ಪಂಡರಾಪುರಕ್ಕೆ ಬೆಂಗಳೂರಿನಿಂದ ಮೂರು ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
ಮಹಾರಾಷ್ಟ್ರದ ಪಂಡರಾಪುರದ ವಿಠಲ್ಲನಿಗೆ ಎಲ್ಲಿಲ್ಲದ ಭಕ್ತರು. ಕರ್ನಾಟಕದಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಿಂದ ಪಂಡರಾಪುರಕ್ಕೆ ರೈಲು ಸೇವೆ ಆರಂಭಿಸುವಂತೆ ಹಲವು ದಿನಗಳಿಂದ ಒಂದು ಬೇಡಿಕೆ ಇತ್ತು. ಈ ಬೇಡಿಕೆಗೆ ಈಗ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಬೆಂಗಳೂರಿನಿಂದ ಪಂಡರಾಪುರಕ್ಕೆ ರೈಲನ್ನು ಬಿಡುವಂತೆ ಹಲವು ದಿನಗಳ ಬೇಡಿಕೆ ಆಗಿತ್ತು. ಈ ಬೇಡಿಕೆಗೆ ಈಗ ಫಲ ಸಿಕ್ಕಿದೆ. ಪಂಡರಾಪುರಲನ ವಿಠಲನ ದರ್ಶನ ಪಡೆದು ಪುನೀತರಾಗುವ ಭಕ್ತರ ಆಸೆ ಫಲಿಸಲಿದೆ. ಬೆಂಗಳೂರಿನಿಂದ ನೇರವಾಗಿ ಪಂಡರಾಪುರಕ್ಕೆ ತೆರಳಲು ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಭಕ್ತರ ಮುಖದಲ್ಲಿ ರೈಲ್ವೆ ಇಲಾಖೆ ಮಂದಹಾಸ ಮೂಡಿಸಿದೆ.

ಹಿಂದೊಮ್ಮೆ ಕರ್ನಾಟಕದ ಭಾಗವಾಗಿದ್ದ ಸೋಲ್ಲಾಪುರದ ಭೀಮಾ ನದಿಯ ದಂಡೆಯ ಮೇಲಿರುವ ಪಂಡರಾಪುರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ಕ್ಷೇತ್ರದಲ್ಲಿ ಭಕ್ತರ ವಿಠಲನ ಪರಿಪರಿಯಿಂದ ಗುಣಗಾನ ಮಾಡುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪಂಡರಾಪುರದಲ್ಲಿ ಉತ್ಸವ ನಡೆಯಲಿದೆ. ಈ ವೇಳೆ ಜನರು ತಂಡೋಪ ತಂಡವಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ. ಆಷಾಡ ಏಕಾದಶಿಯಂದು ಪಂಡರಾಪುರದಲ್ಲಿ ಉತ್ಸವ ನಡೆಯುತ್ತದೆ.
ಜುಲೈ 17 ರಂದು ಆಷಾಡ ಏಕಾದಶಿ ಇರುವುದರಿಂದ ಭಕ್ತರಿಗೆ ಅನುಕೂಲವಾಗಲೆಂದು ರೈಲ್ವೆ ಇಲಾಖೆ ಬೆಂಗಳೂರಿನಿಂದ ಪಂಡಾರಾಪುರಕ್ಕೆ ರೈಲು ಸೇವೆ ಒದಗಿಸಿದೆ. ಇದೇ ವೇಳೆ ಜಾತಿ, ಮತ, ಪಂಥಗಳ ಬೇಧವಿಲ್ಲದೇ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ವಿವಿಧ ರಾಜ್ಯಗಳಿಂದ ಲಕ್ಷಂತಾರ ಭಕ್ತರು ಇಲ್ಲಿಗೆ ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಬೆಂಗಳೂರಿನಿಂದ ಮೂರು ರೈಲುಗಳನ್ನು ಬಿಟ್ಟಿದೆ.

ಉತ್ತರ ಕರ್ನಾಟಕದ ಭಾಗದ ಜನರ ಅನುಕೂಲಕ್ಕಾಗಿ ಈಗಾಗಲೇ ರೈಲ್ವೆ ಇಲಾಖೆ ಮೈಸೂರಿನಿಂದ ಸೊಲ್ಲಾಪುರಕ್ಕೆ ಹೋಗುವ ರೈಲನ್ನು ಪಂಡರಾಪುರದ ವರೆಗೆ ವಿಸ್ತರಣೆ ಮಾಡಿದೆ. ಇದರಿಂದ ಈ ಭಾಗದ ಜನರ ಮುಖದಲ್ಲಿ ಮದಹಾಸ ಮೂಡಿಸಿತ್ತು. ಈಗ ಬೆಂಗಳೂರಿನ ವಿಠಲನ ಅಭಿಮಾನಿಗಳಿಗೂ ಸಿಹಿ ಸುದ್ದಿ ಸಿಕ್ಕಿದೆ.
ಬೆಂಗಳೂರಿನಿಂದ ಪಂಡರಾಪುರಕ್ಕೆ ರೈಲು ಸೇವೆ
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯಾ ಟರ್ಮಿನಲ್ (ಎಸ್‌ಎಂವಿಟಿ) ರೈಲು ನಿಲ್ದಾಣದಿಂದ ರೈಲು ಸಂಖ್ಯೆ 06503 ಜೂನ್ 28ಕ್ಕೆ ಸಂಜೆ 5.30ಕ್ಕೆ ಹೊರಡುವ ರೈಲು, ಪಂಡರಾಪುರವನ್ನು ಮರದಿನ ಬೆಳಗ್ಗೆ 11.35ಕ್ಕೆ ಸೇರಲಿದೆ.
ಇನ್ನು ಇದೇ ರೈಲು 06504 ಪಂಡರಾಪುರದಿಂದ ಜೂನ್ 29 ರಂದು ಸಂಜೆ 6.30ಕ್ಕೆ ಹೊರಟು, ಮರುದಿನ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣಕ್ಕೆ ಬರಲಿದೆ.
ಜೂನ್ 29 ರಂದು ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ರೈಲು ಸಂಖ್ಯೆ 06501 ಸಂಜೆ 5.30ಕ್ಕೆ ಹೊರಡುವ ರೈಲು ಜೂನ್ 30ರಂದು 11.35 ರಂದು ಪಂಡರಾಪುರಕ್ಕೆ ಸೇರಲಿದೆ.
ಇನ್ನು ಇದೇ ರೈಲು 06502 ಪಂಡರಾಪುರದಿಂದ ಜೂನ್ 30 ರಂದು ಸಂಜೆ 6.30ಕ್ಕೆ ಹೊರಟು, ಮರುದಿನ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣಕ್ಕೆ ಬರಲಿದೆ.
ಜೂನ್ 30 ರಂದು ಪಂಡರಾಪುರಕ್ಕೆ ಮತ್ತೊಂದು ರೈಲು ವ್ಯವಸ್ಥೆ ಇದೆ. ಎಸ್‌ಎಂವಿಟಿ ನಿಲ್ದಾಣದಿಂದ ರಾತ್ರಿ 10ಕ್ಕೆ ಹೊರಡುವ 06505 ರೈಲು ಮರು ದಿನ ಸಂಜೆ 4.30ಕ್ಕೆ ತಲುಪಲಿದೆ.
ಇನ್ನು ಇದೇ ರೈಲು 06506 ಪಂಡರಾಪುರದಿಂದ ಜುಲೈ 1 ರಂದು ಸಂಜೆ 6.30ಕ್ಕೆ ಹೊರಟು, ಮರುದಿನ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣಕ್ಕೆ ಬರಲಿದೆ.











Click it and Unblock the Notifications