ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಂಧ : ಆಡು ಆಟ ಆಡು...

By Staff
|
Google Oneindia Kannada News


ಇದು ಒಂದು ಪದಬಂಧ. ನಮಗೆ ಕರ್ನಾಟಕ ಎಷ್ಟು ಗೊತ್ತು? ಏನು ಗೊತ್ತು? ಎಂಬ ಆತ್ಮಾವಲೋಕನಕ್ಕೆ ಇದು ಸೂಕ್ತ ವೇದಿಕೆ. ರಾಜ್ಯದ ಐವತ್ತು ಪ್ರವಾಸಿ ಸ್ಥಳಗಳನ್ನು ಪದಬಂಧ ಒಳಗೊಂಡಿದೆ. ಪದಬಂಧ ಬಿಡಿಸುವ ಪ್ರಯತ್ನದಲ್ಲಿ ಈ ಸ್ಥಳಗಳನ್ನು ನೆನಪು ಮಾಡಿಕೊಳ್ಳಿ. ಸುವರ್ಣ ಕರ್ನಾಟಕದ ಅಂಗವಾಗಿ ನಮ್ಮ ಈ ಕಿರು ಪ್ರಯತ್ನವನ್ನು ಒಪ್ಪಿಸಿಕೊಳ್ಳಿ.



ಎಡದಿಂದ-ಬಲಕ್ಕೆ

1. ಕರ್ನಾಟಕವನ್ನು ಕುರಿತು ಹೀಗೆ ಒಂದು ಹಾಡಿದೆ ‘ನಾವಿರುವಾ ತಾಣವೇ ..’ (5)
3. ಬೇಲೂರಿನಲ್ಲಿದ್ದಂತೆ ಹೊಯ್ಸಳರ ಕಾಲದಲ್ಲಿ ಕಟ್ಟಿದ ಹಲವಾರು ದೇವಸ್ಥಾನಗಳು ಇಲ್ಲಿಯೂ ಇವೆ (4)
7. ಸಾವಿರ ಕಂಬದ ಬಸದಿ ಇತ್ಯಾದಿ ಹೊಂದಿರುವ ಇದು ‘ಜೈನರ ಕಾಶಿ’ ಎಂದೇ ಪ್ರಸಿದ್ದಿ (4)
8. ‘ಕನ್ನಡದ ಕಬೀರ್‌’ ಶರೀಫರ ಜನ್ಮಸ್ಥಳ (4)
10. ಈ ಊರಿನ ರಸ್ತೆಯ ಒಂದೆಡೆ ಅರಬ್ಬಿ ಸಮುದ್ರ ಮತ್ತೊಂದೆಡೆ ಸೌಪರ್ಣಿಕಾ ನದಿ (4)
12. ಅತ್ಯಂತ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡ ‘ಶೋಲೆ’ ಚಿತ್ರೀಕರಿಸಿದ್ದು ಇಲ್ಲಿ (5)
13. ಮದ್ದೂರಿನ ಬಳಿ ಇರುವ ಈ ಊರು ಕೊಕ್ಕರೆ ಹಾಗೂ ಕಬ್ಬಿನ ಹೊಲಕ್ಕೆ ಹೆಸರುವಾಸಿ (6)
15. ಚೆಲುವ ನಾರಾಯಣ ಸ್ವಾಮಿ ನೆಲೆಸಿರುವುದಿಲ್ಲಿ (4)
17. ಮಹಿಷನ ಕೊಂದ ತಾಯಿ ಇಲ್ಲಿಯೇ ನೆಲೆಸಿರುವುದು (5)
19. ನಾಟಕದ ಕಂಪನಿಯ ವೀರಣ್ಣನವರ ಹುಟ್ಟೂರು (2)
22. ಹಕ್ಕಿಗಳನ್ನು ನೋಡಬೇಕೇ? ಈ ತಿಟ್ಟಿಗೆ ಬನ್ನಿ (5)
23. ಶ್ರೀಕಂಠೇಶ್ವರನ ದೇವಸ್ಥಾನಕ್ಕಾಗಿ ಈ ಊರು ಬಹಳ ಪ್ರಸಿದ್ದಿ (5)
24. ಮಲ್ಲಿಗೆ, ವಿಳೆದೆಲೆ, ಅರಮನೆ, ದಸರ ಹೀಗೆ ಎಲ್ಲವೂ ಈ ಊರಿನ ವಿಶೇಷ (3)
25. ‘ನಮ್ಮೂರ ಮಂದಾರ ಹೂವೆ’ ಚಿತ್ರದ ಯಶಸ್ಸಿಗೆ ಈ ತಾಣದ ಪಾಲೂ ಇದೆ (2)
26. ಜೋಗದಂತೆ ಇದೂ ಒಂದು ‘ಅಬ್ಬಾ’ ಎನ್ನುವಂತಹ ಜಲಪಾತ (4)
28. ಉತ್ತರಕನ್ನಡದ ಈ ಊರು ಮಾರಿಕಾಂಬ ದೇವಸ್ಥಾನ ಹಾಗೂ ಸುಪಾರಿಗೆ ಹೆಸರುವಾಸಿ (3)
29. ಚಿಕ್ಕಮಗಳೂರ ಬಳಿ ಇರುವ ಈ ಊರಿನಲ್ಲಿ ಮಧ್ವಾಚಾರ್ಯರ ಬಂಡೆ ಇದೆ (3)
30. ಅರಬ್ಬಿ ಸಮುದ್ರದ ದಡದಲ್ಲಿರುವ ಭಟ್ಕಳದಲ್ಲಿನ ಈ ಊರಿನಲ್ಲಿ ಏಷ್ಯಾದಲ್ಲೇ ಎತ್ತರವಿರುವ ಶಿವ ವಿಗ್ರಹವಿರುವ ದೇವಸ್ಥಾನವಿದೆ (5)
32. ಹೆಸರಾಂತ ಅಭಯಾರಣ್ಯ. ಇದೇ ಹೆಸರಿನ ಚಲನಚಿತ್ರವೂ ಬಂದಿತ್ತು (5)
35. ರಂಗಯ್ಯನ ಊರು. ಈ ಹೆಸರಿನಿಂದ ಆರಂಭವಾಗುವ ನೀತಿಯುಕ್ತ ಹಾಡು ‘ಶರಪಂಜರ’ದಲ್ಲಿದೆ (4)
36. ಚಿಕ್ಕಮಗಳೂರು ಬಳಿ ಇರುವ ಈ ಊರಿನಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿದ್ದಾಳೆ (4)
37. ಕರ್ನಾಟಕದ ಪ್ರಮುಖ ನದಿಯ ಉಗಮ ಸ್ಥಾನ (5)
39. ಮೂರು ಸಕ್ಕರೆ ಕಾರ್ಖಾನೆ ಇರುವ ಊರು (2)
40. ಕನ್ನಡ ಕುಲಪುರೋಹಿತರಾದ ವೆಂಕಟರಾಯರು ಈ ಊರಿನವರು (3)
41. ಒಂದೇ ಕಲ್ಲಿನಲ್ಲಿ ಕೆತ್ತಿರುವ ಎತ್ತರದ ಬಾಹುಬಲಿಯ ವಿಗ್ರಹ ಇರುವು ಊರು (7)

ಮೇಲಿಂದ-ಕೆಳಕ್ಕೆ

2. ಅಭಯಾರಣ್ಯಗಳಲ್ಲಿ ಒಂದು (4)
4. ಬಹಮನಿ ಸುಲ್ತಾನರ ಕಾಲದಲ್ಲಿ ಹೈದರಾಬಾದಿನಲ್ಲಿದ್ದ ಈ ಜಿಲ್ಲೆ ನಂತರ ಕರ್ನಾಟಕಕ್ಕೆ ಸೇರಿತು (3)
5. ಆದಿ ಶಂಕರಾಚಾರ್ಯರು ತಪಸ್ಸು ಮಾಡಿದ ಈ ಬೆಟ್ಟ ಟ್ರೆಕ್ಕಿಂಗಿಗೆ ಬಹಳ ಸೂಕ್ತ (4)
6. ಶ್ರೀ ಮಂಜುನಾಥೇಶ್ವರ ನೆಲೆಸಿರುವ ಈ ಊರು ಜಗತ್‌ ಪ್ರಸಿದ್ದಿ ಹೊಂದಿದೆ (4)
9. ಗೋಲಗುಮ್ಮಟ, ಜುಮ್ಮಾ-ಮಸೀದಿ ಎಂದೊಡನೆ ನೆನಪಿಗೆ ಬರುವ ಸ್ಥಳ (4)
10. ಈ ಊರಿನ ‘ವಡೆ’ಗೆ ಬಹಳ ಹೆಸರುವಾಸಿ (3)
11. ಚಿಕ್ಕಮಗಳೂರಿನಲ್ಲಿರುವ ಈ ಗುಂಡಿ ಕೃಷ್ಣರಾಜ ಒಡೆಯರ್‌ ಅವರ ಬೇಸಿಗೆಯ ತಂಗುದಾಣವಾಗಿತ್ತು (5)
13. ಕಿತ್ತಳೆ, ಕಾರಿಯಪ್ಪ, ತಿಮ್ಮಯ್ಯ ಎಂದ ಕೂಡಲೆ ಈ ಜಿಲ್ಲೆ ನೆನಪಿಗೆ ಬರುತ್ತದೆ (3)
14. ಮಹಾಜನ್‌ ವರದಿ ಈ ಜಿಲ್ಲೆಯ ಬಗೆಗಿನ ವಿವಾದ ಕುರಿತು (4)
15. ಆಡಿಗೂ ಇದಕ್ಕು ಏನು ಸಂಬಂಧವೋ ಗೊತ್ತಿಲ್ಲ ಆದರೆ ಇಲ್ಲಿ ಜಲಕ್ರೀಡೆ ಆಡಲು ಬಲು ಮಜ (4)
16. ಚಿನ್ನದ ಗಣಿ ಇರುವ ಊರು (3)
18. ಹಾಳು ಕೊಂಪೆಯಾಗಿದ್ದ ಈ ದೇವಸ್ಥಾನ ಸಮುಚ್ಚಯವನ್ನು ಈಚೆಗೆ ಜೀರ್ಣೋದ್ಧಾರ ಮಾಡಲಾಯಿತು (5)
20. ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಪ್ರಸಿದ್ದಿ ಹೊಂದಿರುವ ರಾಜಧಾನಿ ನಗರ (4)
21. ಶ್ರೀ ರಂಗನಾಥನ ದೇವಸ್ಥಾನ, ಟಿಪ್ಪೂ ಸುಲ್ತಾನನ ಕೋಟೆ ಇವುಗಳಿಗೆ ಪ್ರಸಿದ್ದಿಯಾದ ನಗರ (6)
23. ಲಾರ್ಡ್‌ ಕಾರ್ನವಾಲಿಸ್‌ ಹಾಗೊ ಟಿಪ್ಪೂ ನಡುವಿನ ಮೊದಲ ಯುದ್ದಕ್ಕೆ ಹೆಸರುವಾಸಿಯಾದ ಸ್ಥಳ ಹಾಗೆಯೇ ಟಿಪ್ಪೂ ಡ್ರಾಪ್‌ ಎಂಬ ಸ್ಥಳಕ್ಕೂ. (4)
27. ಶಿವಮೊಗ್ಗ ಜಿಲ್ಲೆ, ಜೋಗ ಜಲಪಾತ ಇರುವ ಊರು (3)
28. ಗಗನಚುಕ್ಕಿ ಮತ್ತು ಭರಚುಕ್ಕಿ ಎಂದರೆ ಯಾವ ಸಮುದ್ರ ನೆನಪಾಗುತ್ತೆ? (6)
29. ತಾಯಿ ದುರ್ಗಾ ಪರಮೇಶ್ವರಿ ನೆಲೆಸಿರುವಳಿಲ್ಲಿ (3)
31. ಹೊಯ್ಸಳರ ಕಾಲದ ನಕ್ಷತ್ರಾಕಾರದ ದೇವಸ್ಥಾನಗಳಿಗೆ ಒಂದು ಉದಾಹರಣೆ. (6)
33. ದಾವಣಗೆರೆ ಜಿಲ್ಲೆಯ ಒಂದು ನಗರ. ಇಲ್ಲಿ ಹೊನ್ನು ಸಿಗುವುದೇ? (3)
34. ಮಲಪ್ರಭ ದಂಡೆಯ ಮೇಲಿರುವ ಈ ಊರಿನಲ್ಲಿ 125ಕ್ಕೂ ಹೆಚ್ಚು ದೇವಸ್ಥಾನಗಳಿವೆ (3)
37. ಎಲ್ಲೆಲ್ಲೂ ಮರಳು.. ಹನ್ನೆರಡು ವರ್ಷಕ್ಕೊಮ್ಮೆ ಪಂಚಲಿಂಗ ದರ್ಶನ ! (4)
38. ಕರಿಕಲ್ಲು ಎಂಬ ಹೆಸರಿನ ಈ ಊರು ಉಡುಪಿಯ ಬಳಿ ಇದೆ (3)
39. ಬಂದರು ಹೊಂದಿರುವ ನಗರ (4)
40. ಸೂರ್ಯಾಸ್ತ ನೋಡ ಬೇಕೇ? ಇಲ್ಲಿ ಬನ್ನಿ (3)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X