Vande Bharat Express: ಬೆಂಗಳೂರು-ಮಧುರೈ ಪ್ರಯಾಣಿಕರಿಗೆ ಸಿಹಿಸುದ್ದಿ; ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆರಂಭ

ಬೆಂಗಳೂರು, ಜೂನ್. 27: ಜೂನ್ 20 ರಂದು ಆರಂಭವಾಗಬೇಕಿದ್ದ ಬೆಂಗಳೂರು ಮತ್ತು ಮಧುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ಆರಂಭವಾಗಿದೆ. ಬೆಂಗಳೂರಿನ ಏಳನೇ ವಂದೇ ಭಾರತ್ ರೈಲು ಇದಾಗಿದ್ದು, ಬೇಡಿಕೆಯ ಆಧಾರದ ಮೇಲೆ ಸೀಮಿತ ಅವಧಿಗೆ ವಿಶೇಷ ರೈಲು ಸೇವೆಯಾಗಿ ಕಾರ್ಯಾಚರನೆ ನಡೆಸಲಿದೆ.

ಜುಲೈ ಆರಂಭದಲ್ಲಿ ರಾಜ್ಯಕ್ಕೆ ಏಳನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಸಿಗಲಿದೆ. ಜೂನ್ ಆರಂಭದಲ್ಲಿ, ದಕ್ಷಿಣ ರೈಲ್ವೆ (SR) ಎಸ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಮತ್ತು ಮಧುರೈ ನಡುವೆ ಈ ಪ್ರೀಮಿಯಂ ರೈಲು ಸೇವೆಯನ್ನು ಪರಿಚಯಿಸುವುದಾಗಿ ಘೋಷಿಸಿತು. ಇದಾದ ಬೆನ್ನಲ್ಲೆ ಯಶಸ್ವಿ ಪ್ರಯೋಗವನ್ನು ನಡೆಸಿತು.

Bengaluru-Madurai Vande Bharat Express to start in July

ಮುಂದಿನ ತಿಂಗಳಿಂದ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್

ಜೂನ್ 20 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿ- ಮಧುರೈ ನಡುವೆ ಸಂಚರಿಸುವ ವಂದೇ ಭಾರತದ ರೈಲಿಗೆ ಚಾಲನೆ ನೀಡಬೇಕಿತ್ತು. ಆದರೆ, ಜೂನ್ 17 ರಂದು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದ ಕಾರಣ ಈ ಕಾರ್ಯಕ್ರಮ ಮುಂದೂಡಲಾಗಿದೆ. ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ (SWR) ಯ ಅಧಿಕಾರಿಗಳು ರೈಲು ಯಾವಾಗ ಎಂಬ ಅಧಿಕೃತ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ.

ಸದ್ಯಕ್ಕೆ, ರೈಲ್ವೇ ಮಂಡಳಿಯು ತನ್ನ ನಿಯಮಿತ ಕಾರ್ಯಾಚರಣೆಯನ್ನು ಅನುಮೋದಿಸುವವರೆಗೆ ರೈಲನ್ನು ವಿಶೇಷ ಸೇವೆಯಾಗಿ ಓಡಿಸಲು ಎಸ್ಆರ್ ಯೋಜಿಸಿದೆ ಎಂದು ಮಧುರೈ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಿರ್ದಿಷ್ಟ ಸಂಖ್ಯೆಯ ಟ್ರಿಪ್‌ಗಳೊಂದಿಗೆ ವಿಶೇಷ ರೈಲು 14 ದಿನಗಳಲ್ಲಿ ಪ್ರಾರಂಭವಾಗಬಹುದು. ಮಧುರೈ ವಿಭಾಗವು ಈಗಾಗಲೇ ರೇಕ್ (ಟ್ರೈನ್‌ಸೆಟ್) ಪಡೆದಿದೆ" ಎಂದು ಅಧಿಕಾರಿ ಡೆಕ್ಕನ್ ಹೆರಾಲ್ಡ್‌ಗೆ ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ರೈಲ್ವೆಯು ವಿಶಿಷ್ಟವಾಗಿ ವಿಶೇಷ ರೈಲುಗಳನ್ನು ನಿರ್ವಹಿಸುತ್ತದೆ. ಆದರೆ, ವಂದೇ ಭಾರತ್ ಸೇವೆಯನ್ನು ವಿಶೇಷ ರೈಲಿನಂತೆ ನಡೆಸುವುದು ಅಪರೂಪ. ಪ್ರಸ್ತುತ, ಜೂನ್ ಆರಂಭದಲ್ಲಿ ಘೋಷಿಸಲಾದ ಚೆನ್ನೈ ಎಗ್ಮೋರ್-ನಾಗರ್ಕೋಯಿಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು-ಮಧುರೈ ವಂದೇ ಭಾರತ್ ರೈಲನ್ನು ಮಧುರೈ ಜಂಕ್ಷನ್‌ನಲ್ಲಿ ನಿರ್ವಹಿಸಲಾಗುವುದು. ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ ನಂತರ ಅದರ ಕಾರ್ಯಾಚರಣೆಯ ವೇಗ ಮತ್ತು ದರಗಳು ತಿಳಿಯಲ್ಪಡುತ್ತವೆ ಎಂದು ಅಧಿಕಾರಿ ಸೇರಿಸಲಾಗಿದೆ. ಎರಡು ನಗರಗಳ ನಡುವಿನ ವೇಗದ ರೈಲು ಎಂದು ನಿರೀಕ್ಷಿಸಲಾಗಿದೆ. ವಂದೇ ಭಾರತ್ ಎಂಟು ಗಂಟೆಗಳಲ್ಲಿ 430 ಕಿಮೀ ದೂರವನ್ನು ಕ್ರಮಿಸುತ್ತದೆ. ಪ್ರಸ್ತುತ ಅತಿ ವೇಗದ ರೈಲು ಒಂಬತ್ತೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Bengaluru-Madurai Vande Bharat Express to start in July

ಬೆಂಗಳೂರು ಈಗಾಗಲೇ ಚೆನ್ನೈ/ಮೈಸೂರು, ಧಾರವಾಡ, ಕಲಬುರಗಿ, ಹೈದರಾಬಾದ್ ಮತ್ತು ಕೊಯಮತ್ತೂರುಗಳಿಗೆ ವಂದೇ ಭಾರತ್ ರೈಲುಗಳನ್ನು ಹೊಂದಿದೆ. ಚೆನ್ನೈ/ಮೈಸೂರಿಗೆ ಎರಡು ವಂದೇ ಭಾರತ್ ರೈಲುಗಳಿವೆ. ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ವಂದೇ ಭಾರತ್ ಕೂಡ ಪ್ರಸ್ತಾಪವಾಗಿದೆ.

ವಂದೇ ಭಾರತ್ ರೈಲಿನ ಸಮಯಗಳು, ನಿಲುಗಡೆಗಳು ಮತ್ತು ದರಗಳು

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಮಧುರೈನಿಂದ ಬೆಳಗ್ಗೆ 5.15 ಕ್ಕೆ ಹೊರಟು ಮಧ್ಯಾಹ್ನ 1.15 ಕ್ಕೆ ಎಸ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT ) ಬೆಂಗಳೂರು ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಎಸ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಮಧ್ಯಾಹ್ನ 1.45 ಕ್ಕೆ ಹೊರಟು ರಾತ್ರಿ 10.25 ಕ್ಕೆ ಮಧುರೈ ತಲುಪುತ್ತದೆ.

ದಿಂಡಿಗಲ್, ತಿರುಚಿರಾಪಳ್ಳಿ, ಕರೂರ್ ಮತ್ತು ಸೇಲಂಗಳಲ್ಲಿ ನಿಲುಗಡೆಯಾಗಲಿದೆ. ನಾಮಕ್ಕಲ್ ಮತ್ತು ಕೆಆರ್ ಪುರಂನಲ್ಲಿ ರೈಲು ನಿಲುಗಡೆಯಾಗಬಹುದು, ಆದರೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಚೇರ್-ಕಾರ್ ದರವು 1,200 ರಿಂದ 1,300 ರೂಪಾಯಿ ಆಗಿರಬಹುದು. ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರು 1,800 ರಿಂದ 2,000 ರೂಪಾಯಿ ಪಾವತಿಸಬೇಕಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+