ಲೋಕಾಯುಕ್ತ ಹೆಗಡೆಗೆ ವಿದಾಯ, ಪಾಟೀಲರಿಗೆ ಸ್ವಾಗತ

ಅವರ ಬಳಿಕ ಅಧಿಕಾರಕ್ಕೆ ಬಂದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ವ್ಯವಸ್ಥೆ ಮೂಲಕ ಭ್ರಷ್ಟಾಚಾರವನ್ನು ಬಯಲುಗೊಳಿಸಿದ್ದಾರೆ. ರಾಜ್ಯದೆಲ್ಲೆಡೆ ಸತತ ದಾಳಿ ನಡೆಸಿ ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯಲ್ಲಿ ಪಕ್ಷಬೇಧ, ಜಾತಿ ಮತಗಳ ತಾರತಮ್ಯ ಮಾಡದೇ ಭ್ರಷ್ಟರನ್ನು ನಿರ್ಭೀತಿಯಿಂದ ಪತ್ತೆ ಹಚ್ಚಿರುವ ಅವರಿಗೆ
ಕನ್ನಡಿಗರು ಕೃತಜ್ಞತೆ ಅರ್ಪಿಸಬೇಕಾಗಿದೆ.
ವಿಶೇಷವಾಗಿ ರಾಜಕಾರಣಿಗಳ ಪಾಲಿಗಂತೂ ಸಿಂಹಸ್ವಪ್ನವಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ ಹೆಚ್ಚಿನ ಅಧಿಕಾರವನ್ನುಕೊಡಬೇಕೆನ್ನುವ ಮಾತು ಮಾತಾಗಿಯೇ ಉಳಿಯಿತು. ಇದಕ್ಕೆ ಎಲ್ಲಾ ಪಕ್ಷದ ರಾಜಕಾರಣಿಗಳ ಸಹಮತವೇ ಕಾರಣವಾಗಿದ್ದು, ಯಾವ ರಾಜಕೀಯ ಪಕ್ಷಕ್ಕೂ ನೀವು ಪ್ರಬಲವಾಗುವುದು ಬೇಕಿರಲಿಲ್ಲ. ಬಹುಶಃ ಮುಂಬರುವ ಮುಖ್ಯಮಂತ್ರಿ ಕೂಡಾ ಈ ಬಗ್ಗೆ ಯೋಚಿಸುವುದನ್ನು ಊಹಿಸಲು ಸಾಧ್ಯವಿಲ್ಲ.
ಲೋಕಾಯುಕ್ತ ಒಂದು ಸಂವಿಧಾತ್ಮಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ. ಈ ಸಂಸ್ಥೆ ನೀಡುವ ವರದಿಯನ್ನು ಆಡಳಿತ ನಡೆಸುವ ಅಪರಾಧಿ ಸ್ಥಾನದಲ್ಲಿರುವವರು ಒಪ್ಪದಿರಬಹುದು. ಆದರೆ, ರಾಜ್ಯದ ಜನತೆ ಇದಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮಾನದಂಡವನ್ನಾಗಿಸಿಕೊಂಡು ರಾಷ್ಟ್ರದ ಉಚ್ಛ ನ್ಯಾಯಾಲಯಕ್ಕೂ ತಲುಪಿಸುವಂತಹ ಎಲ್ಲಾ ಅವಕಾಶಗಳು ಇರುತ್ತವೆ.
ಅಕ್ರಮ ಗಣಿಗಾರಿಕೆ ಕುರಿತ ಸಂತೋಷ್ ಹೆಗ್ಡೆ ಅವರ ವರದಿ ಎಲ್ಲರ ಕಣ್ಣು ತೆರೆಸಿದೆ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳಿಗೆ ಶಿಕ್ಷೆಯಾಗಲಿ. ಜನರಲ್ಲಿ ಭರವಸೆ, ಧೈರ್ಯ ಹುಟ್ಟಿಸುವ ಇಂಥ ನ್ಯಾಯಮೂರ್ತಿಗಳು ಇನ್ನಷ್ಟು ನಮ್ಮ ರಾಜ್ಯದಲ್ಲಿ ಬೆಳೆಯಲಿ. ಸಂತೋಷ್ ಹೆಗ್ಡೆ ಅವರ ಮುಂದಿನ ಜೀವನ ಸುಖಮಯವಾಗಿರಲಿ.
ಅಕ್ರಮ ಗಣಿ ಸಂಪೂರ್ಣ ವರದಿಗೆ ಪುಸ್ತಕ ರೂಪವನ್ನು ನೀಡಿರುವ ಲಂಕೇಶ್ ಬಳಗ ಆಗಸ್ಟ್ 2 ರಂದು ಪುಸ್ತಕವನ್ನು ಲೋಕಾರ್ಪಣೆ ಮಾಡಿದೆ. ನಾಳೆ ( ಬುಧವಾರ) ಹೊಸ ಲೋಕಾಯುಕ್ತರ ( ಶಿವರಾಜ್ ಪಾಟೀಲ್ ) ಜೊತೆಗೆ ಹೊಸ ಮುಖ್ಯಮಂತ್ರಿಯನ್ನು ( ????? ) ರಾಜ್ಯದ ಜನತೆ ಎದುರು ನೋಡುತ್ತಿದೆ.












Click it and Unblock the Notifications