ವೇಗ ಹೆಚ್ಚಿಸಲು ಬೇಡಿಕೆ; ಚಾಮರಾಜನಗರ-ತಿರುಪತಿ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದರೂ ಸಹ ಪ್ರಯಾಣಿಕರ ರೈಲಿನ ವೇಗ ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಚಾಮರಾಜನಗರ, ಮೈಸೂ ಮತ್ತು ಬೆಂಗಳೂರು ನಡುವೆ ರೈಲಿನ ವೇಗ ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ. ಸದ್ಯ ರೈಲು ಚಾಮರಾಜನಗರ-ಬೆಂಗಳೂರು ನಡುವೆ 199 ಕಿ. ಮೀ. ಸಂಚಾರ ನಡೆಸಲು 4 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿದೆ.

ಮೈಸೂರು ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಬೆಂಗಳೂರು ನಡುವೆ ರೈಲುಗಳು 3 ಗಂಟೆ 25 ನಿಮಿಷದಲ್ಲಿ ಸಂಚಾರ ನಡೆಸುತ್ತವೆ. ಆದರೆ ಈ ರೈಲು ಮಾತ್ರ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+