Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರೆ ಗಮನಿಸಿ... ನಿಮಗಿದೆ ಸಿಹಿಸುದ್ದಿ!
ಬೆಂಗಳೂರು, ಜೂನ್. 25: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುವುದು ಸಕತ್ ಖುಷಿ ಕೊಟ್ಟರು ಕೂಡ ಪ್ರಯಾಣಿಕರಿಗೆ ದೊಡ್ಡ ತೊಂದರೆ ಎಂದರೆ ಈ ರಸ್ತೆಯಲ್ಲಿ ನಡೆಯುವ ಅಪಘಾತಗಳು. ಪ್ರತಿ ದಿನ ಒಂದಲ್ಲ ಒಂದು ಅಪಘಾತದ ವರದಿ ಆಗುತ್ತಲೆ ಇದೆ. ಆದರೆ, ಇನ್ನು ಮುಂದೆ ಇಂತಹ ಘಟನೆಗಳು ಕಡಿಮೆಯಾಗಲಿವೆ.
ಹೌದು... ಇಡೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಜುಲೈ 1 ರಿಂದ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅನ್ನು ಹೊಂದಲಿದೆ. ಹೀಗಾಗಿ ಹೆದ್ದಾರಿ ಸೇರಿದಂತೆ ಇಡೀ ಬೆಂಗಳೂರು-ಮೈಸೂರು ರಸ್ತೆ ಜಾಲ, ಮೈಸೂರು ಜಿಲ್ಲೆ ಮತ್ತು ನಗರವು ಸಂಪೂರ್ಣ ಕ್ರಿಯಾತ್ಮಕ ಐಟಿಎಂಎಸ್ ಕಾರಿಡಾರ್ ಆಗಲಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಡಿಮೆಯಾಗಲಿದೆ ಅಪಘಾತ!
ಜುಲೈ 1 ರಿಂದ ಇಡೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಲಾಗುವುದು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಐಟಿಎಂಎಸ್ ಅಥವಾ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಡಿಸೆಂಬರ್ 2022 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ITMS 250 ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳು ಮತ್ತು 80 ಕೆಂಪು ದೀಪ ಉಲ್ಲಂಘನೆ ಪತ್ತೆ (RLVD) ಕ್ಯಾಮೆರಾಗಳನ್ನು ನಗರದ 50 ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ.
ಈಗ ಇದನ್ನು ಮೈಸೂರಿಗೆ ವಿಸ್ತರಿಸಲಾಗಿದ್ದು, ಈ ವಿಸ್ತರಣೆಗೆ ಅಂದಾಜು 8.5 ಕೋಟಿ ರೂಪಾಯಿ ವೆಚ್ಚವಾಗಿದ್ದು, ಮೈಸೂರು ನಗರಕ್ಕೆ 4 ಕೋಟಿ ರೂಪಾಯಿ ಮತ್ತು ಜಿಲ್ಲೆಗೆ 4.5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು, ಎಚ್‌ಡಿ ಕೋಟೆ, ನಂಜನಗೂಡು ಮತ್ತು ಟಿ ನರಸೀಪುರದಂತಹ ಪ್ರದೇಶಗಳಲ್ಲಿ ಹೊಸದಾಗಿ ಅಳವಡಿಸಲಾಗಿರುವ ಈ ಎಎನ್‌ಪಿಆರ್ ಕ್ಯಾಮೆರಾಗಳ ಮೂಲಕ ಜುಲೈ 1 ರಿಂದ ಚಲನ್‌ಗಳ ಮೂಲಕ ಸಂಚಾರ ಉಲ್ಲಂಘನೆಗಳನ್ನು ಜಾರಿಗೊಳಿಸುವುದು ಪ್ರಾರಂಭವಾಗುತ್ತದೆ.

ತುಮಕೂರು, ಕನಕಪುರ, ಹೊಸೂರು ರಸ್ತೆಗೂ ಬರಲಿದೆ ಹೊಸ ನಿಯಮ!
ಮುಂದಿನ ಯೋಜನೆಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಕ್ಯಾಮೆರಾಗಳನ್ನು ಬೆಂಗಳೂರು ಸಮೀಪದ ತಾಲ್ಲೂಕುಗಳು ಮತ್ತು ಜಿಲ್ಲೆಗಳಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಾದ ತುಮಕೂರು ರಸ್ತೆ (NH 4), ಕನಕಪುರ ರಸ್ತೆ (NH 948) ಕೊಳ್ಳೇಗಾಲದವರೆಗೆ ಮತ್ತು ಹೊಸೂರು ರಸ್ತೆ (NH 44) ಗಳಲ್ಲಿ ಅಳವಡಿಸಲಾಗುತ್ತದೆ.
ಹೆಚ್ಚುವರಿಯಾಗಿ, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಜೊತೆ ಜೊತೆಗೆ ಟ್ರಾಫಿಕ್ ಅಪ್‌ಡೇಟ್ ಮತ್ತು ರಸ್ತೆ ಪರಿಸ್ಥಿತಿಗಳನ್ನು ಪ್ರಸಾರ ಮಾಡಲು ಈ ಮಾರ್ಗಗಳಲ್ಲಿ ವೇರಿಯಬಲ್ ಮೆಸೇಜಿಂಗ್ ಚಿಹ್ನೆಗಳನ್ನು (VMS) ಪರಿಚಯಿಸಲು ಚಿಂತಿಸಲಾಗುತ್ತಿದೆ. ಇವುಗಳಿಂದ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಚಾಲಕರಿಗೆ ಅನುಕೂಲವಾಗಲಿದೆ.
ಇದರ ಜೊತೆ ಜೊತೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚುವರಿ ಕ್ಯಾಮೆರಾಗಳು ಮತ್ತು ವಿಎಂಎಸ್ ಬೋರ್ಡ್‌ಗಳನ್ನು ಅಳವಡಿಸಲು ಚಿಂತಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಟೆಂಡರ್‌ಗಳು ಹೊರಬೀಳುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು ಹೊರತುಪಡಿಸಿ ಕರ್ನಾಟಕದಾದ್ಯಂತ ರಸ್ತೆ ಸುರಕ್ಷತೆಯಲ್ಲಿ ಮತ್ತಷ್ಟು ಸುಧಾರಣೆಗಳು, ಸೈನ್‌ಬೋರ್ಡ್‌ಗಳು, ಬ್ಲಿಂಕರ್‌ಗಳು, ಕುಡಿದು ವಾಹನ ಚಲಾಯಿಸುವುದನ್ನು ಪರಿಶೀಲಿಸಲು 800 ಆಲ್ಕೋಮೀಟರ್‌ಗಳು ಮತ್ತು 155 ಲೇಸರ್ ಸ್ಪೀಡ್ ಗನ್‌ಗಳನ್ನು ಅಳವಡಿಸಲಾಗಿದೆ. ಟೋಲ್ ಗೇಟ್‌ಗಳಲ್ಲಿ ಚಲನ್ ವ್ಯವಸ್ಥೆಯನ್ನು ಫಾಸ್ಟ್‌ಟ್ಯಾಗ್‌ನೊಂದಿಗೆ ಸೇರಿಸುವ ಫ್ಲ್ಯಾನ್ ಕೂಡ ನಡೆಯುತ್ತಿದೆ.












Click it and Unblock the Notifications