ಮಳೆಗಾಲದಲ್ಲಿ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ: ಕಣ್ಣಿಗೆ ಹಬ್ಬ ಗ್ಯಾರಂಟಿ
ರಾಜ್ಯದಲ್ಲಿ ಈಗಾಗಲೇ ಮಳೆ ತನ್ನ ನರ್ತನ ಮುಂದುವರೆಸಿದೆ. ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕರ ಮಳೆ ಆಗುತ್ತಿದೆ. ಈ ಮಳೆ ಕಾಲದಲ್ಲಿ ಮನೆ ಬಿಟ್ಟು ಹೊರ ಹೋಗಲು ಕೊಂಚ ಭಯವಾಗುತ್ತದೆ. ಏಕೆಂದರೆ ಎಲ್ಲಿ ನೋಡಿದರೆ ನೀರು, ಕೆಸರು, ಜನರಿಗೆ ಕಿರಿಕಿರಿ ಮಾಡುತ್ತದೆ. ಆದರೆ ಇದೇ ಸಮಯದಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಸುವರ್ಣ ಅವಕಾಶ.
ಕಾಂಕ್ರೆಟ್ ನಗರಗಳಲ್ಲಿ ಧೂಳು, ಶಬ್ದ ಮಾಲಿನ್ಯದಿಂದ ಕಂಗೆಟ್ಟಿದ್ದ ಜನರು ನಿಶ್ಚಿತವಾಗಿ ರಾಜ್ಯದಲ್ಲಿನ ಈ ಸ್ಥಳಗಳಿಗೆ ಭೇಟಿ ನೀಡಿದರೆ, ಮನಸ್ಸು ಉಲ್ಲಾಸದಿಂದ ಕೂಡುವುದು ಫಿಕ್ಸ್.. ಈ ಸ್ಥಳಗಳು ನಿಮ್ಮ ಜೀವನ ಉತ್ಸಾಹವನ್ನು ಇಮ್ಮಡಿ ಮಾಡುವುದಂತೂ ಗ್ಯಾರಂಟಿ. ಮಳೆಗಾಲದಲ್ಲಿ ನೋಡ ಬಹುದಾದ ರಾಜ್ಯದ ಟಾಪ್ ಸ್ಥಳಗಳ ಪಟ್ಟಿ ಇಲ್ಲಿದೆ.

ಜೋಗ ಫಾಲ್ಸ್
ಕರ್ನಾಟಕದ ರಮಣೀಯ ತಾಣಗಳಲ್ಲಿ ಜೋಗ ಫಾಲ್ಸ್‌ಗೆ ಮೊದಲ ಸ್ಥಾನ. ಮಳೆಗಾಲದ ಸಮಯದಲ್ಲಿ ಈ ನಯನ ಮನೋಹರ ಫಾಲ್ಸ್ ನೋಡುವುದು ಕಣ್ಣಿಗೆ ಹಬ್ಬ.. ಭಾರತದಲ್ಲಿ ಅತಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಎಂಬ ಹೆಗ್ಗಳಿಕೆಗೆ ಕರ್ನಾಟಕದ ಈ ಫಾಲ್ಸ್‌ಗೆ ಸಲ್ಲುತ್ತದೆ. ಶರಾವತಿ ನದಿಯ ನೀರು ಸುಮಾರು 830 ಅಡಿಯಿಂದ ಧುಮ್ಮುಕ್ಕುತ್ತದೆ ಈ ದೃಶ್ಯವನ್ನು ನೋಡಲು ಮಳೆಗಾಲ ಬೆಸ್ಟ್ ಟೈಮ್.
ರಾಜಾ, ರಾಣಿ, ರೋರರ್, ರಾಕೇಟ್ ಈ ಎಲ್ಲ ಜಲಧಾರೆಗಳನ್ನು ನೋಡಲು ಲಕ್ಷಾಂತರ ಜನ ಜೋಗಕ್ಕೆ ಬರುತ್ತಾರೆ. ಈ ಸುಂದರ ದೃಶ್ಯವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕೆಂದು ಅದಾಗಲೇ ರಾಜಕುಮಾರ್ ಹೇಳಿದ್ದಾರೆ.

ಆಗುಂಬೆ
ಕರ್ನಾಟಕದ ಚಿರಾ ಪುಂಜಿಯಂದೆ ಖ್ಯಾತಿ ಪಡೆದಿರುವ ಆಗುಂಬೆಯ ಸೌಂದರ್ಯವನ್ನು ಮಳೆ ಗಾಲದಲ್ಲಿ ನೋಡುವುದೇ ಹಬ್ಬ. ಈ ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಮಾಲ್ಗುಡಿ ಡೇಸ್ ಧಾರವಾಹಿಯ ಕಥೆಗಳು ಕಣ್ಣ ಮುಂದೆ ಬರುತ್ತವೆ. ಈ ಊರಿನಲ್ಲಿ ಸೂರ್ಯಾಸ್ಥವನ್ನು ನೋಡುವುದೇ ಚೆಂದ.. ಕಾನನದ ನಡುವೆ ಮಳೆ ನೋಡಲು ಅದ್ಭುತ. ಇಲ್ಲಿನ ಬರ್ಕಾನ ಜಲಪಾತ (Barkana Falls), ಗೋಪಾಲಕೃಷ್ಣ ದೇವಸ್ಥಾನ (Gopalakrishna Temple), ಅಬ್ಬಿ ಜಲಪಾತ (Abbi Falls), ಸ್ಥಳಗಳನ್ನು ನೋಡಬಹುದಾಗಿದೆ.

ಶಿವನಸಮುದ್ರ
ರಾಜ್ಯದ ಬಹು ಜನರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿರುವುದು ಶಿವನಸಮುದ್ರ ಜಲಪಾತ. ಇಲ್ಲಿ ಕನ್ನಡ ನಾಡಿ ಜೀವ ನದಿ ಕಾವೇರಿ ಮೈದುಂಬಿ ಹರಿಯುತ್ತಾರೆ. ಇಲ್ಲಿನ ಎರಡು ಫಾಲ್ಸ್‌ಗಳನ್ನು ಒಟ್ಟಾಗಿ ಶಿವನಮುದ್ರ ಎನ್ನುತ್ತಾರೆ. ಗಗನಚುಕ್ಕಿ(Gaganachikki) ಮತ್ತು ಬರಚುಕ್ಕಿ(Barachukki) ಫಾಲ್ಸ್ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತವೆ.
ನೀರು ದ್ವೀಪದ ಇಕ್ಕೆಲಗಳ ಪ್ರಪಾತಗಳ ಮೂಲಕ ಜಲಪಾತದಂತೆ ಕಾಣುತ್ತವೆ. ಅಲ್ಲದೆ ಇಲ್ಲಿಂದು ಇವುಗಳ ಒಡೆದು, ಹರಿಯುತ್ತವೆ. ಈ ಎರಡೂ ಜಲಪಾತಗಳು ಪ್ರತ್ಯೇಕ ಜಲಪಾತಗಳಾಗಿವೆ. ಈ ಎರಡೂ ಜಲಾಪತಗಳನ್ನು ಕೂಡಿಸಿ ಶಿವನಸಮುದ್ರ ಜಲಪಾತಗಳೆ೦ದು ಕರೆಯಲಾಗುತ್ತದೆ.

ಮಡಿಕೇರಿ
ಪಶ್ಚಿಮ ಘಟ್ಟಗಳಿಂದ ಹಲವು ಭಾಗಗಳಿಂದ ಆವರಿಸಿಕೊಂಡಿರುವ ಮಡಿಕೇರಿ ಜಿಲ್ಲೆ ಮಳೆಗಾಲದಲ್ಲಿ ಹಚ್ಚು ಹಸಿರಿನಿಂದ ಕಾಣುತ್ತದೆ. ಈ ಭಾಗದಲ್ಲಿ ಒಮ್ಮೆ ಓಡಾಡಿದರೆ ಪ್ರಕೃತಿಗೆ ಹಸಿರು ಸೀರಿ ಉಡಿಸಿದಂತೆ ಭಾಸವಾಗುತ್ತದೆ. ಅಬ್ಬಾ ರಮಣೀಯ ದೃಶ್ಯವನ್ನು ನೋಡಲು ಜನರು ಇಲ್ಲಿಗೆ ಬರುತ್ತಲೇ ಇರುತ್ತಾರೆ. ರಾಜ್ಯ ಹಾಗೂ ಬೇರೆ ರಾಜ್ಯಗಳ ಪ್ರವಾಸಿಗರು ಈ ಸ್ಥಳವನ್ನು ನೋಡಲು ಬರುತ್ತಾರೆ.
ಸಕಲೇಶಪುರ
ಬೆಂಗಳೂರಿನಿಂದ 220 ಕಿಲೋಮೀಟರ್ ದೂರದಲ್ಲಿ ಸಕಲೇಶಪುರ ಎಂಬ ಸಣ್ಣ, ಸುಂದರವಾದ ಪಟ್ಟಣವಿದೆ. ಇದು ಪಶ್ಚಿಮ ಘಟ್ಟಗಳ ತಳದಲ್ಲಿರುವ ಮಲೆನಾಡು ಪ್ರದೇಶ. ಏಲಕ್ಕಿ, ಕಾಫಿ ಮತ್ತು ಕರಿಮೆಣಸು ಫಾರ್ಮ್‌ಗಳು ಇಲ್ಲಿ ಕಣ್ಣು ಹಾಯಿಸದಲೆಲ್ಲಾ ಕಾಣಿಸುತ್ತದೆ. ಈ ಸ್ಥಳವು ಟ್ರೇಕಿಂಗ್ ಪ್ರೀಯರಿಗೆ ಹೇಳಿ ಮಾಡಿದ ಸ್ಥಳ. ಭವ್ಯವಾದ ದೇವಾಲಯಗಳು, ಭವ್ಯವಾದ ಕೋಟೆಗಳು, ಬೆರಗುಗೊಳಿಸುವ ಜಲಪಾತಗಳು, ಪರ್ವತಾರೋಹಣಗಳು ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಗೋಕರ್ಣ
ರಾಜ್ಯದ ಜನರಲ್ಲಿ ಹಲವರಿಗೆ ಮಳೆಯ ಸಮಯದಲ್ಲಿ ಸಮುದ್ರದ ದೃಶ್ಯವನ್ನು ನೋಡುವ ಆಸೆ ಇದ್ದೇ ಇರುತ್ತದೆ. ಅಂತಹವರ ಫೆವರೀಟ್ ಸ್ಪಾಟ್ ಗೋಕರ್ಣ. ಈ ಸ್ಥಳದಲ್ಲಿ ಮಹಾಬಲೇಶ್ವರ್ ದೇವಸ್ಥಾನವಿದೆ. ದೇವಸ್ಥಾನದಿಂದ ಕೊಂಚ ದೂರದಲ್ಲಿ ಸಮುದ್ರದ ಅಲೆಗಳು ಜನರನ್ನು ಸೆಳೆಯುತ್ತದೆ. ಒಂದೊಮ್ಮೆ ನೀವು ಮಳೆಗಾಲದಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದರೆ, ನಿರ್ವಾಣ ಬೀಚ್(Nirvana Beach), ಭದ್ರಕಾಳಿ ದೇವಸ್ಥಾನ,(Bhadrakali Temple)ಓಂ ಬೀಚ್(Om Beach), ಪಾರಡೈಸ್ ಬೀಚ್‌ಗಳ (Paradise Beach) ಸೌಂದರ್ಯವನ್ನು ಸಹ ಕಣ್ಣು ತುಂಬಿಕೊಳ್ಳಬಹುದು.












Click it and Unblock the Notifications