Bengaluru to Mantralaya 5 Trains: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ಇರುವ 5 ರೈಲುಗಳು
ಕಲಿಯುಗದ ಕಾಮಧೇನು, ಬೇಡಿದ ವರವನ್ನು ನೀಡುವ ಕರುಣಾಮಯಿ ರಾಘವೇಂದ್ರ ಸ್ವಾಮಿಗಳನ್ನು ಮಂತ್ರಾಲಯದಲ್ಲಿ ಪೂಜಿಸಲಾಗುತ್ತದೆ. ತಂಗಾ ಭದ್ರ ತಟದಲ್ಲಿ ನಿಂತಿರುವ ರಾಯರ ಸನ್ನಿಧಾನಕ್ಕೆ ನಿತ್ಯ ನೂರಾರು ಜನ ಭಕ್ತರು ಭೇಟಿ ನೀಡುತ್ತಾರೆ.
ಬೇಸಿಗೆ ರಜೆ ಮುಗಿತಾ ಬಂತು ಅಷ್ಟರಲ್ಲಿ ಮಂತ್ರಾಲಯಕ್ಕೆ ಹೋಗಿ ಬರಬೇಕು ಅಂದುಕೊಂಡಿದ್ದರೆ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಲು ಇರುವ ಐದು ರೈಲುಗಳ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ. ಆ ಮೂಲಕ ನೀವು ಮಂತ್ರಾಲಯಕ್ಕೆ ಸುಲಭವಾಗಿ ತೆರಳಬಹುದು. ಹಾಗಾದರೆ ಆ ಐದು ರೈಲುಗಳು ಯಾವವು? ಎಲ್ಲಿಂದ ಯಾವಾಗ ಸಂಚರಿಸುತ್ತವೆ ಎಂದು ತಿಳಿಯೋಣ.

ಮೊದಲನೇ ರೈಲು:
ರಾಯರ ಮಠಕ್ಕೆ ಮಂತ್ರಾಲಯ ರೈಲ್ವೆ ಸ್ಟೇಷನ್ ತುಂಬಾ ಹತ್ತಿರವಾದ ರೈಲ್ವೇ ಸ್ಟೇಷನ್ ಆಗಿದೆ. ಮಂತ್ರಾಲಯ ರೈಲ್ವೆ ಸ್ಟೇಷನ್‌ನಿಂದ ಮಠವು 15 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳು ಇರುವ ಮೊದಲನೇ ರೈಲು 11014. ಇದು ಕೆಎಸ್ಆರ್ ಬೆಂಗಳೂರಿನಿಂದ ಸಂಜೆ 4 ಗಂಟೆಗೆ ಹೊರಡುತ್ತದೆ. ರಾತ್ರಿ 11.14ಕ್ಕೆ ತಲುಪುತ್ತದೆ. ಪ್ರಯಾಣ ದರ SL 245 ರೂಪಾಯಿ ಇದೆ.
ಎರಡನೇ ರೈಲು:
ಎರಡನೇ ರೈಲು ಯಶ್ವಂತಪುರದಿಂದ ಹೊರಡುತ್ತದೆ. ಈ ರೈಲು ಸಂಖ್ಯೆ YPR BIDR EXP(16577). ಈ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.15ಕ್ಕೆ ಹೊರಡುತ್ತದೆ. ಬೆಳಿಗ್ಗೆ 7.39ಕ್ಕೆ ಮಂತ್ರಾಲಯವನ್ನು ತಲುಪುತ್ತದೆ. ಶನಿವಾರ ಮಾತ್ರ ಈ ರೈಲು ಇರುತ್ತದೆ. ಪ್ರಯಾಣ ದರ SL: 235 ರೂಪಾಯಿ ಇದೆ.

ಮೂರನೇ ರೈಲು:
ಇನ್ನೊಂದು ಕೆಎಸ್ಆರ್ ಬೆಂಗಳೂರಿನಿಂದ ರಾತ್ರಿ 8:40 ಕ್ಕೆ ಹೊರಡುತ್ತದೆ. ಬೆಳಗ್ಗೆ 3:49ಕ್ಕೆ ಮಂತ್ರಾಲಯವನ್ನು ತಲುಪುತ್ತದೆ. ಈ ಬೆಂಗಳೂರು ಮಂತ್ರಾಲಯ ರೈಲು ಸಂಖ್ಯೆ UDYAN EXP(11302). ಇದರ ಪ್ರಯಾಣ ದರ SL:255 ರೂಪಾಯಿ ಇದೆ. ವಾರದ ಎಲ್ಲಾ ದಿನ ಈ ರೈಲು ಸಂಚರಿಸಲಿದೆ.
ನಾಲ್ಕನೇ ರೈಲು:
ಮತ್ತೊಂದು ರೈಲು ಸಂಖ್ಯೆ HAS SUR EXP(11312). ಈ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 8:50ಕ್ಕೆ ಹೊರಡುತ್ತದೆ ಬೆಳಿಗ್ಗೆ 2:34ಕ್ಕೆ ಮಂತ್ರಾಲಯ ತಲುಪುತ್ತದೆ. ಪ್ರಯಾಣ ದರ SL:256 ಇದೆ.
ಐದನೇ ರೈಲು:
ಅಲ್ಲದೇ ನೀವು ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಂದೇ ಭಾರತ್ ರೈಲಿನಲ್ಲೂ ಕೂಡ ಹೋಗಬಹುದು. ಅದರ ಬಗ್ಗೆ ನೋಡುವುದಾದರೆ. ಈ ರೈಲು ಸಂಖ್ಯೆ KLBG VANDeBHARAT(22232). ಇದು ಕೆಎಸ್ಆರ್ ಬೆಂಗಳೂರಿನಿಂದ ಮಧ್ಯಾಹ್ನ 2.40 ಗಂಟೆಗೆ ಹೊರಡುತ್ತದೆ. ರಾತ್ರಿ 8:18ಕ್ಕೆ ಮಂತ್ರಾಯಲವನ್ನು ತಲುಪುತ್ತದೆ. ಇದರ ಪ್ರಯಾಣ ದರ cc: 1175 ರೂಪಾಯಿ ಇದೆ. ನೀವೇನಾದ್ರು ಮಂತ್ರಾಲಯಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಈ ರೈಲು ಪ್ರಯಾಣ ಮಾಡಬಹುದು.












Click it and Unblock the Notifications